»   » ದರ್ಶನ್ ಹುಟ್ಟುಹಬ್ಬಕ್ಕೆ ಈ ಬಾರಿ ಎಲ್ಲವೂ ಸ್ಪೆಷಲ್

ದರ್ಶನ್ ಹುಟ್ಟುಹಬ್ಬಕ್ಕೆ ಈ ಬಾರಿ ಎಲ್ಲವೂ ಸ್ಪೆಷಲ್

Posted By:
Subscribe to Filmibeat Kannada
ದರ್ಶನ್ ಹುಟ್ಟುಹಬ್ಬಕ್ಕೆ ಈ ಬಾರಿ ಎಲ್ಲವೂ ಸ್ಪೆಷಲ್ | Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಈ ಬಾರಿಯ ಹುಟ್ಟುಹಬ್ಬ ತುಂಬಾನೇ ಸ್ಪೆಷಲ್ ಆಗಲಿದೆ. ಒಂದು ತಿಂಗಳ ಹಿಂದೆಯಿಂದ ದರ್ಶನ್ ಹುಟ್ಟುಹಬ್ಬಕ್ಕಾಗಿ ತಯಾರಿಗಳು ಜೋರಾಗಿ ನಡೆದಿದೆ.

ದರ್ಶನ್ ಮನೆಗಳ ಮುಂದೆ ಕಟೌಟ್ ಬ್ಯಾನರ್ ಗಳು ರಾರಾಜಿಸುತ್ತಿವೆ. ಅಭಿಮಾನಿಗಳು ದರ್ಶನ್ ಅವರಿಗಾಗಿ ಕೈಗಳ ಮೇಲೆ ಟ್ಯಾಟೂಗಳನ್ನ ಹಾಕಿಸಿಕೊಳ್ಳಲು ಶುರು ಮಾಡಿದ್ದಾರೆ. ಪ್ರತಿ ಜಿಲ್ಲೆಗಳಲ್ಲಿ ದರ್ಶನ್ ಅಭಿಮಾನಿ ಸಂಘಟನೆಗಳು ಹುಟ್ಟುಹಬ್ಬದಂದು ನಾನಾ ಕಾರ್ಯಕ್ರಮಗಳನ್ನ ಹಮ್ಮಿಕೊಂಡಿದ್ದಾರೆ.

ಡಿ-ಬಾಸ್' ಅಭಿಮಾನಕ್ಕೆ ಸಿಕ್ತು ಮತ್ತೊಂದು ಹೊಸ ಬಿರುದು

ದರ್ಶನ್ ಅವರಿಗಾಗಿ ಅಭಿಮಾನಿಗಳು ಸಾಕಷ್ಟು ವರ್ಷದ ಹಿಂದೆಯೇ ಪ್ರಾರಂಭ ಮಾಡಿದ ಡಿ ಕಂಪನಿ ಫ್ಯಾನ್ಸ್ ಅಸೋಸಿಯೇಷನ್ ವತಿಯಿಂದ ಈ ಬಾರಿ ಡಿ ಉತ್ಸವ ಎಂಬ ಹೆಸರಿನಲ್ಲಿ ಹುಟ್ಟುಹಬ್ಬ ಆಚರಣೆ ಮಾಡುತ್ತಿದ್ದಾರೆ. ಇದೇ ಮೊದಲ ಬಾರಿಗೆ ಚಿತ್ರರಂಗದಲ್ಲಿ ನಟನೊಬ್ಬನ ಬರ್ತಡೇ ಉತ್ಸವದ ರೀತಿಯಲ್ಲಿ ನಡೆಯುತ್ತಿದ್ದು ಹಲವಾರು ವಿಶೇಷತೆಗಳನ್ನ ಡಿ ಉತ್ಸವದ ಮೂಲಕ ಅಭಿಮಾನಿಗಳು ಹೊತ್ತು ತರುತ್ತಿದ್ದಾರೆ. ಹಾಗಾದರೆ ಡಿ ಉತ್ಸವ ಹೇಗೆ ನೆಡಲಿದೆ? ಸಂಪೂರ್ಣ ಮಾಹಿತಿ ಇಲ್ಲಿದೆ.

ಅಭಿಮಾನಿಗಳಿಂದ ಡಿ ಉತ್ಸವ

ಇದೇ ಮೊದಲ ಬಾರಿಗೆ ಕನ್ನಡ ಸಿನಿಮಾರಂಗದಲ್ಲಿ ನಟರೊಬ್ಬರ ಹುಟ್ಟುಹಬ್ಬವನ್ನ ಉತ್ಸವದ ರೀತಿಯಲ್ಲಿ ಆಚರಣೆ ಮಾಡಲು ಸಿದ್ದತೆ ಮಾಡಿಕೊಳ್ಳಲಾಗಿದೆ. ರಾಜ್ಯದ ಎಲ್ಲಾ ಅಭಿಮಾನಿ ಸಂಘಟನೆಗಳು ಡಿ ಉತ್ಸವದಲ್ಲಿ ಭಾಗಿ ಆಗಲಿದ್ದಾರೆ.

ಡಿ ಉತ್ಸವದ ಪೋಸ್ಟರ್ ಬಿಡುಗಡೆ

ಡಿ ಉತ್ಸವದ ಆಯೋಜನೆಯನ್ನ ಡಿ ಕಂಪನಿ ಫ್ಯಾನ್ಸ್ ಅಸೋಸಿಯೇಷನ್ ವಹಿಸಿಕೊಂಡಿದೆ. ಡಿ ಉತ್ಸವಕ್ಕಾಗಿ ದರ್ಶನ್ ಅವರ ವಿಭಿನ್ನವಾದ ಪೋಸ್ಟರ್ ಬಿಡುಗಡೆ ಮಾಡಲು ಸಿದ್ದತೆ ಮಾಡಿಕೊಳ್ಳಲಾಗಿದೆ.

ಹುಟ್ಟುಹಬ್ಬಕ್ಕಾಗಿ ಡ್ರಸ್ ಕೋಡ್

ದರ್ಶನ್ ಹುಟ್ಟುಹಬ್ಬ ತುಂಬಾ ಸಂಭ್ರಮದಿಂದ ನಡೆಸುವುದರ ಜೊತೆಯಲ್ಲಿ ಶಿಸ್ತು ಪಾಲಿಸುವುದು ಅಭಿಮಾನಿಗಳ ಉದ್ದೇಶ. ದರ್ಶನ್ ಅಭಿಮಾನಿಗಳು ಒಂದೇ ಡ್ರಸ್ ಕೋಡ್ ನಲ್ಲಿ ಹುಟ್ಟುಹಬ್ಬದಂದು ಕಾಣಿಸಿಕೊಳ್ಳಲಿದ್ದಾರೆ.

ಹೊಸ ಬಿರುದು ಪಡೆದುಕೊಂಡ ದರ್ಶನ್

ಸಿನಿ ಬದುಕಿನಲ್ಲಿ 50 ಚಿತ್ರಗಳನ್ನ ಪೂರೈಸಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಈಗ ಹೊಸ ಬಿರುದು ನೀಡಲಾಗುತ್ತಿದೆ. ದರ್ಶನ್ ಗೆ ಕಲೆಗೆ ಬೆಲೆ ನೀಡುತ್ತಿರುವ ಫ್ಯಾನ್ಸ್ 'ಕಲಾ ಸಾರ್ವಭೌಮ' ಎಂದು ಕರೆಯಲು ನಿರ್ಧರಿಸಿದ್ದಾರೆ. ಗಿರಿನಗರದ ಕರುನಾಡ ಕಲಾದೀಪ ದರ್ಶನ್ ತೂಗುದೀಪ ಅಭಿಮಾನಿಗಳ ಸಂಘ, 'ಕಲಾ ಸಾರ್ವಭೌಮ' ಎಂಬ ಬಿರುದು ನೀಡಿ ಸನ್ಮಾನಿಸಲು ನಿರ್ಧರಿಸಿದೆ.

English summary
Kannada actor Challenging star Darshan's birthday is very special this year. In the name of D Utsava all kinds of preparation for birthday celebration are being made by fans .

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada