»   » ಹೀರೋ ಆಗಲು ಸಜ್ಜಾದ ದರ್ಶನ್ ಸಂಬಂಧಿಯ ಲುಕ್ ಟೆಸ್ಟ್ ನೋಡಿ

ಹೀರೋ ಆಗಲು ಸಜ್ಜಾದ ದರ್ಶನ್ ಸಂಬಂಧಿಯ ಲುಕ್ ಟೆಸ್ಟ್ ನೋಡಿ

Posted By:
Subscribe to Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಹೋದರ ಸಂಬಂಧಿ ನಾಯಕನಾಗಲು ಎಲ್ಲಾ ರೀತಿಯ ತಯಾರಿ ಆಗಿದೆ. ರನ್ ಆಂಟನಿ ಸಿನಿಮಾದ ನಿರ್ದೇಶಕ ರಘುಶಾಸ್ರ್ತಿ ಚಿತ್ರವನ್ನ ನಿರ್ದೇಶನ ಮಾಡುವುದು ಕನ್ಫರ್ಮ್ ಆಗಿದೆ. ಈಗಾಗ್ಲೆ ದರ್ಶನ್ ಚಿತ್ರದಲ್ಲಿ ಅಭಿನಯಿಸಿರುವ ಮನೋಜ್ ಈ ಬಾರಿ ಆಕ್ಷನ್ ಹೀರೋ ಆಗಿ ಚಿತ್ರರಂಗಕ್ಕೆ ಎಂಟ್ರಿ ಕೊಡಲಿದ್ದಾರೆ.

ಇದೇ ತಿಂಗಳ (ಜನವರಿ) 24 ರಂದು ಚಿತ್ರದ ಮಹೂರ್ತ ನಡೆಯಲಿದ್ದು ಚಿತ್ರದಲ್ಲಿ ಇಬ್ಬರು ಸ್ಟಾರ್ ನಾಯಕ ಮತ್ತು ನಾಯಕಿಯರ ಗೆಸ್ಟ್ ಅಪೀರಿಯನ್ಸ್ ಇರಲಿದೆ ಅಂತೆ. ಆನ್ ಸ್ಕ್ರೀನ್ ಮನೋಜ್ ಲುಕ್ ಹೇಗಿದೆ ಅನ್ನುವುದನ್ನ ತಿಳಿಯಲು ಟೆಸ್ಟ್ ಫೋಟೋ ಶೂಟ್ ನಡೆದಿದ್ದು ಸದ್ಯ ಮನೋಜ್ ಅವರ ಹೊಸ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

Darshan's cousin Manoj starrer movie will be set on January 24th

50ರ ನಂತರ ಬದಲಾದ ಚಾಲೆಂಜಿಂಗ್ ಸ್ಟಾರ್ ದರ್ಶನ್

ಕನ್ನಡ ಸಿನಿಮಾರಂಗದ ಸಂಗೀತ ನಿರ್ದೇಶಕ ಹಾಗೂ ಫೋಟೋಗ್ರಾಫರ್ ಅಭಿಷೇಕ್ ಮನೋಜ್ ಅವರ ಕೆಲವು ಫೋಟೋಗಳನ್ನ ಕ್ಲಿಕ್ ಮಾಡಿದ್ದು ಕೆಲವೇ ದಿನಗಳಲ್ಲಿ ಅಧಿಕೃತವಾಗಿ ಚಿತ್ರತಂಡ ಫೋಟೋಶೂಟ್ ಮಾಡಲಿದೆ. ಕರ್ಮ್ ಚಾವ್ಲಾ ಚಿತ್ರಕ್ಕೆ ಕ್ಯಾಮೆರಾ ವರ್ಕ್ ಮಾಡಲಿದ್ದು ಮಣಿಕಾಂತ್ ಕದ್ರಿ ಅಥವಾ ಚರಣ್ ರಾಜ್ ಸಂಗೀತ ನಿರ್ದೇಶಿಸಲಿದ್ದಾರೆ.ಡಿಫ್ರೆಂಟ್ ಡ್ಯಾನಿ ಮತ್ತು ಮಾಸ್ ಮಾದ ಚಿತ್ರಕ್ಕೆ ಸ್ಟಂಟ್ ಡೈರೆಕ್ಟರ್ ಆಗಿ ಕಾರ್ಯ ನಿರ್ವಹಿಸಲಿದ್ದಾರೆ.

Darshan's cousin Manoj starrer movie will be set on January 24th

ಸಸ್ಪೆನ್ಸ್ ಥ್ರಿಲ್ಲರ್ ಚಿತ್ರವನ್ನ ನಿರ್ದೇಶನ ಮಾಡಿದ್ದ ರಘುಶಾಸ್ತ್ರಿ ಮನೋಜ್ ಅವರಿಗಾಗಿ ಮಾಸ್ ಸ್ಟೋರಿ ಇರುವ ಕಥೆಯನ್ನ ಎಣೆದಿದ್ದಾರೆ. ಚಿತ್ರಕ್ಕೆ ಹುಲಿರಾಯ ಸಿನಿಮಾ ಖ್ಯಾತಿಯ ನಿರ್ಮಾಪಕ ನಾಗೇಶ್ ಬಂಡವಾಳ ಹಾಕಲಿದ್ದಾರೆ. ಸದ್ಯ ನಾಯಕಿಯ ಹುಡುಕಾಟದಲ್ಲಿ ಚಿತ್ರತಂಡ ಬ್ಯುಸಿ ಆಗಿದ್ದು ಇನ್ನ ಕೆಲವೇ ದಿನಗಳಲ್ಲಿ ಚಿತ್ರದ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನೀಡಲಿದ್ದಾರೆ.

English summary
Kannada actor Darshan's cousin Manoj starrer movie will be set on January 24th, director already done Photo shot for Manoj look test.Raghu Shastri directed the movie
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada