'ಡೆವಿಲ್' ಎಷ್ಟು ಸ್ಕ್ರೀನ್‌ಗಳಲ್ಲಿ ರಿಲೀಸ್? ಪ್ರೀಮಿಯರ್ ಶೋ, ಮಿಡ್‌ನೈಟ್ ಶೋ ಇರುತ್ತಾ? ಅಡ್ವಾನ್ಸ್ ಬುಕ್ಕಿಂಗ್ ಯಾವಾಗ?
ದರ್ಶನ್ ನಟನೆಯ 'ಡೆವಿಲ್' ಸಿನಿಮಾ ಒಂದು ದಿನ ಮುನ್ನ ಪ್ರೇಕ್ಷಕರ ಮುಂದೆ ಬರ್ತಿದೆ. ಅಭಿಮಾನಿಗಳ ಒತ್ತಾಯದ ಮೇರೆಗೆ ಚಿತ್ರವನ್ನು ಡಿಸೆಂಬರ್ 12ರ ಬದಲು 11ರಂದು ಬಿಡುಗಡೆ ಮಾಡುವುದಾಗಿ ಚಿತ್ರತಂಡ ಘೋಷಿಸಿದೆ. ಬಹಳ ದೊಡ್ಡಮಟ್ಟದಲ್ಲಿ ಸಿನಿಮಾ ರಿಲೀಸ್ ಪ್ಲ್ಯಾನ್ ನಡೀತಿದೆ.
ಪ್ರಕಾಶ್ ವೀರ್ ಸ್ವತಃ 'ಡೆವಿಲ್' ಚಿತ್ರವನ್ನು ನಿರ್ಮಾಣ ಮಾಡಿದೆ. ಸಿನಿಮಾ ಬಿಡುಗಡೆಗೆ ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ಬೆಂಬಲವಾಗಿ ನಿಂತಿದೆ ಎನ್ನುವ ಮಾತುಗಳು ಕೇಳಿಬರ್ತಿದೆ. ಕ್ರಿಸ್‌ಮಸ್ ಸಂಭ್ರಮದಲ್ಲಿ ಸುದೀಪ್ ನಟನೆಯ ಮಾರ್ಕ್ ಹಾಗೂ ಅರ್ಜುನ್ ಜನ್ಯಾ ನಿರ್ದೇಶನದ '45' ಸಿನಿಮಾಗಳು ಬಿಡುಗಡೆ ಆಗಲಿವೆ. ಹಾಗಾಗಿ ಹೆಚ್ಚು ಸ್ಕ್ರೀನ್‌ಗಳಲ್ಲಿ ಸಿನಿಮಾ ಬಿಡುಗಡೆ ಮಾಡಿ ಎರಡು ವಾರದಲ್ಲಿ ಹೆಚ್ಚು ಕಲೆಕ್ಷನ್ ಮಾಡುವ ಲೆಕ್ಕಾಚಾರ ಶುರುವಾಗಿದೆ.

ಕರ್ನಾಟಕದಲ್ಲಿ ದರ್ಶನ್ ಸಿನಿಮಾಗಳಿಗೆ ದೊಡ್ಡ ಮಾರ್ಕೆಟ್ ಇದೆ. ರಾಜ್ಯದ ಮೂಲೆ ಮೂಲೆಯಲ್ಲಿ ಅವರ ಸಿನಿಮಾಗಳು ಸದ್ದು ಮಾಡುತ್ತವೆ. 300ಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ ಸಿನಿಮಾ ಬಿಡುಗಡೆ ಮಾಡಲು ಚಿತ್ರತಂಡ ಮುಂದಾಗಿದೆ ಎನ್ನಲಾಗ್ತಿದೆ. ಬೆಂಗಳೂರಿನಲ್ಲಿ ಮೊದಲ ದಿನವೇ 1000ಕ್ಕೂ ಅಧಿಕ ಶೋಗಳಲ್ಲಿ ಸಿನಿಮಾ ಪ್ರದರ್ಶನ ಕಾಣುವ ಸಾಧ್ಯತೆಯಿದೆ. ಗುರುವಾರವೇ ಸಿನಿಮಾ ಬಿಡುಗಡೆ ಮಾಡಿ 4 ದಿನಗಳ ಲಾಂಗ್ ವೀಕೆಂಡ್‌ನಲ್ಲಿ ಭರ್ಜರಿ ಗಳಿಕೆ ಲೆಕ್ಕಾಚಾರ ಶುರುವಾಗಿದೆ.
ಯಾವುದೇ ರಜೆ ಇಲ್ಲದೇ ಇದ್ದರೂ ಗುರುವಾರವೇ 'ಡೆವಿಲ್' ಸಿನಿಮಾ ಬಿಡುಗಡೆ ಮಾಡುತ್ತಿರುವುದು ಅಚ್ಚರಿ ಮೂಡಿಸಿದೆ. ಇದು ಚಿತ್ರತಂಡಕ್ಕೆ ದರ್ಶನ್ ಅಭಿಮಾನಿಗಳ ಮೇಲಿರುವ ಭರವಸೆ ಎನ್ನಲಾಗ್ತಿದೆ. ಸಂಕಷ್ಟಕ್ಕೆ ಸಿಲುಕಿರುವ ನೆಚ್ಚಿನ ನಟನ ಚಿತ್ರವನ್ನು ದೊಡ್ಡದಾಗಿ ಸ್ವಾಗತಿಸಿ ಸಂಭ್ರಮಿಸಬೇಕು ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ. ಅದಕ್ಕಾಗಿ ಭರ್ಜರಿ ತಯಾರಿ ಕೂಡ ಆರಂಭವಾಗಿದೆ. ಇತ್ತೀಚೆಗೆ ಅಭಿಮಾನಿಗಳ ಜೊತೆ ಚಿತ್ರತಂಡವೇ ಸಭೆ ನಡೆಸಿತ್ತು.

ದರ್ಶನ್ ಅನುಪಸ್ಥಿತಿಯಲ್ಲಿ ಪತ್ನಿ ವಿಜಯಲಕ್ಷ್ಮಿ ಹಾಗೂ ಸಹೋದರ ದಿನಕರ್ 'ಡೆವಿಲ್' ಚಿತ್ರತಂಡದ ಬೆನ್ನಿಗೆ ನಿಂತಿದ್ದಾರೆ. ಚಿತ್ರದ ಪ್ರಚಾರಕ್ಕೆ ಕೈ ಜೋಡಿಸುತ್ತಿದ್ದಾರೆ. ಅಭಿಮಾನಿಗಳ ಸಭೆಯಲ್ಲಿ ಕೂಡ ಇಬ್ಬರೂ ಭಾಗಿ ಆಗಿದ್ದರು. ಗುರುವಾರವೇ ಸಿನಿಮಾ ಬಿಡುಗಡೆ ಆಗುವುದರಿಂದ ಒಂದು ದಿನ ಮೊದ್ಲೆ ಪೇಯ್ಡ್ ಪ್ರೀಮಿಯರ್ ಶೋಗಳು ಇರುವುದಿಲ್ಲ ಎನ್ನಲಾಗ್ತಿದೆ. ಆದ್ರೆ ನವೆಂಬರ್ 11(ಗುರುವಾರ) ಬೆಳ್ಳಂಬೆಳಗ್ಗೆ 6 ಗಂಟೆಯಿಂದಲೇ 'ಡೆವಿಲ್' ಸಿನಿಮಾ ಪ್ರದರ್ಶನಗಳು ಆರಂಭವಾಗುವ ಸಾಧ್ಯತೆಯಿದೆ ಎಂದು ಹೇಳಲಾಗ್ತಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಸಿಗಬೇಕಿದೆ.
ಡಿಸೆಂಬರ್ 1ರಂದು 'ಡೆವಿಲ್' ಚಿತ್ರದ ಟ್ರೈಲರ್ ಲಾಂಚ್ ಆಗುವ ನಿರೀಕ್ಷೆಯಿದೆ. ನವೆಂಬರ್ 30ರಂದು ಭಾನುವಾರವೇ ರಿಲೀಸ್ ಆದರೂ ಅಚ್ಚರಿಪಡಬೇಕಿಲ್ಲ. ಇನ್ನು ನಾಲ್ಕೈದು ದಿನ ಮುನ್ನ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಓಪನ್ ಆಗುವ ಸಾಧ್ಯತೆಯಿದೆ. 13 ವರ್ಷಗಳಖ ಹಿಂದೆ ದರ್ಶನ್ ಪರಪ್ಪನ ಅಗ್ರಹರ ಜೈಲಿನಲ್ಲಿ ಇದ್ದಾಗಲೇ 'ಸಾರಥಿ' ಸಿನಿಮಾ ತೆರೆಕಂಡು ಗೆದ್ದಿತ್ತು. ಈ ಬಾರಿ ಅದೇ ಪುನರಾವರ್ತನೆ ಆಗುತ್ತಾ ಕಾದು ನೋಡಬೇಕಿದೆ.
ರಚನಾ ರೈ ಚಿತ್ರದಲ್ಲಿ ದರ್ಶನ್ ಜೋಡಿಯಾಗಿ ನಟಿಸಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತದಲ್ಲಿ 3 ಹಾಡುಗಳು ರಿಲೀಸ್ ಆಗಿದೆ. ಇನ್ನೊಂದು ಹಾಡನ್ನು ಡಿಸೆಂಬರ್ 7ರ ವೇಳೆಗೆ ಬಿಡುಗಡೆ ಮಾಡುವ ಸಾಧ್ಯತೆಯಿದೆ. ಸುಧಾಕರ್ ರಾಜ್ ಛಾಯಾಗ್ರಹಣ, ಕಾಂತರಾಜ್ ಸಂಭಾಷಣೆ 'ಡೆವಿಲ್' ಚಿತ್ರಕ್ಕಿದೆ. ಮೈಸೂರು, ಉದಯ್‌ಪುರ್ ಹಾಗೂ ಬ್ಯಾಂಕಾಕ್‌ನಲ್ಲಿ ಚಿತ್ರವನ್ನು ಚಿತ್ರೀಕರಿಸಲಾಗಿದೆ.
ಸಂತು ಮಾಸ್ಟರ್ ಕೊರಿಯೋಗ್ರಫಿಯಲ್ಲಿ 'ಡೆವಿಲ್' ಚಿತ್ರದ ಹಾಡುಗಳು ಮೂಡಿ ಬಂದಿದೆ. ಬಹಳ ಅದ್ಧೂರಿಯಾಗಿ ಸಿನಿಮಾ ನಿರ್ಮಾಣವಾಗಿದೆ. ದರ್ಶನ್ ನಟಿಸಿದ ಕೊನೆಯ ಸಿನಿಮಾ 'ಕಾಟೇರ' ಬಾಕ್ಸಾಫೀಸ್ ಶೇಕ್ ಮಾಡಿತ್ತು. ಆ ದಾಖಲೆಯನ್ನು 'ಡೆವಿಲ್' ಮುರಿದು ಮುನ್ನುಗ್ಗುವ ಲೆಕ್ಕಾಚಾರ ಶುರುವಾಗಿದೆ.


Click it and Unblock the Notifications











