Devil Advance Booking; 'ಡೆವಿಲ್' ಅಡ್ವಾನ್ಸ್ ಬುಕ್ಕಿಂಗ್ ರೆಸ್ಪಾನ್ಸ್ ಹೇಗಿದೆ? ಟಿಕೆಟ್ ದರ ಎಷ್ಟು?

ದರ್ಶನ್ ನಟನೆಯ 'ಡೆವಿಲ್' ಸಿನಿಮಾ ಬಹಳ ಹೈಪ್ ಕ್ರಿಯೇಟ್ ಮಾಡಿದೆ. 6 ದಿನ ಮೊದ್ಲೆ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಆರಂಭವಾಗಿದೆ. ಸದ್ಯಕ್ಕೆ ಡಿಸೆಂಬರ್ 11 ಗುರುವಾರ ಬೆಳಗ್ಗೆ 6.30ರ ಶೋಗಳ ಟಿಕೆಟ್ ಆನ್‌ಲೈನ್‌ನಲ್ಲಿ ಸಿಕ್ತಿದೆ. ಅಭಿಮಾನಿಗಳು ಮುಗಿಬಿದ್ದು ಬುಕ್ ಮಾಡುತ್ತಿದ್ದಾರೆ. ಕೆಲವೇ ನಿಮಿಷಗಳಲ್ಲಿ ಟಿಕೆಟ್ ಸೋಲ್ಡೌಟ್ ಆಗ್ತಿದೆ.

ಬೆಂಗಳೂರಿನ ಆಯ್ದ ಚಿತ್ರಮಂದಿರಗಳಲ್ಲಿ ಫ್ಯಾನ್ಸ್ ಶೋ ಟಿಕೆಟ್ ಬುಕ್ಕಿಂಗ್ ಓಪನ್ ಆಗಿದೆ. ತಾವರೆಕೆರೆ ಬಾಲಾಜಿ, ಸರ್ಜಾಪುರ ರವಿ, ಜೆಪಿ ನಗರದ ರೇಣುಕಾಪ್ರಸನ್ನ, ಎಂಜಿ ರೋಡ್ ಸ್ವಾಗತ್ ಶಂಕರ್‌ ನಾಗ್, ದೊಡ್ಡಬಳ್ಳಾಪುರದ ವೈಭವ್, ಉಳ್ಳಾಲದ ವಜ್ರೇಶ್ವರಿ ಚಿತ್ರಮಂದಿರಗಳಲ್ಲಿ ಅರ್ಲಿ ಮಾರ್ನಿಂಗ್ ಶೋ ಟಿಕೆಟ್ ಸಿಗುತ್ತಿದೆ. ಸಿನಿರಸಿಕರು ಈಗಾಗಲೇ ತಮ್ಮ ಸೀಟ್ ಕಾಯ್ದಿರಿಸುತ್ತಿದ್ದಾರೆ. ಬುಕ್ಕಿಂಗ್ ಶುರುವಾದ ಒಂದು ಗಂಟೆಯೊಳಗೆ 6 ಶೋಗಳ ಬಹುತೇಕ ಟಿಕೆಟ್ ಬುಕ್ ಆಗಿಬಿಟ್ಟಿದೆ. ಒಂದು ಶೋ ಸೋಲ್ಡೌಟ್ ಆಗಿದೆ.

Darshan s Devil Shatters Records as Early Morning Fan Shows Sell Out in Minutes

ಫ್ಯಾನ್ಸ್ ಶೋ ಆಗಿರುವುದರಿಂದ ಟಿಕೆಟ್ ದರ ಹೆಚ್ಚಿಸಲಾಗಿದೆ. ಸಿಲ್ವರ್ ಕ್ಲಾಸ್ 400 ರೂ. ಹಾಗೂ ಗೋಲ್ಡ್ ಕ್ಲಾಸ್ 500 ರೂ. ಟಿಕೆಟ್ ದರ ನಿಗದಿಪಡಿಸಲಾಗಿದೆ. ಇನ್ನು ಬುಕ್‌ಮೈ ಶೋನಲ್ಲಿ ಈಗಾಗಳೇ 'ಡೆವಿಲ್' ಟ್ರೆಂಡಿಂಗ್ ಶುರುವಾಗಿಬಿಟ್ಟಿದೆ. ಕರ್ನಾಟಕದಲ್ಲಿ ದರ್ಶನ್ ಸಿನಿಮಾಗಳಿಗೆ ಒಳ್ಳೆ ಕ್ರೇಜ್ ಇದೆ. ಸಿನಿಮಾ ಹೇಗಾದರೂ ಇರಲಿ ಅಭಿಮಾನಿಗಳು ಫಸ್ಟ್ ಡೇ ಸಿನಿಮಾ ನೋಡಲು ಮುಗಿಬೀಳುತ್ತಾರೆ. ಅವರ ಸಿನಿಮಾಗಳು ಒಳ್ಳೆ ಓಪನಿಂಗ್ ಪಡೆದುಕೊಳ್ಳುತ್ತದೆ. 'ಡೆವಿಲ್' ಚಿತ್ರಕ್ಕೂ ಒಳ್ಳೆ ಓಪನಿಂಗ್ ನಿರೀಕ್ಷಿಸಲಾಗುತ್ತಿದೆ.

ಕೆಜಿ ರಸ್ತೆಯ ನರ್ತಕಿ ಸೇರಿ ರಾಜ್ಯಾದ್ಯಂತ ದೊಡ್ಡಮಟ್ಟದಲ್ಲಿ ಸಿನಿಮಾ ಬಿಡುಗಡೆ ಆಗಲಿದೆ. ಮೊದಲ ದಿನ ಬೆಂಗಳೂರಿನಲ್ಲಿ 1000ಕ್ಕೂ ಅಧಿಕ ಶೋಗಳಲ್ಲಿ ಸಿನಿಮಾ ಪ್ರದರ್ಶನ ಆಗುವ ನಿರೀಕ್ಷೆಯಿದೆ. ನಿಧಾನವಾಗಿ ಒಂದೊಂದೇ ಶೋ ಟಿಕೆಟ್ ಬುಕ್ಕಿಂಗ್ ಓಪನ್ ಆಗುತ್ತಿದೆ. ಆರಂಭದಲ್ಲಿ ಬುಕ್ಕಿಂಗ್ ಟ್ರೆಂಡ್ ನೋಡಿದ್ರೆ, ಒಳ್ಳೆ ಓಪನಿಂಗ್ ಸಿಗುವ ನಿರೀಕ್ಷೆ ಮೂಡಿದೆ.

Darshan s Devil Shatters Records as Early Morning Fan Shows Sell Out in Minutes

ಸಾಕಷ್ಟು ಕಡೆಗಳಲ್ಲಿ ಟಿಕೆಟ್ ಬುಕ್ಕಿಂಗ್ ಓಪನ್ ಆಗಬೇಕಿದೆ. ಮೊದಲ ದಿನದ 4 ಶೋಗ ಟಿಕೆಟ್ ಸಿಗಲು ಆರಂಭವಾದರೆ ಬುಕ್ಕಿಂಗ್ ಟ್ರೆಂಡ್ ಜೋರಾಗುತ್ತದೆ. ಅಭಿಮಾನಿಗಳು ಫಸ್ಟ್ ಡೇ ಫಸ್ಟ್ ಶೋ ಸಿನಿಮಾ ನೋಡಲು ತುದಿಗಾಲಲ್ಲಿ ನಿಂತಿದ್ದಾರೆ. ಸದ್ಯ ರೇಣುಕಾಸ್ವಾಮಿ ಪ್ರಕರಣದಲ್ಲಿ ದರ್ಶನ್ ಜೈಲು ಸೇರಿದ್ದಾರೆ. ಸಂಕಷ್ಟಕ್ಕೆ ಸಿಲುಕಿರುವ ದರ್ಶನ್‌ಗೆ 'ಡೆವಿಲ್' ಗೆಲುವು ಬಹಳ ಮುಖ್ಯ. ಪತ್ನಿ ವಿಜಯಲಕ್ಷ್ಮಿ ಹಾಗೂ ಸಹೋದರ ದಿನಕರ್ ಕೂಡ ಚಿತ್ರತಂಡದ ಪರ ನಿಂತಿದ್ದಾರೆ.

ಅಭಿಮಾನಿಗಳು ದೊಡ್ಡಮಟ್ಟದಲ್ಲಿ ಸಿನಿಮಾ ಸ್ವಾಗತಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ. ಈಗಾಗಲೇ ಕೆಲ ಚಿತ್ರಮಂದಿರಗಳ ಮುಂದೆ ಕಟೌಟ್‌ ಎದ್ದು ನಿಂತಿದೆ. ಗುರುವಾರ ಕೆಲ ಚಿತ್ರಮಂದಿರಗಳ ಕಟೌಟ್‌ಗಳನ್ನು ಸಿಂಗರಿಸಿ, ಪಟಾಕಿ ಸಿಡಿಸಿ ಜೈಕಾರ ಹಾಕಿ 'ಡೆವಿಲ್' ಸಿನಿಮಾ ಬರಮಾಡಿಕೊಳ್ಳುತ್ತಿದ್ದಾರೆ. ಕೆಲವೆಡೆ ಬಿರಿಯಾನಿ ಹಂಚುವುದಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ. ಮಿಲನಾ ಪ್ರಕಾಶ್ 'ಡೆವಿಲ್' ಸಿನಿಮಾ ನಿರ್ಮಿಸಿ, ನಿರ್ದೇಶನ ಮಾಡಿದ್ದಾರೆ.

'ಡೆವಿಲ್' ಚಿತ್ರದಲ್ಲಿ ರಚನಾ ರೈ ನಾಯಕಿಯಾಗಿ ಮಿಂಚಿದ್ದಾರೆ. ಇನ್ನುಳಿದಂತೆ ಮಹೇಶ್ ಮಂಜ್ರೇಕರ್, ಶರ್ಮಿಳಾ ಮಾಂಡ್ರೆ, ಅಚ್ಯುತ್ ಕುಮಾರ್, ಅವಿನಾಶ್, ಗಿಲ್ಲಿ ನಟ ತಾರಾಗಣದಲ್ಲಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತದಲ್ಲಿ ಚಿತ್ರದ 3 ಹಾಡುಗಳು ಹಿಟ್ ಆಗಿದೆ. ಮತ್ತೊಂದು ರೊಮ್ಯಾಂಟಿಕ್ ಸಾಂಗ್ ಶೀಘ್ರದಲ್ಲೇ ಹೊರ ಬರಲಿದೆ.

ಕಾಂತರಾಜ್ ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ. ಈಗಾಗಲೇ ಟ್ರೈಲರ್‌ನಲ್ಲಿರುವ ಡೈಲಾಗ್ಸ್ ಅಭಿಮಾನಿಗಳ ಮನಗೆದ್ದಿದೆ. ಛಾಯಾಗ್ರಾಹಕ ಸುಧಾಕರ್ ರಾಜ್ ಚಿತ್ರವನ್ನು ಸೆರೆಹಿಡಿದಿದ್ದಾರೆ. 13 ವರ್ಷಗಳ ಹಿಂದೆ ದರ್ಶನ್ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇದ್ದಾಗಲೇ 'ಸಾರಥಿ' ಸಿನಿಮಾ ತೆರೆಕಂಡು ಗೆದ್ದಿತ್ತು. ಮತ್ತದೇ ಮ್ಯಾಜಿಕ್ ರಿಪೀಟ್ ಆಗುತ್ತದೆ ಎಂದು ಅಭಿಮಾನಿಗಳು ಭಾವಿಸುತ್ತಿದ್ದಾರೆ.

More from Filmibeat

Read more about: darshan devil sandalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X