»   » ಮೇ 9ಕ್ಕೆ 'ಜಗ್ಗುದಾದ' ತಂಡದಿಂದ ಅಭಿಮಾನಿಗಳಿಗೆ ಸಿಹಿ ಸುದ್ದಿ

ಮೇ 9ಕ್ಕೆ 'ಜಗ್ಗುದಾದ' ತಂಡದಿಂದ ಅಭಿಮಾನಿಗಳಿಗೆ ಸಿಹಿ ಸುದ್ದಿ

Posted By:
Subscribe to Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ದಕ್ಷಿಣ ಭಾರತದ ಖ್ಯಾತ ನಟಿ ದೀಕ್ಷಾ ಸೇಠ್ ಮುಖ್ಯ ಭೂಮಿಕೆಯಲ್ಲಿ ಮಿಂಚಿರುವ 'ಜಗ್ಗುದಾದಾ' ಚಿತ್ರದಿಂದ ಮೇ 9ರಂದು ಅಭಿಮಾನಿಗಳಿಗೆ ಒಂದು ಸಿಹಿ ಸುದ್ದಿ ಇದೆ.

ಏನಪ್ಪಾ ಅನ್ಕೊಂಡ್ರಾ?, ಹೌದು ದರ್ಶನ್ ಅವರ 'ಜಗ್ಗುದಾದಾ' ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮ ಮುಂದಿನ ತಿಂಗಳು ಮೇ 9 ರಂದು ನಡೆಯಲಿದೆ. ಸಂಗೀತ ನಿರ್ದೇಶಕ ವಿ.ಹರಿಕೃಷ್ಣ ಚಿತ್ರದ ಹಾಡುಗಳಿಗೆ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ.[ದಾಖಲೆ ಮೊತ್ತಕ್ಕೆ ಮಾರಾಟವಾದ 'ಜಗ್ಗುದಾದಾ' ಹಿಂದಿ ಡಬ್ಬಿಂಗ್ ಹಕ್ಕು]


Darshan's 'Jaggu Dada' Audio release on May 9th

ನಿರ್ದೇಶಕ ರಾಘವೇಂದ್ರ ಅವರ ನಿರ್ಮಾಣ ಹಾಗೂ ನಿರ್ದೇಶನದ ಜೊತೆಗೆ ಚೊಚ್ಚಲ ಪ್ರಯತ್ನದಲ್ಲಿ ಮೂಡಿಬರುತ್ತಿರುವ 'ಜಗ್ಗುದಾದಾ' ಚಿತ್ರದ ಶೂಟಿಂಗ್ ಕೊನೆಯ ಹಂತದಲ್ಲಿದ್ದು, ಮುಂದಿನ ತಿಂಗಳು ಹಾಡುಗಳ ಬಿಡುಗಡೆ ಅದ್ದೂರಿಯಾಗಿ ನೆರವೇರಲಿದೆ.


ಇದೇ ಮೊದಲ ಬಾರಿಗೆ ವಿಭಿನ್ನ ಪಾತ್ರದಲ್ಲಿ ಮಿಂಚುತ್ತಿರುವ ನಟ ದರ್ಶನ್ ಅವರು ಚಿತ್ರದಲ್ಲಿ ಕಾಮಿಡಿ ಡಾನ್ ಆಗಿ ಮಿಂಚಲಿದ್ದಾರೆ. ಇವರಿಗೆ ಖಳನಟ ರವಿಶಂಕರ್ ಅವರು ಸಾಥ್ ಕೊಡಲಿದ್ದಾರೆ.[ದರ್ಶನ್ ಅಭಿನಯದ 'ಜಗ್ಗು ದಾದಾ' ಟೈಟಲ್ ಟೀಸರ್ ನೋಡಿದ್ರಾ.?]


Darshan's 'Jaggu Dada' Audio release on May 9th

ಇನ್ನುಳಿದಂತೆ ನಟ ಅಚ್ಯುತ್ ಕುಮಾರ್, ನಟ ಸೃಜನ್ ಲೋಕೇಶ್, ಮುಂತಾದವರು ಬಾಕ್ಸಾಫೀಸ್ ಸುಲ್ತಾನ ದರ್ಶನ್ ಅವರಿಗೆ ಈ ಚಿತ್ರದಲ್ಲಿ ಸಾಥ್ ನೀಡಲಿದ್ದಾರೆ. ದಾಖಲೆ ಮೊತ್ತಕ್ಕೆ ಹಿಂದಿ ಡಬ್ಬಿಂಗ್ ಹಕ್ಕು ಸೇಲ್ ಆಗುವ ಮೂಲಕ ಬಿಡುಗಡೆಗೆ ಮುನ್ನವೇ ದಾಖಲೆ ಹುಟ್ಟುಹಾಕಿರುವ 'ಜಗ್ಗುದಾದಾ' ಚಿತ್ರಕ್ಕೆ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

English summary
Kannada Actor Darshan's Kannada Movie 'Jaggu Dada' is almost complete and the songs of the film being composed by V Harikrishna is all set to be released on the 09th of May. Actress Deeksha Seth in the lead role. The movie is direted by Raghavendra Hegde.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada