»   » 'ಚಕ್ರವರ್ತಿ' ದರ್ಶನ್ ಬಗ್ಗೆ ಹರಿದಾಡಿದ್ದು ಸುಳ್ಳು ಸುದ್ದಿ.! ಅದನ್ನ ನಂಬಬೇಡಿ.!

'ಚಕ್ರವರ್ತಿ' ದರ್ಶನ್ ಬಗ್ಗೆ ಹರಿದಾಡಿದ್ದು ಸುಳ್ಳು ಸುದ್ದಿ.! ಅದನ್ನ ನಂಬಬೇಡಿ.!

Posted By:
Subscribe to Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಚಕ್ರವರ್ತಿ' ಚಿತ್ರದ ಬಗ್ಗೆ ಹರಿಡಾಡುತ್ತಿರುವ ಸುದ್ದಿಗಳು ಒಂದಾ ಎರಡಾ.?!

'ಚಕ್ರವರ್ತಿ' ಚಿತ್ರದಲ್ಲಿ ರಾಕಿಂಗ್ ಸ್ಟಾರ್ ಯಶ್ ಕಾಣಿಸಿಕೊಳ್ಳುತ್ತಾರೆ ಎಂಬ ಗಾಸಿಪ್ ಹುಟ್ಟುಹಾಕಿದವರು ಯಾರೋ ಗೊತ್ತಿಲ್ಲ. ಆದ್ರೆ, ಊರು ತುಂಬಾ ಸೌಂಡ್ ಮಾಡಿದ್ಮೇಲೆ 'ಚಕ್ರವರ್ತಿ' ಚಿತ್ರದಲ್ಲಿ ಆಕ್ಟ್ ಮಾಡಿರುವುದು ಯಶ್ ಅಲ್ಲ ಯಶಸ್ ಸೂರ್ಯ ಎಂಬುದು ಪಕ್ಕಾ ಆಯ್ತು.


ಈಗ 'ಚಕ್ರವರ್ತಿ' ಚಿತ್ರದ ಬಿಡುಗಡೆ ಬಗ್ಗೆ ಅಂಥದ್ದೇ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅದೆಲ್ಲವೂ ಸುಳ್ಳು ಎಂಬುದು ಈಗ ಬಯಲಾಗಿದೆ.


'ಚಕ್ರವರ್ತಿ' ಚಿತ್ರದ ಬಗ್ಗೆ ಹೊಸ ನ್ಯೂಸ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ದೀಪಾ ಸನ್ನಿಧಿ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ 'ಚಕ್ರವರ್ತಿ' ಚಿತ್ರದ ಬಿಡುಗಡೆ ದಿನಾಂಕದ ಬಗ್ಗೆ ಹೊಸ ಸುದ್ದಿ ಹರಿದಾಡುತ್ತಿದೆ. ಅದು ಏನಪ್ಪಾ ಅಂದ್ರೆ...


ಪುನೀತ್ ರಾಜ್ ಕುಮಾರ್ ಹುಟ್ಟುಹಬ್ಬಕ್ಕೆ ಬರುತ್ತಂತೆ 'ಚಕ್ರವರ್ತಿ'!

ಮಾರ್ಚ್ 17... ಅಂದ್ರೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರ ಜನ್ಮದಿನದಂದು 'ಚಕ್ರವರ್ತಿ' ಸಿನಿಮಾ ಬಿಡುಗಡೆ ಆಗಲಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಕಾಡ್ಗಿಚ್ಚಿನಂತೆ ಹಬ್ಬಿತ್ತು. [ನಿಮ್ಮನ್ನೆಲ್ಲ ನಿಬ್ಬೆರಗಾಗಿಸುವ ನ್ಯೂಸ್ ಇದು.! ಅದು ದರ್ಶನ್ ಕುರಿತು.!]


ಎಲ್ಲವೂ ಸುಳ್ಳು

ವಾಸ್ತವ ಏನಂದ್ರೆ, ಮಾರ್ಚ್ 17 ರಂದು 'ಚಕ್ರವರ್ತಿ' ಸಿನಿಮಾ ಬಿಡುಗಡೆ ಆಗುತ್ತಿಲ್ಲ. ಇದೆಲ್ಲವೂ ಅಪ್ಪಟ ಸುಳ್ಳು ಸುದ್ದಿ. [ದರ್ಶನ್ ಮತ್ತು ಯಶ್ ಬಗ್ಗೆ ಸುಮ್ಮನೆ ಗಾಳಿಸುದ್ದಿ ಹಬ್ಬಿಸಬೇಡಿ.! ಅದೆಲ್ಲವೂ ಸುಳ್ಳು.!]


ಹಾಗಾದ್ರೆ, 'ಚಕ್ರವರ್ತಿ' ಬಿಡುಗಡೆ ಯಾವಾಗ.?

'ಚಕ್ರವರ್ತಿ' ಚಿತ್ರದ ಬಿಡುಗಡೆ ದಿನಾಂಕ ಇನ್ನೂ ನಿಗದಿ ಆಗಿಲ್ಲ. 'ಚಕ್ರವರ್ತಿ' ಚಿತ್ರದ ಅಫೀಶಿಯಲ್ ಟ್ರೈಲರ್ ಬಿಡುಗಡೆ ಆದ ನಂತರ ರಿಲೀಸ್ ಡೇಟ್ ಅನೌನ್ಸ್ ಮಾಡುವುದಾಗಿ ಚಿತ್ರತಂಡ ಹೇಳಿಕೊಂಡಿದೆ.


ಟೀಸರ್ ಗಳಿಗೆ ಸಿಕ್ಕಿದೆ ಭರ್ಜರಿ ರೆಸ್ಪಾನ್ಸ್

ಈಗಾಗಲೇ ಬಿಡುಗಡೆ ಆಗಿರುವ 'ಚಕ್ರವರ್ತಿ' ಚಿತ್ರದ ಟೀಸರ್ ಗಳಿಗೆ ಸಾಮಾಜಿಕ ಜಾಲತಾಣಗಳಲ್ಲಿ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. 'ಚಕ್ರವರ್ತಿ' ಬಿಡುಗಡೆ ಆಗುವುದಕ್ಕೆ 'ಡಿ' ಬಾಸ್ ಫ್ಯಾನ್ಸ್ ತುದಿಗಾಲಿನಲ್ಲಿ ನಿಂತು ಕಾಯುತ್ತಿದ್ದಾರೆ.


'ಚಕ್ರವರ್ತಿ' ಚಿತ್ರದ ಕುರಿತು

ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ದೀಪಾ ಸನ್ನಿಧಿ ಅಭಿನಯದ ಚಿತ್ರ 'ಚಕ್ರವರ್ತಿ'. ಈ ಚಿತ್ರದಲ್ಲಿ ಕುಮಾರ್ ಬಂಗಾರಪ್ಪ, ಆದಿತ್ಯ, ಯಶಸ್ ಸೂರ್ಯ, ದಿನಕರ್ ತೂಗುದೀಪ ಸೇರಿದಂತೆ ದೊಡ್ಡ ಕಲಾವಿದರ ಬಳಗ ಇದೆ. ಈ ಚಿತ್ರಕ್ಕೆ ಚಿಂತನ್ ಆಕ್ಷನ್ ಕಟ್ ಹೇಳಿದ್ದಾರೆ.


English summary
Challenging Star Darshan starrer 'Chakravarthy' is not releasing on March 17th. 'Chakravarthy' release date is not announced yet.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada