Devil Trailer: 24 ಗಂಟೆಗಳಲ್ಲಿ 'ಡೆವಿಲ್' ಟ್ರೈಲರ್ ಆರ್ಭಟ ಹೇಗಿತ್ತು? ಲೈಕ್ಸ್, ವೀವ್ಸ್ ಲೆಕ್ಕ ಏನಿದೆ?
ದರ್ಶನ್ ನಟನೆಯ 'ಡೆವಿಲ್' ಸಿನಿಮಾ ಬಿಡುಗಡೆಗೆ 5 ದಿನ ಬಾಕಿಯಿದೆ. ಸದ್ಯ ಟ್ರೈಲರ್ ರಿಲೀಸ್ ಆಗಿ ಸದ್ದು ಮಾಡ್ತಿದೆ. ಭಿನ್ನ ವಿಭಿನ್ನ ಶೇಡ್‌ಗಳಿರೋ ಪಾತ್ರದಲ್ಲಿ ದರ್ಶನ್ ಅಬ್ಬರಿಸಿದ್ದಾರೆ. ಕಥೆಯ ಸುಳಿವು ಬಿಟ್ಟುಕೊಡದೇ ಒಳ್ಳೆ ಟ್ರೈಲರ್ ಕಟ್ ಮಾಡಿ ಪ್ರಕಾಶ್ ಮತ್ತವರ ತಂಡ ಗೆದ್ದಿದೆ. ಟ್ರೈಲರ್ ನೋಡಿ ಅಭಿಮಾನಿಗಳು ಖುಷಿಯಾಗಿದ್ದಾರೆ.
ಈಗಾಗಲೇ 'ಡೆವಿಲ್' ಸ್ವಾಗತಕ್ಕೆ ಅಭಿಮಾನಿಗಳು ಸಿದ್ಧತೆ ನಡೆಸಿದ್ದಾರೆ. ಚಿತ್ರಮಂದಿರಗಳ ಮುಂದೆ ಕಟೌಟ್‌ಗಳು ಎದ್ದು ನಿಲ್ತಿವೆ. ವಿಶೇಷವಾಗಿ ಸೆಲೆಬ್ರೇಷನ್ ಪ್ಲ್ಯಾನ್ ನಡೀತಿದೆ. ಸದ್ಯ ದರ್ಶನ್ ಸಂಕಷ್ಟಕ್ಕೆ ಸಿಲುಕಿದ್ದಾರೆ. 'ಡೆವಿಲ್' ಸಿನಿಮಾ ಗೆಲ್ಲಿಸಿ ಅವರಿಗೆ ಉಡುಗೊರೆ ನೀಡಲು ಅಭಿಮಾನಿಗಳು ಮುಂದಾಗಿದ್ದಾರೆ. ಟ್ರೈಲರ್ ಅನ್ನು ದೊಡ್ಡಮಟ್ಟದಲ್ಲಿ ನೋಡಿ ಹಿಟ್ ಮಾಡಿದ್ದಾರೆ. ಕೇವಲ 24 ಗಂಟೆಗಳಲ್ಲಿ ಟ್ರೈಲರ್ 60 ಲಕ್ಷಕ್ಕೂ ಅಧಿಕ ವೀವ್ಸ್ ಸಾಧಿಸಿ ಸದ್ದು ಮಾಡ್ತಿದೆ.

ಡೆವಿಲ್ ಹಾಗೂ ಧನುಷ್ ಎಂಬ ಶೇಡ್‌ಗಳಿರುವ ಪಾತ್ರದಲ್ಲಿ ದರ್ಶನ್ ಅಬ್ಬರಿಸಿದ್ದಾರೆ. ಸ್ಟೈಲಿಶ್ ಕಾಸ್ಟ್ಯೂಮ್ಸ್‌ನಲ್ಲಿ ಯಂಗ್ ಅಂಡ್ ಎನರ್ಜಿಟಿಕ್ ಲುಕ್‌ನಲ್ಲಿ ದರ್ಶನ ಕೊಟ್ಟಿದ್ದಾರೆ. ಜಬರ್ದಸ್ತ್ ಆಕ್ಷನ್, ಖಡಕ್ ಡೈಲಾಗ್ಸ್ ಸೇರಿಸಿ ಟ್ರೈಲರ್ ರಿಲೀಸ್ ಮಾಡಿದ್ದಾರೆ. 2 ನಿಮಿಷದ ಸಣ್ಣ ಝಲಕ್ 'ಡೆವಿಲ್' ಪ್ರಪಂಚದಲ್ಲಿ ಒಂದು ಸುತ್ತು ಹಾಕಿಸುತ್ತದೆ. ಅಭಿಮಾನಿಗಳು ನಿರೀಕ್ಷಿಸಿದ್ದ ಒಂದಷ್ಟು ಅಂಶಗಳನ್ನು ರಿವೀಲ್ ಮಾಡದೇ ಎಚ್ಚರಿಕೆ ವಹಿಸಿದಂತೆ ಕಾಣ್ತಿದೆ.
ಶರ್ಮಿಳಾ ಮಾಂಡ್ರೆ ಪಾತ್ರವನ್ನು ಟ್ರೈಲರ್‌ನಲ್ಲಿ ತೋರಿಸಿಲ್ಲ. ಇನ್ನು ಕನ್ವರ್‌ಲಾಲ್ ಗೆಟಪ್‌ನಲ್ಲಿ ದರ್ಶನ್ ಪೋಸ್ಟರ್ ಹಿಂದೆ ಬಂದಿತ್ತು. ಅದನ್ನು ಕೂಡ ಟ್ರೈಲರ್‌ನಲ್ಲಿ ಇಲ್ಲ. ಅದು ಬಿಟ್ಟು ಸಾಕಷ್ಟು ಇಂಟ್ರೆಸ್ಟಿಂಗ್ ಅಂಶಗಳು ಇದರಲ್ಲಿದೆ. ಎಲ್ಲವೂ ಇಂಟ್ರೆಸ್ಟಿಂಗ್ ಅನ್ನಿಸ್ತಿದ್ದು ಬಹಳ ಅದ್ಧೂರಿಯಾಗಿ ಸಿನಿಮಾ ಮೂಡಿ ಬಂದಿರುವುದು ಗೊತ್ತಾಗುತ್ತಿದೆ. ನಾಯಕಿ ರಚನಾ ಪಾತ್ರಕ್ಕೂ ಹೆಚ್ಚಿನ ಮಹತ್ವ ಇರುವಂತೆ ಕಾಣ್ತಿದೆ. ಒಟ್ಟಾರೆ ಟ್ರೈಲರ್ ಟೆಸ್ಟ್‌ನಲ್ಲಿ 'ಡೆವಿಲ್' ಪಾಸ್ ಆಗಿದ್ದಾನೆ.

ಮೇಲ್ನೋಟಕ್ಕೆ ಇದೊಂದು ಪೊಲಿಟಿಕಲ್ ಥ್ರಿಲ್ಲರ್ ಸಿನಿಮಾ ಎನ್ನುವುದು ಅರ್ಥವಾಗ್ತಿದೆ. ಆದರೆ ಅದು ಬಿಟ್ಟು ಸಾಕಷ್ಟು ವಿಚಾರಗಳನ್ನು ಚಿತ್ರದಲ್ಲಿ ಹೇಳುವ ಪ್ರಯತ್ನ ನಡೀತಿದೆ. ಧನುಷ್ ಹಾಗೂ ಡೆವಿಲ್ ಒಬ್ನೇನಾ? ಅಥವಾ ಬೇರೆ ಬೇರೆನಾ?ದರ್ಶನ್ ದ್ವಿಪಾತ್ರದಲ್ಲಿ ನಟಿಸಿದ್ದಾರಾ? ಎನ್ನುವ ಅನುಮಾನ ಕೂಡ ಅಭಿಮಾನಿಗಳನ್ನು ಕಾಡ್ತಿದೆ. ಅದಕ್ಕೆಲ್ಲಾ ಉತ್ತರ ಡಿಸೆಂಬರ್ 11ರಂದು ತೆರೆಮೇಲೆ ಸಿಗಲಿದೆ.
ಅಂದಹಾಗೆ 'ಡೆವಿಲ್' ಟ್ರೈಲರ್ 24 ಗಂಟೆಗಳಲ್ಲಿ 63 ಲಕ್ಷ ವೀವ್ಸ್, 3 ಲಕ್ಷದ 77 ಸಾವಿರ ಲೈಕ್ಸ್ ಹಾಗೂ 41 ಸಾವಿರ ಕಾಮೆಂಟ್ಸ್ ಪಡೆದುಕೊಂಡಿದೆ. ಬಿಡುಗಡೆಯಾದ ಮೊದಲ 2 ಗಂಟೆಯಲ್ಲಿ 10 ಲಕ್ಷ, 12 ಗಂಟೆಗಳಲ್ಲಿ 50 ಲಕ್ಷ ವೀವ್ಸ್ ಗಳಿಸಿ ಸದ್ದು ಮಾಡಿತ್ತು. ಇದೀಗ 24 ಗಂಟೆಗಳಲ್ಲಿ 63 ಲಕ್ಷ ವೀವ್ಸ್ ಸಾಧಿಸಿರುವುದು ವಿಶೇಷ. ಇನ್ನು ಕೆಲವೇ ನಿಮಿಷಗಳಲ್ಲಿ 'ಡೆವಿಲ್' ಚಿತ್ರದ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಶುರುವಾಗಲಿದೆ.
ಮಹೇಶ್ ಮಂಜ್ರೇಕರ್, ಅಚ್ಯುತ್ ಕುಮಾರ್, ವಿನಯ್ ಗೌಡ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. ದೇಶ ವಿದೇಶಗಳಲ್ಲಿ ಸಿನಿಮಾ ಚಿತ್ರೀಕರಣ ನಡೆದಿದೆ. ಅಜನೀಶ್ ಲೋಕನಾಥ್ ಸಂಗೀತ, ಕಾಂತರಾಜ್ ಸಂಭಾಷಣೆ ಹಾಗೂ ಸುಧಾಕರ್ ರಾಜ್ ಛಾಯಾಗ್ರಹಣ ಚಿತ್ರಕ್ಕಿದೆ. ಸ್ವತಃ ನಿರ್ದೇಶಕ ಪ್ರಕಾಶ್ ಬಂಡವಾಳ ಹೂಡಿ ಸಿನಿಮಾ ನಿರ್ಮಾಣ ಮಾಡಿದ್ದಾರೆ.
ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ಚಿತ್ರತಂಡ ಬೆನ್ನಿಗೆ ನಿಂತಿದೆ. ಕನ್ನಡದಲ್ಲಿ ಮಾತ್ರ 'ಡೆವಿಲ್' ಸಿನಿಮಾ ಬಿಡುಗಡೆ ಆಗ್ತಿದೆ. ದೊಡ್ಡಮಟ್ಟದಲ್ಲಿ ಸಿನಿಮಾ ರಿಲೀಸ್ ಪ್ಲ್ಯಾನ್ ನಡೀತಿದೆ. ಹಿಂದಿನ ದಿನ ಯಾವುದೇ ಪ್ರೀಮಿಯರ್ ಶೋಗಳು ಇರುವುದಿಲ್ಲ. ಗುರುವಾರ ಬೆಳಗ್ಗೆ 6.30ಕ್ಕೆ ಚಿತ್ರದ ಪ್ರದರ್ಶನಗಳು ಆರಂಭವಾಗಲಿದೆ.


Click it and Unblock the Notifications











