ಜೋರಾಗಿದೆ 'ಡೆವಿಲ್' ಪ್ರೀರಿಲೀಸ್ ಬ್ಯುಸಿನೆಸ್; ಯಾರ ಪಾಲಾಯ್ತು ಡಿಸ್ಟ್ರಿಬ್ಯೂಷನ್ ರೈಟ್ಸ್?

ಪ್ರಕಾಶ್ ನಿರ್ದೇಶನದಲ್ಲಿ ದರ್ಶನ್ ನಟನೆಯ 'ಡೆವಿಲ್' ಸಿನಿಮಾ ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಡಿಸೆಂಬರ್ 12ಕ್ಕೆ ಸಿನಿಮಾ ತೆರೆಗೆ ಬರಲಿದೆ. ರೇಣುಕಾಸ್ವಾಮಿ ಪ್ರಕರಣದಲ್ಲಿ ದರ್ಶನ್ ಜೈಲು ಸೇರಿದ್ದರೂ ಯಾವುದೇ ಸಮಸ್ಯೆ ಇಲ್ಲದೇ 'ಡೆವಿಲ್' ಸಿನಿಮಾ ತೆರೆಗಪ್ಪಳಿಸುತ್ತಿದೆ.

ಈ ಆಕ್ಷನ್ ಥ್ರಿಲ್ಲರ್ ಚಿತ್ರವನ್ನು ದೊಡ್ಡದಾಗಿ ಸ್ವಾಗತಿಸಲು ಅಭಿಮಾನಿಗಳು ಕಾಯುತ್ತಿದ್ದಾರೆ. ವಿಜಯಲಕ್ಷ್ಮಿ ದರ್ಶನ್, ದಿನಕರ್ ತೂಗುದೀಪ್ 'ಡೆವಿಲ್' ಚಿತ್ರತಂಡ ಬೆನ್ನಿಗೆ ನಿಂತಿದ್ದಾರೆ. ಚಿತ್ರದ ಪ್ರಚಾರಕ್ಕೆ ಚಾಲನೆ ಸಿಗುತ್ತಿದೆ. ಅಭಿಮಾನಿಗಳ ಸಭೆ ಮಾಡಿ ಚಿತ್ರತಂಡ ಮಾತನಾಡಿದೆ. ರಾಜ್ಯದ ಮೂಲೆ ಮೂಲೆಯಿಂದ ಬಂದಿದ್ದ ಅಭಿಮಾನಿಗಳನ್ನು ಉದ್ದೇಶಿಸಿ ವಿಜಯಲಕ್ಷ್ಮಿ ದರ್ಶನ್ ಮಾತನಾಡಿ ದರ್ಶನ್ ಸಂದೇಶ ರವಾನಿಸಿದ್ದಾರೆ.

Darshan s Devil Set for Grand December 12 Release KVN Likely to Handle Distribution

ಪ್ರಕಾಶ್ ಸ್ವತಃ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ದೇಶ ವಿದೇಶಗಳಲ್ಲಿ 'ಡೆವಿಲ್' ಸಿನಿಮಾ ಚಿತ್ರೀಕರಣ ನಡೆದಿದೆ. ಟೀಸರ್, ಸಾಂಗ್ಸ್ ಹಿಟ್ ಆಗಿದೆ. ಶೀಘ್ರದಲ್ಲೇ ಟ್ರೈಲರ್ ರಿಲೀಸ್ ಈವೆಂಟ್ ನಡೆಯಲಿದೆ. ಸುದ್ದಿಗೋಷ್ಠಿ ನಡೆಸಿ ಚಿತ್ರತಂಡ ಮಾಹಿತಿ ನೀಡಲಿದೆ. ಇನ್ನು ಚಿತ್ರದ ಆಡಿಯೋ, ಡಿಜಿಟಲ್, ಥ್ರಿಯೇಟ್ರಿಕಲ್ ಹಾಗೂ ಸ್ಯಾಟಲೈಟ್ ರೈಟ್ಸ್‌ಗೆ ಭರ್ಜರಿ ಡಿಮ್ಯಾಂಡ್ ಇದೆ. ದರ್ಶನ್ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರ ಅಭಿಮಾನಿಗಳು ಬೆಂಬಲಕ್ಕೆ ನಿಂತಿದ್ದಾರೆ. ಹಾಗಾಗಿ ಸಹಜವಾಗಿಯೇ ಸಿನಿಮಾ ಹೈಪ್ ಕ್ರಿಯೇಟ್ ಮಾಡಿದೆ.

ಕ್ರೇಜ್‌ಗೆ ತಕ್ಕಂತೆ 'ಡೆವಿಲ್' ಚಿತ್ರದ ಆಡಿಯೋ ರೈಟ್ಸ್ ಸೇಲ್ ಆಗಿತ್ತು. ಓಟಿಟಿ ರೈಟ್ಸ್‌ಗೂ ಭಾರೀ ಡಿಮ್ಯಾಂಡ್ ಇದೆ ಎನ್ನಲಾಗ್ತಿದೆ. ಈ ನಡುವೆ ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ಚಿತ್ರ ಡಿಸ್ಟ್ರಿಬ್ಯೂಷನ್ ರೈಟ್ಸ್ ಕೊಂಡುಕೊಂಡಿದೆ ಎನ್ನಲಾಗ್ತಿದೆ. ಅಧಿಕೃತವಾಗಿ ಈ ಬಗ್ಗೆ ಮಾಹಿತಿ ಇಲ್ಲ. ಆದರೆ ಗಾಂಧಿನಗರದಲ್ಲಿ ಈ ವಿಚಾರ ಭಾರೀ ಚರ್ಚೆ ಆಗ್ತಿದೆ. ಇನ್ನು ಕೆವಿಎನ್ ಸಂಸ್ಥೆಯ ಪ್ರೊಡಕ್ಷನ್ ಹೆಡ್ ಸುಪ್ರೀತ್ ಮಾಡಿರುವ ಪೋಸ್ಟ್ ಮತ್ತಷ್ಟು ಸುಳಿವು ಕೊಡ್ತಿದೆ.

Darshan s Devil Set for Grand December 12 Release KVN Likely to Handle Distribution

ಸುಪ್ರೀತ್ ದಿಢೀರನೆ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ 'ಡೆವಿಲ್' ಚಿತ್ರದ ಪೋಸ್ಟರ್ ಹಾಕಿದ್ದಾರೆ. ಇದನ್ನು ನೋಡಿ ಕೆವಿಎನ್ ಸಂಸ್ಥೆ ಸಿನಿಮಾ ವಿತರಣೆ ಮಾಡುವುದು ಪಕ್ಕಾ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ. ಕನ್ನಡ ಚಿತ್ರರಂಗದ ದೊಡ್ಡ ಚಿತ್ರ ನಿರ್ಮಾಣ ಸಂಸ್ಥೆ ಇದು. ಬೇರೆ ಭಾಷೆಗಳಲ್ಲಿ ಕೂಡ ಭಾರೀ ಬಂಡವಾಳ ಹಾಕಿ ಈ ಸಂಸ್ಥೆ ಸಿನಿಮಾ ನಿರ್ಮಾಣ ಮಾಡುತ್ತಿದೆ. ದೊಡ್ಡ ದೊಡ್ಡ ಸಿನಿಮಾಗಳ ವಿತರಣೆ ಮಾಡಿ ಸಂಸ್ಥೆ ಗಮನ ಸೆಳೆದಿದೆ.

ದರ್ಶನ್ ಕಾಂಬಿನೇಷನ್‌ನಲ್ಲಿ ಕೆವಿಎನ್ ಸಂಸ್ಥೆ ಬಹಳ ಹಿಂದೆಯೇ ಸಿನಿಮಾ ಘೋಷಣೆ ಮಾಡಿತ್ತು. ರೇಣುಕಾಸ್ವಾಮಿ ಪ್ರಕರಣದಿಂದ ಅದು ತಡವಾಗುತ್ತಿದೆ. ಜೋಗಿ ಪ್ರೇಮ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಬೇಕಿದೆ. ಹಾಗಾಗಿ ಕೆವಿಎನ್ ಜೊತೆ ದರ್ಶನ್ ಒಡನಾಟ ಚೆನ್ನಾಗಿತ್ತು. ಹಾಗಾಗಿ 'ಡೆವಿಲ್' ಚಿತ್ರದ ವಿತರಣೆ ಹಕ್ಕು ಸಂಸ್ಥೆಯ ಪಾಲಾಗಿದೆ ಎನ್ನುವ ಚರ್ಚೆ ಹೆಚ್ಚಾಗಿದೆ. ಶೀಘ್ರದಲ್ಲೇ ಈ ಬಗ್ಗೆ ಅಧಿಕೃತ ಮಾಹಿತಿ ಸಿಗಲಿದೆ.

ದರ್ಶನ್ ಜೊತೆ ಚಿತ್ರದಲ್ಲಿ ರಚನಾ ರೈ ನಾಯಕಿಯಾಗಿ ನಟಿಸಿದ್ದಾರೆ. ಮಹೇಶ್ ಮಂಜ್ರೇಕರ್, ಅಚ್ಯುತ್ ಕುಮಾರ್, ಅವಿನಾಶ್, ಶರ್ಮಿಳಾ ಮಾಂಡ್ರೆ ಸೇರಿ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಸುಧಾಕರ್ ರಾಜ್ ಛಾಯಾಗ್ರಹಣ, ಅಜನೀಶ್ ಲೋಕನಾಥ್ ಸಂಗೀತ ಚಿತ್ರಕ್ಕಿದೆ. ದರ್ಶನ್ ಜೈಲು ಸೇರಿದ್ದರೂ ಕ್ರೇಜ್ ಮಾತ್ರ ಕಮ್ಮಿ ಆಗಿಲ್ಲ. ಹಾಗಾಗಿ 'ಡೆವಿಲ್' ಸಿನಿಮಾ ಗೆಲ್ಲುವ ಸಾಧ್ಯತೆ ದಟ್ಟವಾಗಿದೆ. ಅದಕ್ಕೆ ತಕ್ಕಂತೆ ಸಿನಿಮಾ ವಿತರಣೆ ಹಕ್ಕು ಮಾರಾಟವಾಗಿರುವ ಅಂದಾಜಿದೆ.

ಬೆಂಗಳೂರು, ಮೈಸೂರು, ಉದಯ್‌ಪುರ ಹಾಗೂ ಬ್ಯಾಂಕಾಕ್‌ನಲ್ಲಿ 'ಡೆವಿಲ್' ಸಿನಿಮಾ ಚಿತ್ರೀಕರಣ ನಡೆದಿದೆ. ಚಿತ್ರದಲ್ಲಿ ವಿಭಿನ್ನ ಶೇಡ್‌ಗಳಿರುವ ಪಾತ್ರದಲ್ಲಿ ದರ್ಶನ್ ಮಿಂಚಿದ್ದಾರೆ. ಚಿತ್ರದ ಕಥೆ ಬಗ್ಗೆ ಈವರೆಗೆ ಯಾವುದೇ ಸುಳಿವು ಸಿಕ್ಕಿಲ್ಲ. ಹಾಗಾಗಿ ಅಭಿಮಾನಿಗಳಿಗೆ ತೆರೆಮೇಲೆ ಸಾಕಷ್ಟು ಸರ್‌ಪ್ರೈಸ್‌ಗಳು ಕಾದಿದೆ.

More from Filmibeat

Read more about: devil darshan kvn productions
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X