ಕಾಲೇಜಿನಲ್ಲೂ ರಾರಾಜಿಸುತ್ತಿದೆ ಡಿ-ಬಾಸ್ ಕಟೌಟ್
Recommended Video
ಸಿನಿಮಾ ಥಿಯೇಟರ್ ಮುಂದೆ ಸಿನಿಮಾ ಸ್ಟಾರ್ ಗಳ ಕಟೌಟ್ ನಿಲ್ಲಿಸುವುದು ಸಾಮಾನ್ಯ. ಸ್ಟಾರ್ ಗಳ ಹುಟ್ಟುಹಬ್ಬಕ್ಕೆ ಅವರ ಮನೆ ಮುಂದೆನೋ ಅಥವಾ ಏರಿಯಾ ಸರ್ಕಲ್ ನಲ್ಲೋ ಕಟೌಟ್ ಹಾಕುವುದು ನೋಡಿದ್ದಿವಿ. ಆದ್ರೆ, ಶಾಲಾ-ಕಾಲೇಜ್ ಗಳಲ್ಲಿ ಚಿತ್ರ ನಟರ ಕಟೌಟ್ ಹಾಕಿದ್ದು ಅಪರೂಪ.
ಇದೀಗ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಕಟೌಟ್ ಕಾಲೇಜ್ ಒಂದರಲ್ಲಿ ರಾರಾಜಿಸುತ್ತಿದೆ. ಇದು ಯಾವ ಕಾರಣಕ್ಕೆ ಎಂಬ ಸ್ಪಷ್ಟ ಮಾಹಿತಿ ಇಲ್ಲ. ಆದ್ರೆ, ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ.
ದರ್ಶನ್ ಯುನಿವರ್ಸ್ ಎಂಬ ಟ್ವಿಟ್ಟರ್ ಖಾತೆಯಲ್ಲಿ ಈ ವಿಡಿಯೋ ಪೋಸ್ಟ್ ಆಗಿದ್ದು, ನಾಳೆ ಡಿ ಬಾಸ್ ದರ್ಶನ್ ಆಗಮಿಸುತ್ತಿದ್ದಾರೆ ಎಂದು ಬರೆದುಕೊಂಡಿದ್ದಾರೆ. ಯಾವ ಕಾಲೇಜು, ಯಾವಾಗ ದರ್ಶನ್ ಬರ್ತಾರೆ, ಏಕೆ ಬರ್ತಾರೆ ಎಂಬುದರ ಬಗ್ಗೆ ವಿವರಣೆ ಇಲ್ಲ.

ಆದ್ರೆ, ದರ್ಶನ್ ಅವರ ಹವಾ, ಅಭಿಮಾನ ಎಷ್ಟು ದೊಡ್ಡದು ಎನ್ನುವುದಕ್ಕೆ ಇದೊಂದು ಉದಾಹರಣೆ. ಸದ್ಯ ದರ್ಶನ್ ಅವರು ಒಡೆಯ ಸಿನಿಮಾದ ಶೂಟಿಂಗ್ ಮುಗಿಸಿ ರಾಬರ್ಟ್ ಚಿತ್ರಕ್ಕೆ ಸಜ್ಜಾಗುತ್ತಿದ್ದಾರೆ. ಅದಾದ ಬಳಿಕ ಗಂಡುಗಲಿ ಮದಕರಿ ನಾಯಕ ಸಿನಿಮಾ ಮಾಡಲಿದ್ದಾರೆ.


Click it and Unblock the Notifications











