Just In
Don't Miss!
- Lifestyle
ದಿನ ಭವಿಷ್ಯ: ನಿಮ್ಮ ರಾಶಿಗೆ ಶನಿವಾರ ದಿನ ಹೇಗಿರಲಿದೆ ನೋಡಿ
- News
ದಿಢೀರ್ ಕೋರ್ಟ್ ಮೆಟ್ಟಿಲೇರಿದ್ದಕ್ಕೆ ಕಾರಣ ನೀಡಿದ ಸಚಿವ ಕೆ. ಸುಧಾಕರ್
- Education
KSCCF Recruitment 2021: 45 ಲೆಕ್ಕಿಗರು, ಎಫ್ಡಿಎ ಮತ್ತು ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- Automobiles
ಮಾರ್ಚ್ ತಿಂಗಳಿನಲ್ಲಿ ಹ್ಯುಂಡೈ ವಿವಿಧ ಕಾರುಗಳ ಖರೀದಿ ಮೇಲೆ ಭರ್ಜರಿ ರಿಯಾಯಿತಿ
- Sports
ಐಎಸ್ಎಲ್: ಸಮಬಲ ಸಾಧಿಸಿದ ಗೋವಾ ಎಫ್ಸಿ, ಮುಂಬೈ ಎಫ್ಸಿ
- Finance
ಅಡಿಕೆ, ಕಾಫೀ, ಮೆಣಸು ಹಾಗೂ ರಬ್ಬರ್ನ ಮಾ. 05ರ ಮಾರುಕಟ್ಟೆ ದರ ಇಲ್ಲಿದೆ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಡಿ ಬಾಸ್ ದರ್ಶನ್ ಹೀರೋ ಆಗಿ 19 ವರ್ಷ: ಅಂದು ಹೇಗಿತ್ತು 'ಮೆಜೆಸ್ಟಿಕ್' ದಾಸನ ಹವಾ?
ಸ್ಯಾಂಡಲ್ ವುಡ್ ಬಾಕ್ಸ್ ಆಫೀಸ್ ಸುಲ್ತಾನ್, ಅಭಿಮಾನಿಗಳ ನೆಚ್ಚಿನ ದಾಸ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಇಂದು ತುಂಬ ವಿಶೇಷವಾದ ದಿನ. ಅಭಿಮಾನಿಗಳ ಪ್ರೀತಿಯ ಡಿ ಬಾಸ್ ಆಗಿ ಚಿತ್ರರಂಗವಾಳುತ್ತಿರುವ ದರ್ಶನ್, ಇದೆ ದಿನ ಅಂದರೆ 19 ವರ್ಷಗಳ ಹಿಂದೆ ನಾಯಕನಾಗಿ ಸಿನಿಪ್ರೇಕ್ಷಕರ ಮುಂದೆ ಬಂದಿದ್ದರು. ದರ್ಶನ್ ಹೀರೋ ಆಗಿ ಬಣ್ಣ ಹಚ್ಚಿದ ಮೆಜೆಸ್ಟಿಕ್ ಸಿನಿಮಾ ರಿಲೀಸ್ ಆಗಿ ಇವತ್ತಿಗೆ ಬರೋಬ್ಬರಿ 19ವರ್ಷಗಳು ಕಳೆದಿವೆ.
ದರ್ಶನ್ ನಾಯಕನಾಗಿ ತೆರೆಮೇಲೆ ಮಿಂಚುವ ಮೊದಲೇ ಚಿತ್ರರಂಗಕ್ಕೆ ಕಾಲಿಟ್ಟಿದ್ದರು. ಒಬ್ಬ ತಂತ್ರಜ್ಞನಾಗಿ ಬಣ್ಣದ ಲೋಕದಲ್ಲಿ ವೃತ್ತಿ ಜೀವನ ಪ್ರಾರಂಭಸಿದ್ದರು. ಆದರೆ ನಾಯಕನಾಗಿ ಮಿಂಚಿದ್ದು ಮೆಜೆಸ್ಟಿಕ್ ಸಿನಿಮಾ ಮೂಲಕ. ಅಪ್ಪ ತೂಗುದೀಪ ಶ್ರೀನಿವಾಸ್ ಕನ್ನಡ ಚಿತ್ರರಂಗಕಂಡ ಲೆಜೆಂಡ್ ಕಲಾವಿದ. ಆದರು ಮಗ ಹೀರೋ ಆಗಿ ಮಿಂಚುವುದು ಅಷ್ಟು ಸುಲಭವಾಗಿರಲಿಲ್ಲ.
ರಾಬರ್ಟ್ ಟೀಸರ್ ಆಯ್ತು, ಈಗ ತೆಲುಗಿನಲ್ಲಿ ಮೊದಲ ಹಾಡು ರಿಲೀಸ್
ಆರಂಭದಲ್ಲಿ ಸಾಕಷ್ಟು ಕಷ್ಟಪಟ್ಟಿರುವ ದರ್ಶನ್ ಅವರ ಶ್ರಮದ ಫಲ ಇಂದು ಸ್ಟಾರ್ ಆಗಿ ಬಾಕ್ಸ್ ಆಫೀಸ್ ಸುಲ್ತಾನ್ ಆಗಿ ಸ್ಯಾಂಡಲ್ ವುಡ್ ನಲ್ಲಿ ಮಿಂಚುತ್ತಿದ್ದಾರೆ. ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನು ಸಂಪಾದಿಸಿದ್ದಾರೆ. ಮುಂದೆ ಓದಿ...

ದರ್ಶನ್ ನಾಯಕನಾಗಿ ಎಂಟ್ರಿ ಕೊಟ್ಟು 19 ವರ್ಷ
ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕನಟರಾಗಿ ಅಭಿನಯಿಸಿದ ಮೊದಲ ಚಿತ್ರ 'ಮೆಜೆಸ್ಟಿಕ್'. ಫೆಬ್ರವರಿ 08ಕ್ಕೆ 'ಮೆಜೆಸ್ಟಿಕ್' ಸಿನಿಮಾ ರಾಜ್ಯದಾದ್ಯಂತ ರಿಲೀಸ್ ಆಗಿತ್ತು. ಈ ಇದೀಗ 19 ವರ್ಷಗಳೇ ಕಳೆದಿದೆ. ದರ್ಶನ್ ಬೆಳ್ಳಿತೆರೆಯಲ್ಲಿ ದರ್ಶನ್ ಹೀರೋಯಿಸಂ ಶುರುವಾಗಿ ಇಂದಿಗೆ 19 ವರ್ಷ ಆಗಿದೆ.

ಪಿ ಎನ್ ಸತ್ಯ ನಿರ್ದೇಶನ, ರೇಖಾ ನಾಯಕಿ
'ಮೆಜೆಸ್ಟಿಕ್' 2002ರಲ್ಲಿ ಬಿಡುಗಡೆಯಾಗಿದೆ. ನಿರ್ದೇಶಕ ಪಿ.ಎನ್.ಸತ್ಯ ಈ ಚಿತ್ರವನ್ನ ನಿರ್ದೇಶನ ಮಾಡಿದ್ದರು. ಎಂ.ಜಿ.ರಾಮಮೂರ್ತಿ ಮತ್ತು ಬಾ.ಮಾ ಹರೀಶ್ ನಿರ್ಮಾಣ ಮಾಡಿದ್ದಾರೆ. ಸಾಧುಕೋಕಿಲಾ ಸಂಗೀತ ನೀಡಿದ್ದರು. ಅಣಜಿ ನಾಗರಾಜ್ ಛಾಯಗ್ರಹಣವಿತ್ತು. ಚಿತ್ರದಲ್ಲಿ ದರ್ಶನ್ ಗೆ ನಾಯಕಿಯಾಗಿ ರೇಖಾ ಕಾಣಿಸಿಕೊಂಡಿದ್ದರು. ದರ್ಶನ್ ಜೊತೆ ನಾಯಕಿಯಾಗಿ ಮಿಂಚಿದ ಮೊದಲ ನಾಯಕಿ ಎನ್ನುವ ಖ್ಯಾತಿ ಕೂಡ ರೇಖಾ ಅವರಿಗಿದೆ.
ಶರಣ್ ಹುಟ್ಟುಹಬ್ಬಕ್ಕೆ ವಿಶ್ ಮಾಡಿದ ಚಾಲೆಜಿಂಗ್ ಸ್ಟಾರ್ ದರ್ಶನ್

ಮೆಜೆಸ್ಟಿಕ್ ಚಿತ್ರಕ್ಕೂ ಮೊದಲು ಆರೇಳು ಸಿನಿಮಾ ಮಾಡಿದ್ದ ದರ್ಶನ್
'ಮೆಜೆಸ್ಟಿಕ್' ಸಿನಿಮಾ ತೆರೆಕಾಣುವುದಕ್ಕಿಂತ ಮೊದಲು ದರ್ಶನ್ ಸುಮಾರು ಆರೇಳು ಚಿತ್ರಗಳಲ್ಲಿ ಸಣ್ಣ ಪುಟ್ಟ ಪಾತ್ರಗಳನ್ನ ನಿರ್ವಹಿಸಿದ್ದರು. ಆದ್ರೆ, 'ಮೆಜೆಸ್ಟಿಕ್' ನಂತರ ದರ್ಶನ್ ಖದರ್ ಸಂಪೂರ್ಣವಾಗಿ ಬದಲಾಯಿತು. ಮಾಸ್ ಹೀರೋ ಎನ್ನುವ ಪಟ್ಟ ಕೂಡ ಸಿಕ್ಕಿತು. ಅಲ್ಲಿಂದ ಇಲ್ಲಿಯವರೆಗೂ ಸುಮಾರು 50ಕ್ಕೂ ಅಧಿಕ ಚಿತ್ರಗಳಲ್ಲಿ ದರ್ಶನ್ ಅಭಿನಯಿಸಿದ್ದಾರೆ.

ಖ್ಯಾತಿಗಳಿಸಿದ ದಾಸ ಪಾತ್ರ
'ಮೆಜೆಸ್ಟಿಕ್' ಚಿತ್ರದಲ್ಲಿ ದರ್ಶನ್ ಎರಡು ಶೇಡ್ ಗಳಲ್ಲಿ ಕಾಣಿಸಿಕೊಂಡಿದ್ದರು. ಒಂದು ಕಡೆ 'ದಾಸ' ಎಂಬ ರೌಡಿ ಪಾತ್ರವಾದರೇ, ಮತ್ತೊಂದೆಡೆ ಪ್ರಜ್ವಲ್ ಎಂಬ ಲವರ್ ಬಾಯ್ ಪಾತ್ರ. ದಾಸನ ಗೆಟಪ್, ಪಾತ್ರವನ್ನು ಚಿತ್ರಾಭಿಮಾನಿಗಳು ಮರೆಯಲು ಸಾಧ್ಯವಿಲ್ಲ. ಮುಂದೆ 'ದಾಸ' ಎಂಬ ಹೆಸರಿನಲ್ಲೇ ಸಿನಿಮಾ ಕೂಡ ಮಾಡಿದರು. ಈಗಲೂ ಚಾಲೆಂಜಿಂಗ್ ಸ್ಟಾರ್ 'ದಾಸ ದರ್ಶನ್' ಎಂದೇ ಗುರುತಿಸಿಕೊಳ್ಳುತ್ತಾರೆ.
ಭಾರಿ ಮೊತ್ತಕ್ಕೆ ರಾಬರ್ಟ್ ತೆಲುಗು ವಿತರಣೆ ಹಕ್ಕು ಪಡೆದ ನಿರ್ಮಾಪಕ

ಅಭಿಮಾನಿಗಳ ಸಂಭ್ರಮ
'ಮೆಜೆಸ್ಟಿಕ್' ಚಿತ್ರಕ್ಕೆ 19 ವರ್ಷ ತುಂಬಿದ ಸಂತೋಷವನ್ನು, ದರ್ಶನ್ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸಂಭ್ರಮಿಸುತ್ತಿದ್ದಾರೆ. ಫೇಸ್ ಬುಕ್, ಟ್ವಿಟ್ಟರ್ ಗಳಲ್ಲಿ 'ದಾಸ'ನ ಹುಟ್ಟುಹಬ್ಬ ಆಚರಿಸುತ್ತಿದ್ದಾರೆ.