For Quick Alerts
  ALLOW NOTIFICATIONS  
  For Daily Alerts

  'ತೂಗುದೀಪ' ಕುಟುಂಬದಿಂದ ಮತ್ತೋರ್ವ ಹೀರೋ ಚಿತ್ರರಂಗಕ್ಕೆ.!

  By Pavithra
  |
  ತೂಗುದೀಪ ಕುಟುಂಬದಿಂದ ಮತ್ತೊಬ್ಬ ಸದಸ್ಯ ಹೀರೋ ಆಗಿ ಎಂಟ್ರಿ | Filmibeat Kannada

  ಹಿರಿಯ ನಟರ ಕುಟುಂಬದಿಂದ ಚಿತ್ರರಂಗಕ್ಕೆ ಕಲಾವಿದರುಗಳು ಎಂಟ್ರಿ ಕೊಡುತ್ತಲೇ ಇರುತ್ತಾರೆ. ಅದೇ ರೀತಿ ನಟ ತೂಗುದೀಪ ಶ್ರೀನಿವಾಸ್ ಕುಟುಂಬದಿಂದ ಈಗಾಗಲೇ ಮೂರು ಕಲಾವಿದರು ಚಿತ್ರರಂಗದಲ್ಲಿ ತಮ್ಮ ಅಭಿನಯದ ಮೂಲಕ ಸೇವೆ ಸಲ್ಲಿಸುತ್ತಿದ್ದಾರೆ. ಅದೇ ಹಾದಿಯಲ್ಲಿ ಇದೀಗ ಮತ್ತೊಬ್ಬ ನಟ ಸಿನಿಮಾ ಜರ್ನಿ ಪ್ರಾರಂಭ ಮಾಡೋದಕ್ಕೆ ಸಿದ್ದತೆ ನಡೆಸಿದ್ದಾರೆ.

  ಸದ್ಯ ತೂಗುದೀಪ ಕುಟುಂಬದಿಂದ ಚಿತ್ರರಂಗಕ್ಕೆ ಎಂಟ್ರಿಕೊಡುತ್ತಿರುವ ಕಲಾವಿದ ಮನೋಜ್.! ದರ್ಶನ್ ಜೊತೆ ಅನೇಕ ಸಿನಿಮಾಗಳಲ್ಲಿ ಅಭಿನಯಿಸಿರುವ ಮನೋಜ್ ಸಿನಿಮಾರಂಗದಲ್ಲಿ ನಾಯಕನಾಗಿ ಅಭಿನಯಿಸೋದಕ್ಕೆ ತಯಾರಿ ಮಾಡಿಕೊಳ್ತಿದ್ದಾರೆ. ಮುಂದೆ ಓದಿರಿ....

  ಚೊಚ್ಚಲ ಚಿತ್ರಕ್ಕೆ ತಯಾರಿ

  ಚೊಚ್ಚಲ ಚಿತ್ರಕ್ಕೆ ತಯಾರಿ

  ದರ್ಶನ್ ಜೊತೆಯಲ್ಲಿ ಈಗಾಗಲೆ 'ಚಕ್ರವರ್ತಿ' ಹಾಗೂ 'ಅಂಬರೀಶ' ಸಿನಿಮಾಗಳಲ್ಲಿ ಕಾಣಿಸಿಕೊಂಡಿರುವ ಮನೋಜ್ ಸದ್ಯ ಕನ್ನಡ ಸಿನಿಮಾರಂಗಕ್ಕೆ ನಾಯಕನಾಗಿ ಪರಿಚಯವಾಗಲಿದ್ದಾರೆ

  ಮಾಸ್ ಫೀಲ್ ಕೊಡುವ ನಾಯಕ

  ಮಾಸ್ ಫೀಲ್ ಕೊಡುವ ನಾಯಕ

  ಮನೋಜ್ ಕೂಡ ದರ್ಶನ್ ರಷ್ಟೇ ಹೈಟ್ ಇರುವ ಕಲಾವಿದ. ಈಗಾಗಲೇ ಮನು ಚಿತ್ರರಂಗದಲ್ಲಿ ಯಶಸ್ಸು ಕಾಣುವ ಎಲ್ಲಾ ಭರವಸೆ ಹುಟ್ಟಿಕೊಂಡಿದೆ. ಅಭಿನಯಿಸಿರುವ ಎರಡು ಸಿನಿಮಾಗಳಲ್ಲಿ ಮಾಸ್ ಫೀಲ್ ಕೊಡುವ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಆದ್ದರಿಂದ ಆಕ್ಷನ್ ಸಿನಿಮಾ ಮೂಲಕ ಚಿತ್ರರಂಗಕ್ಕೆ ಬರುವ ಸಾಧ್ಯತೆಗಳಿವೆ.

  ದರ್ಶನ್ ಸೋದರ ಸಂಬಂಧಿ

  ದರ್ಶನ್ ಸೋದರ ಸಂಬಂಧಿ

  ಮನೋಜ್, ದರ್ಶನ್ ಅವ್ರ ಸಹೋದರ ಸಂಬಂಧಿ. ಸದ್ಯ ಕೇಳಿ ಬರುತ್ತಿರುವ ಸುದ್ಧಿಯಂತೆ, ಅರವಿಂದ್ ಕೌಶಿಕ್ ನಿರ್ದೇಶನದ ಚಿತ್ರದಲ್ಲಿ ಮನೋಜ್ ನಾಯಕನಾಗಿ ಅಭಿನಯಿಸುತ್ತಾರೆ ಎನ್ನುವ ಸುದ್ದಿ ಹರಿದಾಡ್ತಿದೆ.

  ಚಿತ್ರರಂಗಕ್ಕೆ ಮತ್ತೊಬ್ಬ ಮಾಸ್ ಹೀರೋ

  ಚಿತ್ರರಂಗಕ್ಕೆ ಮತ್ತೊಬ್ಬ ಮಾಸ್ ಹೀರೋ

  ಒಟ್ಟಾರೆ ಕನ್ನಡ ಸಿನಿಮಾ ರಂಗಕ್ಕೆ ಮತ್ತೊಬ್ಬ ಮಾಸ್ ಹೀರೋ ಎಂಟ್ರಿ ಆಗ್ತಿದೆ. ಈ ಮೂಲಕ ದರ್ಶನ್, ದಿನಕರ್, ವಿನೀಶ್ ಸಾಲಿನಲ್ಲಿ ಮನೋಜ್ ಕೂಡ ಸೇರಲಿದ್ದಾರೆ. ತೂಗುದೀಪ ಕುಟುಂಬದಿಂದ ಕಲಾ ಸೇವೆ ಸಲ್ಲಿಸುವುದಕ್ಕೆ ಮತ್ತೊಬ್ಬ ಕಲಾವಿದ ಚಿತ್ರರಂಗಕ್ಕೆ ಬರ್ತಿದ್ದಾರೆ.

  English summary
  Darshan's cousin Manoj to start his debut movie as a hero in Kannada film industry.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X