ಮೊದಲ ದಿನವೇ 'ಕಾಂತಾರ- 1', 'ಜೇಮ್ಸ್', 'KGF- 2' ಸಾಲಿಗೆ ಸೇರ್ತಾನಾ 'ಡೆವಿಲ್'?

ನಟ ದರ್ಶನ್ ಅಭಿನಯದ 'ಡೆವಿಲ್' ಸಿನಿಮಾ ಬಿಡುಗಡೆಗೆ ಇನ್ನೊಂದು ತಿಂಗಳ ಬಾಕಿಯಿದೆ. ರಾಜ್ಯಾದ್ಯಂತ ದೊಡ್ಡ ಮಟ್ಟದಲ್ಲಿ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ರೇಣುಕಾಸ್ವಾಮಿ ಪ್ರಕರಣದಲ್ಲಿ ನಟ ದರ್ಶನ್ ಸಂಕಷ್ಟಕ್ಕೆ ಸಿಲುಕಿದ್ದಾರೆ. ವಿಚಾರಣಾಧೀನ ಕೈದಿಯಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಇದೇ ಸಮಯದಲ್ಲಿ 'ಡೆವಿಲ್' ಚಿತ್ರ ಬಿಡುಗಡೆ ಆಗ್ತಿದೆ.

ಪ್ರಕಾಶ್ ವೀರ್ ನಿರ್ಮಿಸಿ, ನಿರ್ದೇಶನ ಮಾಡುತ್ತಿರುವ ಆಕ್ಷನ್ ಥ್ರಿಲ್ಲರ್ ಸಿನಿಮಾ ಇದು. ದರ್ಶನ್ ಜೊತೆ ರಚನಾ ರೈ ನಾಯಕಿಯಾಗಿ ಚಿತ್ರದಲ್ಲಿ ನಟಿಸಿದ್ದಾರೆ. ಈಗಾಗಲೇ ಪೋಸ್ಟರ್, ಟೀಸರ್ ಹಾಗೂ ಹಾಡುಗಳಿಂದ 'ಡೆವಿಲ್' ಸಿನಿಮಾ ಸದ್ದು ಮಾಡ್ತಿದೆ. 3ನೇ ಹಾಡು ಬಿಡುಗಡೆಗೆ ಮುಹೂರ್ತ ಫಿಕ್ಸ್ ಆಗಿದೆ. ಈ ಹಿಂದೆ ದರ್ಶನ್ ಜೈಲಿನಲ್ಲಿ ಇದ್ದಾಗಲೇ 'ಸಾರಥಿ' ಸಿನಿಮಾ ತೆರೆಕಂಡು ಹಿಟ್ ಆಗಿತ್ತು. 'ಡೆವಿಲ್' ವಿಚಾರದಲ್ಲಿ ಅದು ಪುನರಾವರ್ತನೆ ಆಗುತ್ತಾ ಎನ್ನುವ ಚರ್ಚೆ ಶುರುವಾಗಿದೆ.

Darshan s Devil Gears Up for Mega Release on December 12 Can It Break Karnataka Box Office Records

ನಟ ದರ್ಶನ್ ಬಗ್ಗೆ ಏನೇ ಆರೋಪಗಳಿದ್ದರೂ ಅದನ್ನೂ ಅಭಿಮಾನಿಗಳು, ಆಪ್ತರು ಗಂಭೀರವಾಗಿ ಪರಿಗಣಿಸಿಲ್ಲ. ಈ ಕ್ಷಣಕ್ಕೂ ನೆಚ್ಚಿನ ನಟನ ಬೆಂಬಲಕ್ಕೆ ನಿಂತಿದ್ದಾರೆ. ಇದೇ ವೇಳೆ 'ಡೆವಿಲ್' ಸಿನಿಮಾವನ್ನು ದೊಡ್ಡದಾಗಿ ಸ್ವಾಗತಿಸಿ ಗೆಲ್ಲಿಸಲು ಪಣ ತೊಟ್ಟಿದ್ದಾರೆ. 'ಡೆವಿಲ್' ಚಿತ್ರ ಮೊದಲ ದಿನ ಕರ್ನಾಟಕದಲ್ಲಿ ಎಷ್ಟು ಕಲೆಕ್ಷನ್ ಮಾಡಬಹುದು ಎನ್ನುವ ಚರ್ಚೆ ಶುರುವಾಗಿದೆ. ಪ್ಯಾನ್ ಇಂಡಿಯಾ ಬಗ್ಗೆ ದರ್ಶನ್ ಆಸಕ್ತಿ ತೋರಿಸಲ್ಲ. ನಮ್ಮದು ಏನಿದ್ದರೂ ನಮ್ಮೂರು ಎನ್ನುತ್ತಾರೆ. ಕರ್ನಾಟಕದಲ್ಲೇ ಅವರ ಸಿನಿಮಾಗಳು ದೊಡ್ಡದಾಗಿ ಕಲೆಕ್ಷನ್ ಮಾಡುತ್ತವೆ. 'ಡೆವಿಲ್' ಚಿತ್ರದ ಕ್ರೇಜ್ ಎಷ್ಟರಮಟ್ಟಿಗೆ ಬಾಕ್ಸಾಫೀಸ್ ಗಳಿಕೆಯಾಗಿ ಪರಿವರ್ತನೆ ಆಗುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.

ಕನ್ನಡ ಸಿನಿಮಾಗಳು ಈಗ ನೂರಾರು ಕೋಟಿ ಕಲೆಕ್ಷನ್ ಮಾಡುತ್ತಿವೆ. ಇತ್ತೀಚೆಗೆ ಬಂದ 'ಕಾಂತಾರ- 1' ಸಿನಿಮಾ ಬರೀ ಕರ್ನಾಟಕದಲ್ಲಿ 250 ಕೋಟಿ ರೂ. ಕಲೆಕ್ಷನ್ ಮಾಡಿರುವ ಅಂದಾಜಿದೆ. 'ಕೆಜಿಎಫ್-2', 'ಜೇಮ್ಸ್' ಹಾಗೂ 'ಕಾಂತಾರ-1' ಚಿತ್ರಗಳು ಮೊದಲ ದಿನ ಕರ್ನಾಟಕದಲ್ಲಿ 20 ಕೋಟಿ ರೂ.ಗೂ ಅಧಿಕ ಗ್ರಾಸ್ ಕಲೆಕ್ಷನ್ ಮಾಡಿರುವ ದಾಖಲೆ ಬರೆದಿದ್ದವು. ಅದೇ ಸಾಲಿಗೆ 'ಡೆವಿಲ್' ಚಿತ್ರ ಕೂಡ ಸೇರುತ್ತಾ ಕಾದು ನೋಡಬೇಕಿದೆ.

Darshan s Devil Gears Up for Mega Release on December 12 Can It Break Karnataka Box Office Records

ಎರಡು ವರ್ಷಗಳ ಹಿಂದೆ ಬಂದಿದ್ದ ದರ್ಶನ್ ನಟನೆಯ 'ಕಾಟೇರ' ಸಿನಿಮಾ ಮೊದಲ ದಿನವೇ ಭರ್ಜರಿ ಕಲೆಕ್ಷನ್ ಮಾಡಿ ಸದ್ದು ಮಾಡಿತ್ತು. ಕರ್ನಾಟಕ ಬಾಕ್ಸಾಫೀಸ್‌ನಲ್ಲಿ ದರ್ಶನ್ ಸಿನಿಮಾ ತಾಕತ್ತು ಎಂಥದ್ದು ಎಂದು ಸಾರಿ ಹೇಳಿತ್ತು. 'ಕಾಟೇರ' ಸಿನಿಮಾ ಮೊದಲ ದಿನ ಕರ್ನಾಟಕದಲ್ಲಿ 17ರಿಂದ 18 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿತ್ತು. ಹಾಗಾಗಿ 'ಡೆವಿಲ್' ಚಿತ್ರದ ಕಲೆಕ್ಷನ್ ಎಷ್ಟಾಗಬಹುದು ಎಂದು ಅಭಿಮಾನಿಗಳು ಊಹಿಸುತ್ತಿದ್ದಾರೆ.

ಮೊದಲ ದಿನ 'ಕೆಜಿಎಫ್- 2' ಸಿನಿಮಾ ಕರ್ನಾಟಕದಲ್ಲಿ 35 ಕೋಟಿ ರೂ. ಗ್ರಾಸ್ ಕಲೆಕ್ಷನ್, ಜೇಮ್ಸ್ 21 ಕೋಟಿ ರೂ. ಗ್ರಾಸ್ ಕಲೆಕ್ಷನ್ ಹಾಗೂ 'ಕಾಂತಾರ-1' ಪೇಯ್ಡ್ ಪ್ರೀಮಿಯರ್ ಹಾಗೂ ಮೊದಲ ದಿನದ ಗಳಿಕೆ ಸೇರಿ 26 ಕೋಟಿ ರೂ. ಕಲೆಕ್ಷನ್ ಮಾಡಿದ್ದು ಈವರೆಗೆ ದಾಖಲೆ ಎನಿಸಿಕೊಂಡಿದೆ. 'ಡೆವಿಲ್' ಕೂಡ 20 ಕೋಟಿ ರೂ. ಗಡಿ ದಾಟುವ ಸಾಧ್ಯತೆಯಿದೆ.

ದರ್ಶನ್ ನಟನೆಯ ಚಿತ್ರಗಳ ಬಗ್ಗೆ ಪಾಸಿಟಿವ್ ಅಥವಾ ನೆಗೆಟಿವ್ ಟಾಕ್ ಬಗ್ಗೆ ತಲೆ ಕೆಡಿಸಿಕೊಳ್ಳದೇ ಅಭಿಮಾನಿಗಳು ಸಿನಿಮಾ ನೋಡಲು ಚಿತ್ರಮಂದಿರಗಳಿಗೆ ನುಗ್ಗುತ್ತಾರೆ. ಇನ್ನು ಸಿನಿಮಾ ಚೆನ್ನಾಗಿದ್ದರೆ ಮುಗಿದೇ ಹೋಯ್ತು. ಬಾಕ್ಸಾಫೀಸ್ ಶೇಕ್ ಆಗಿಬಿಡುತ್ತದೆ. 17 ವರ್ಷಗಳ ಹಿಂದೆಯೇ 'ಬಾಕ್ಸಾಫೀಸ್ ಸುಲ್ತಾನ್' ಎಂಬ ಬಿರುದು ಅವರಿಗೆ ಸಿಕ್ಕಿತ್ತು. ಆ ಬಳಿಕ ಕೂಡ ಹಲವು ಹಿಟ್ ಸಿನಿಮಾಗಳನ್ನು ದರ್ಶನ್ ಕೊಟ್ಟಿದ್ದಾರೆ. ಈಗ ಎಲ್ಲರ ಕಣ್ಣು 'ಡೆವಿಲ್' ಸಿನಿಮಾ ಮೇಲಿದೆ.

ಈ ಹಿಂದೆ ದರ್ಶನ್ ಹಾಗೂ ಪ್ರಕಾಶ್ ಕಾಂಬಿನೇಷನ್‌ನಲ್ಲಿ ಬಂದಿದ್ದ 'ತಾರಕ್' ಸಿನಿಮಾ ಗೆದ್ದಿತ್ತು. ಅವರಿಬ್ಬರು ಮತ್ತೆ ಜೊತೆಯಾಗಿರುವುದು ಕುತೂಹಲ ಮೂಡಿಸಿದೆ. ಬಹಳ ವಿಭಿನ್ನವಾದ ಕಥೆಯನ್ನು ಚಿತ್ರದಲ್ಲಿ ಹೇಳುತ್ತಿದ್ದಾರೆ ಎನ್ನಲಾಗ್ತಿದೆ. ಹಾಗಾಗಿ ಸಹಜವಾಗಿಯೇ ಅಭಿಮಾನಿಗಳು ಸಂಭ್ರಮ ಮುಗಿಲು ಮುಟ್ಟುವ ಸುಳಿವು ಸಿಗುತ್ತಿದೆ. ಡಿಸೆಂಬರ್ 12ಕ್ಕೆ ತೆರೆಮೇಲೆ 'ಡೆವಿಲ್' ದರ್ಶನವಾಗಲಿದೆ.

More from Filmibeat

Read more about: devil kantara chapter 1 kgf
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X