ದರ್ಶನ್ 'ಡೆವಿಲ್' ಸಿನಿಮಾ ರಿವ್ಯೂ ಮಾಡಂಗಿಲ್ಲ, ರೇಟಿಂಗ್ ಕೊಡಂಗಿಲ್ಲ; ನ್ಯಾಯಾಲಯದ ಆದೇಶ

ದರ್ಶನ್ ನಟನೆಯ 'ಡೆವಿಲ್' ಸಿನಿಮಾ ಬಿಡುಗಡೆಯಾಗಿ ಒಳ್ಳೆ ರೆಸ್ಪಾನ್ಸ್ ಪಡೆದುಕೊಳ್ತಿದೆ. ಅಭಿಮಾನಿಗಳಿಗೆ ಸಿನಿಮಾ ಇಷ್ಟವಾಗಿದೆ. ದೊಡ್ಡಮಟ್ಟದಲ್ಲಿ ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡುವ ಸುಳಿವು ಸಿಕ್ತಿದೆ. ವಿಜಯಲಕ್ಷ್ಮಿ ದರ್ಶನ್, ದಿನಕರ್ ತೂಗುದೀಪ, ಧನ್ವೀರ್ ಕೂಡ ಅಭಿಮಾನಿಗಳ ಜೊತೆ ಸಿನಿಮಾ ವೀಕ್ಷಿಸಿದ್ದಾರೆ.

ಪ್ರಕಾಶ್ ನಿರ್ಮಿಸಿ ನಿರ್ದೇಶನ ಮಾಡಿರುವ ಸಿನಿಮಾ 'ಡೆವಿಲ್'. ರಾಜ್ಯಾದ್ಯಂತ ದೊಡ್ಡಮಟ್ಟದಲ್ಲಿ ಸಿನಿಮಾ ಬಿಡುಗಡೆಯಾಗಿದೆ. ಅಭಿಮಾನಿಗಳು ಹಬ್ಬದ ರೀತಿ ಸಂಭ್ರಮಾಚರಣೆ ಮಾಡಿ ಚಿತ್ರವನ್ನು ಸ್ವಾಗತಿಸಿದ್ದಾರೆ. ಅಡ್ವಾನ್ಸ್ ಬುಕ್ಕಿಂಗ್‌ನಿಂದಲೇ ಸಿನಿಮಾ 7 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿದೆ. ಇದೆಲ್ಲದರ ನಡುವೆ ಚಿತ್ರಕ್ಕೆ ಡ್ಯಾಮೇಜ್ ಕಂಟ್ರೋಲ್ ಮಾಡಲು ಚಿತ್ರತಂಡ ಕೋರ್ಟ್‌ನಿಂದ ಸ್ಟೇ ತಂದಿದೆ.

ಸಾಕಷ್ಟು ಜನ ಈಗ ಬುಕ್‌ಮೈ ಶೋನಲ್ಲಿ ಟಿಕೆಟ್ ಖರೀದಿಸಿ ಸಿನಿಮಾ ವೀಕ್ಷಿಸುತ್ತಾರೆ. ಹೀಗೆ ಸಿನಿಮಾ ವೀಕ್ಷಿಸಿದವರು ಅಲ್ಲೇ ರಿವ್ಯೂ ಹಾಗೂ ರೇಟಿಂಗ್ ನೀಡುತ್ತಾರೆ. ಇದು ಸಿನಿಮಾ ಫಲಿತಾಂಶದ ಮೇಲೆ ಪರಿಣಾಮ ಬೀರುತ್ತದೆ. ಇದೇ ರಿವ್ಯೂ ಹಾಗೂ ರೇಟಿಂಗ್ ನೋಡಿ ಸಾಕಷ್ಟು ದಿನ ಸಿನಿಮಾ ನೋಡಲು ಟಿಕೆಟ್ ಬುಕ್ ಮಾಡುತ್ತಾರೆ. ಆದರೆ 'ಡೆವಿಲ್' ಸಿನಿಮಾ ಬಗ್ಗೆ ರಿವ್ಯೂ ನೀಡಿ ರೇಟಿಂಗ್ ಕೊಡದಂತೆ ಚಿತ್ರತಂಡ ನ್ಯಾಯಾಲಯದ ಮೆಟ್ಟಿಲೇರಿದೆ.

ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಬುಕ್‌ಮೈ ಶೋನಲ್ಲಿ ರಿವ್ಯೂ, ರೇಟಿಂಗ್ ನೀಡಲು ಅವಕಾಶವಿಲ್ಲ ಎಂದು ತೋರಿಸುತ್ತಿದೆ. ಇದು ಸಹಜವಾಗಿಯೇ ಎಲ್ಲರಿಗೂ ಅಚ್ಚರಿ ಮೂಡಿದೆ. ಇದೇ ಮೊದಲ ಬಾರಿಗೆ ಚಿತ್ರತಂಡವೊಂದು ಇಂತಹ ನಿರ್ಧಾರ ಕೈಗೊಂಡಿದೆ ಎನ್ನಲಾಗ್ತಿದೆ. ಕೆಲವರು ಬೇಕೆಂದೆ ಟಿಕೆಟ್ ಬುಕ್ ಮಾಡಿ ಸಿನಿಮಾ ಬಗ್ಗೆ ಉದ್ದೇಶಪೂರ್ವಕವಾಗಿ ನೆಗೆಟಿವ್ ರಿವ್ಯೂ ಹಾಕ್ತಾರೆ, ಕಮ್ಮಿ ರೇಟಿಂಗ್ ಕೊಡುತ್ತಾರೆ ಎನ್ನುವ ಮಾತಿದೆ. ಅದನ್ನು ತಡೆಯಲು ಚಿತ್ರತಂಡ ಇಂತಾದೊಂದು ನಿರ್ಧಾರ ಕೈಗೊಂಡಿದೆ.

Darshan s Devil Creates Sensation Court Stay Halts Online Reviews and rating on BookMyShow

ಕೆಲವೊಮ್ಮೆ ಒಳ್ಳೆ ಸಿನಿಮಾಗಳು ಇಂತಹ ನೆಗೆಟಿವ್ ರಿವ್ಯೂ, ರೇಟಿಂಗ್‌ನಿಂದ ಹಿನ್ನಡೆ ಅನುಭವಿಸುತ್ತವೆ. ಅದೇ ಕಾರಣಕ್ಕೆ ಚಿತ್ರತಂಡ ಈ ಪ್ರಯತ್ನ ಮಾಡಿದೆ. ದರ್ಶನ್‌ ಸದ್ಯ ಸಂಕಷ್ಟಕ್ಕೆ ಸಿಲುಕಿದ್ದಾರೆ. 'ಡೆವಿಲ್' ಸಿನಿಮಾ ಗೆಲುವು ಅನಿವಾರ್ಯ ಎನ್ನುವಂತಾಗಿದೆ. ಹಾಗಾಗಿ ಯಾವುದೇ ರೀತಿ ಚಿತ್ರಕ್ಕೆ ಹಿನ್ನಡೆ ಆಗಬಾರದು ಎಂದು ಚಿತ್ರತಂಡ ತೀರ್ಮಾನಿಸಿದಂತಿದೆ. ಬುಕ್‌ಮೈ ಶೋ ವೆಬ್‌ಸೈಟ್‌ನಲ್ಲಿ ಪರಿಶೀಲಿಸಿದರೆ "ನ್ಯಾಯಾಲಯದ ಆದೇಶದಂತೆ ರೇಟಿಂಗ್‌ಗಳು ಮತ್ತು ವಿಮರ್ಶೆಗಳನ್ನು ನಿಷ್ಕ್ರಿಯಗೊಳಿಸಲಾಗಿದೆ" ಎಂದು ತೋರಿಸುತ್ತಿದೆ.

ಮುಂದೆ ಇದೇ ರೀತಿ ಬೇರೆ ಚಿತ್ರತಂಡಗಳು ತಮ್ಮ ಚಿತ್ರಗಳ ಬಗ್ಗೆ ನೆಗೆಟಿವ್ ರಿವ್ಯೂ ಬೇಡ ಎನ್ನುವ ಕಾರಣಕ್ಕೆ ಹೀಗೆ ಸ್ಟೇ ತಂದರೂ ಅಚ್ಚರಿ ಪಡಬೇಕಿಲ್ಲ. ಒಟ್ಟರೆ 'ಡೆವಿಲ್' ಸಿನಿಮಾ ಈ ಮೂಲಕ ಹೊಸ ಪ್ರಯತ್ನಕ್ಕೆ ನಾಂದಿ ಹಾಡಿದಂತೆ ಆಗಿದೆ. ಇದೇ ವಿಚಾರದ ಬಗ್ಗೆ ದರ್ಶನ್ ಸಹೋದರ ದಿನಕರ್ ಮಾತನಾಡಿದ್ದಾರೆ. ಅಭಿಮಾನಿಗಳ ಜೊತೆ 'ಡೆವಿಲ್' ಸಿನಿಮಾ ವೀಕ್ಷಿಸಿ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಈ ವೇಳೆ ಸ್ಟೇ ವಿಚಾರದ ಬಗ್ಗೆ ಪ್ರಶ್ನೆ ಎದುರಾಗಿದೆ.

ದಿನಕರ್ ಮಾತನಾಡಿ "ಬುಕ್ ಮೈ ಶೋನಲ್ಲಿ ನೆಗೆಟಿವ್ ವಿಮರ್ಶೆ ಬರುವ ಸಾಧ್ಯತೆ ಇರುತ್ತದೆ. ಹಾಗಾಗಿ ಆಫ್ ಮಾಡಿಸಿದ್ದೇವೆ. ದುಡ್ಡು ಕೊಟ್ಟು ರೇಟಿಂಗ್ ಮಾಡಿಸಿ ಸಿನಿಮಾ ಸಂಸ್ಕೃತಿಯನ್ನು ಹಾಳು ಮಾಡುವ ಕೆಲಸ ನಡೀತಿದೆ. ನನ್ನ 'ರಾಯಲ್' ಚಿತ್ರಕ್ಕೂ ಇದೇ ಅನುಭವ ಆಗಿದೆ. ಬೇಕೆಂದು ಚಿತ್ರಕ್ಕೆ ನೆಗೆಟಿವ್ ವಿಮರ್ಶೆ ಕೊಡಿಸಿದ್ದರು. ಹಾಗಾಗಿ ಈ ನಿರ್ಧಾರ ಮಾಡಿದ್ದೇವೆ" ಎಂದು ತಿಳಿಸಿದ್ದಾರೆ. 'ಡೆವಿಲ್' ಸಿನಿಮಾ ಬಾಕ್ಸಾಫೀಸ್ ಕಲೆಕ್ಷನ್ ಹೇಗಿರುತ್ತೆ ಕಾದು ನೋಡಬೇಕಿದೆ. ಅಭಿಮಾನಿಗಳು ಪದೇ ಪದೆ ಸಿನಿಮಾ ನೋಡುತ್ತಿದ್ದಾರೆ.

More from Filmibeat

Read more about: devil darshan sandalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X