»   » ದಾಖಲೆ ಮೊತ್ತಕ್ಕೆ ಮಾರಾಟವಾದ 'ಜಗ್ಗುದಾದಾ' ಹಿಂದಿ ಡಬ್ಬಿಂಗ್ ಹಕ್ಕು

ದಾಖಲೆ ಮೊತ್ತಕ್ಕೆ ಮಾರಾಟವಾದ 'ಜಗ್ಗುದಾದಾ' ಹಿಂದಿ ಡಬ್ಬಿಂಗ್ ಹಕ್ಕು

Posted By:
Subscribe to Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಚಿತ್ರಗಳಿಗೆ ಮಾರ್ಕೆಟ್ ಸಮಸ್ಯೆ ಉಂಟಾಗೋದಿಲ್ಲ ಅನ್ನೋದಕ್ಕೆ ಇದು ಉತ್ತಮ ನಿದರ್ಶನ. ಅದಕ್ಕೆ ದರ್ಶನ್ ಅವರು ಕನ್ನಡ ಚಿತ್ರರಂಗದ ಪಾಲಿಗೆ ಬಾಕ್ಸಾಫೀಸ್ ಸುಲ್ತಾನ.

ಹೌದು ದರ್ಶನ್ ಅವರ 'ಜಗ್ಗುದಾದಾ' ಚಿತ್ರತಂಡದಿಂದ ಗುಡ್ ನ್ಯೂಸ್ ಒಂದು ಹೊರಬಿದ್ದಿದೆ. ಈಗಾಗಲೇ ಪೋಸ್ಟ್ ಪ್ರೊಡಕ್ಷನ್ಸ್ ಹಂತದಲ್ಲಿರುವ ಈ ಸಿನಿಮಾ ಬಿಡುಗಡೆಗೆ ಮುನ್ನವೇ ಸದ್ದು ಮಾಡುತ್ತಿದೆ.[ದರ್ಶನ್ ಅಭಿನಯದ 'ಜಗ್ಗು ದಾದಾ' ಟೈಟಲ್ ಟೀಸರ್ ನೋಡಿದ್ರಾ.?]

Darshan's 'Jaggu Dada' hindi version goes Rs 1.50 Crore

ಚಿತ್ರದ ಬಿಡುಗಡೆಯ ಡೇಟ್ ಅನೌನ್ಸ್ ಆಗುವ ಮುಂಚೆಯೇ ಹಿಂದಿ ಡಬ್ಬಿಂಗ್ ರೈಟ್ಸ್ ಬರೋಬ್ಬರಿ ಒಂದೂವರೆ ಕೋಟಿ ( 1.50 ) ರೂಪಾಯಿಗೆ ಸೇಲ್ ಆಗಿದೆ. ಆದ್ದರಿಂದ 'ಜಗ್ಗುದಾದಾ' ಸಿನಿಮಾ ಬಿಡುಗಡೆ ಆಗುವ ಮುನ್ನವೇ ಸಾಕಷ್ಟು ಹವಾ ಕ್ರಿಯೇಟ್ ಮಾಡುತ್ತಿದೆ.

ಇನ್ನು ಬರೀ ಹಿಂದಿ ಭಾಷೆ ಒಂದರ ಡಬ್ಬಿಂಗ್ ಹಕ್ಕು ಇಷ್ಟರಮಟ್ಟಿಗೆ ಸೇಲ್ ಆಗಿರಬೇಕಾದ್ರೆ, ಬೇರೆ ಭಾಷೆಯ ಡಬ್ಬಿಂಗ್ ಹಕ್ಕು, ಸ್ಯಾಟಲೈಟ್ ಹಕ್ಕು ಸೇಲ್ ಆಗುವಾಗ 'ಜಗ್ಗುದಾದಾ' ಫುಲ್ ಲಾಭ ತಂದುಕೊಡಬಹುದು ಅನ್ನೋದನ್ನ ಚಿತ್ರತಂಡದವರು ಈಗಲೇ ಸಣ್ಣ ಲೆಕ್ಕಾಚಾರ ಹಾಕುತ್ತಿದ್ದಾರೆ.[ಅದ್ಧೂರಿ ಸೆಟ್ ನಲ್ಲಿ 'ಜಗ್ಗುದಾದಾ' ದರ್ಶನ್ ಭರ್ಜರಿ ಸ್ಟೆಪ್]

ಇದೇ ಮೊದಲ ಬಾರಿಗೆ ಭೂಗತ ಲೋಕದ ಡಾನ್ ಒಬ್ಬನ ಕಥೆಯಾಧರಿತ 'ಜಗ್ಗುದಾದಾ' ಚಿತ್ರದಲ್ಲಿ ವಿಭಿನ್ನ ಪಾತ್ರದಲ್ಲಿ ಮಿಂಚುತ್ತಿರುವ ನಟ ದರ್ಶನ್ ಅವರಿಗೆ ದಕ್ಷಿಣ ಭಾರತದ ಖ್ಯಾತ ನಟಿ ದೀಕ್ಷಾ ಸೇಠ್ ಅವರು ನಾಯಕಿಯಾಗಿ ಸಾಥ್ ನೀಡಿದ್ದಾರೆ.[ಇದು ದರ್ಶನ್ ಅವರು ರೋಮ್ಯಾನ್ಸ್ ಮಾಡೋ ಟೈಮ್ ಕಣ್ರೀ.!]

ನಿರ್ದೇಶಕ ರಾಘವೇಂದ್ರ ಹೆಗಡೆ ಆಕ್ಷನ್-ಕಟ್ ಹೇಳುತ್ತಿರುವ ಚಿತ್ರದಲ್ಲಿ ಇನ್ನುಳಿದಂತೆ ನಟ ಅಚ್ಯುತ್ ಕುಮಾರ್, ನಟ ಸೃಜನ್ ಲೋಕೇಶ್, ಖಳನಟ ರವಿಶಂಕರ್ ಮುಂತಾದವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದ ಶೂಟಿಂಗ್ ಸ್ಟಿಲ್ಸ್ ನೋಡಿ ಕೆಳಗಿನ ಸ್ಲೈಡುಗಳಲ್ಲಿ...(ಚಿತ್ರಕೃಪೆ: ಫೇಸ್ ಬುಕ್ಕ್)

-
-
-
-
-
-
-
-
-
-
-
-
-
-
-
-
-
-
-
-
-
English summary
Kannada Actor Darshan's Kannada Movie 'Jaggu Dada' Hindi dubbed version goes Rs 1.5 Crore. Kannada Actor Darshan, Actress Deeksha Seth in the lead role. The movie is direted by Raghavendra Hegde.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada