Darshan New Movie: ದರ್ಶನ್ ಹೊಸ ಸಿನಿಮಾ ಘೋಷಣೆ: ನಿರ್ದೇಶಕ ಯಾರು?

ನಟ ದರ್ಶನ್ ಈಗಾಗಲೇ ಸಿನಿಮಾ ಒಂದರ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಆ ಸಿನಿಮಾ ಬಿಡುಗಡೆ ಆಗುವ ಮುನ್ನವೇ ಹೊಸ ಸಿನಿಮಾ ಘೋಷಿಸಿದ್ದಾರೆ.

ದರ್ಶನ್ ಪ್ರಸ್ತುತ 'ಕ್ರಾಂತಿ' ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕಾರ್ಯಗಳು ಇನ್ನೂ ಬಾಕಿ ಇವೆ. ಸಿನಿಮಾದ ಬಿಡುಗಡೆ ದಿನಾಂಕ ಸಹ ಇನ್ನೂ ಘೋಷಣೆ ಆಗಿಲ್ಲ. ಈ ನಡುವೆ ದರ್ಶನ್‌ರ ಹೊಸ ಸಿನಿಮಾದ ಘೋಷಣೆ ಮಾಡಲಾಗಿದೆ.

ದರ್ಶನ್‌ರ ಹೊಸ ಸಿನಿಮಾಕ್ಕೆ ಎಸ್ ಸಚ್ಚಿದಾನಂದ ಇಂಡುವಾಳು ಬಂಡವಾಳ ಹೂಡುತ್ತಿದ್ದು, ನಿರ್ಮಾಪಕರಾಗಿ ಇದು ಇವರಿಗೆ ಮೊದಲ ಸಿನಿಮಾ. ಸಂಸದೆ ಸುಮಲತಾ ಅವರ ಬೆಂಬಲಿಗರಾಗಿರುವ ಎಸ್ ಸಚ್ಚಿದಾನಂದ್ ಶ್ರೀರಂಗಪಟ್ಟಣ ಭಾಗದಲ್ಲಿ ಪ್ರಮುಖ ರಾಜಕೀಯ ಮುಖಂಡರಲ್ಲಿ ಒಬ್ಬರು.

ಇನ್ನು ದರ್ಶನ್‌ರ ಹೊಸ ಸಿನಿಮಾವನ್ನು ಚಂದನವನದ ಹಿಟ್ ನಿರ್ದೇಶಕರಲ್ಲಿ ಒಬ್ಬರೆನಿಸಿಕೊಂಡಿರುವ ತರುಣ್ ಸುಧೀರ್ ನಿರ್ದೇಶನ ಮಾಡುತ್ತಿದ್ದಾರೆ. ಈ ಜೋಡಿ ಈ ಹಿಂದೆ 'ರಾಬರ್ಟ್' ಸಿನಿಮಾ ಮೂಲಕ ಒಂದು ಹಿಟ್ ಸಿನಿಮಾವನ್ನು ಈಗಾಗಲೇ ನೀಡಿದೆ. ಅದೇ ಮಾದರಿಯಲ್ಲಿ ಮತ್ತೊಂದು ಹಿಟ್ ಸಿನಿಮಾ ನೀಡಲು ಈ ಜೋಡಿ ಒಂದಾಗಿದೆ.

ಪ್ರಸ್ತುತ ಸಿನಿಮಾದ ನಿರ್ಮಾಪಕ ಹಾಗೂ ನಿರ್ದೇಶಕ ಇಬ್ಬರೇ ಅಂತಿಮವಾಗಿದ್ದು, ಸಿನಿಮಾದ ಹೆಸರು, ಇತರೆ ಪಾತ್ರವರ್ಗ ಅಂತಿಮವಾಗಿಲ್ಲ.

Darshans New Movie Announced, S Sachidananda Indugol Producing The Movie

ಸಿನಿಮಾ ನಿರ್ಮಾಣ ಮಾಡುತ್ತಿರುವ ಎಸ್ ಸಚ್ಚಿದಾನಂದ, ಶ್ರೀರಂಗಪಟ್ಟಣ ಬಳಿಯ ಇಂಡುವಾಳ ಗ್ರಾಮದವರಾಗಿದ್ದು, ಈ ಮೊದಲು ಕಾಂಗ್ರೆಸ್ ಯುವ ಮುಖಂಡರಾಗಿದ್ದರು. ಕಳೆದ ಲೋಕಸಭೆ ಚುನಾವಣೆ ಸಮಯದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಪರವಾಗಿ ಕೆಲಸ ಮಾಡಿದ್ದರು. ಅದೇ ಸಮಯದಲ್ಲಿ ದರ್ಶನ್ ಸಹ ಸುಮಲತಾ ಪರವಾಗಿ ಪ್ರಚಾರ ಮಾಡಿದ್ದರು. ಬಳಿಕ ಸಚ್ಚಿದಾನಂದ ಅವರನ್ನು ಕಾಂಗ್ರೆಸ್ ಪಕ್ಷವು ಉಚ್ಛಾಟನೆ ಮಾಡಲಾಗಿದೆ. ಇದೀಗ ಅವರು ಬಿಜೆಪಿ ಪಕ್ಷ ಸೇರ್ಪಡೆ ಆಗಿದ್ದಾರೆ.

ಸಚ್ಚಿದಾನಂದ್ ಅವರಿಗೆ ಇದು ಮೊದಲ ಸಿನಿಮಾ ಆಗಿದ್ದು, ಮೊದಲ ಸಿನಿಮಾದಲ್ಲಿಯೇ ದರ್ಶನ್ ಕಾಲ್‌ಶೀಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಅವರ ಮುಂದಿನ ಪಯಣ ಹೇಗಿರಲಿದೆ ಕಾದು ನೋಡಬೇಕಿದೆ.

ಮತ್ತೊಂದೆಡೆ ದರ್ಶನ್ ನಟನೆಯ 'ಕ್ರಾಂತಿ' ಸಿನಿಮಾದ ಚಿತ್ರೀಕರಣ ಭರದಿಂದ ಸಾಗಿದೆ. ಈ ಹಿಂದೆ ದರ್ಶನ್ ನಟನೆಯ 'ಯಜಮಾನ' ನಿರ್ಮಾಣ ಮಾಡಿದ್ದ ತಂಡವೇ ಈ ಸಿನಿಮಾಕ್ಕಾಗಿಯೂ ಕೆಲಸ ಮಾಡುತ್ತಿದೆ. ಹರಿಕೃಷ್ಣ 'ಕ್ರಾಂತಿ' ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ.

ದರ್ಶನ್, 'ರಾಜವೀರ ಮದಕರಿ ನಾಯಕ' ಸಿನಿಮಾದಲ್ಲಿ ನಟಿಸುತ್ತಿದ್ದರು. ರಾಜೇಂದ್ರ ಸಿಂಗ್ ಬಾಬು ನಿರ್ದೇಶನ ಮಾಡುತ್ತಿದ್ದ ಈ ಸಿನಿಮಾವನ್ನು ರಾಕ್ ಲೈನ್ ವೆಂಕಟೇಶ್ ನಿರ್ಮಾಣ ಮಾಡುತ್ತಿದ್ದರು. ಸಿನಿಮಾದ ಮೊದಲ ಶೆಡ್ಯೂಲ್ ಚಿತ್ರೀಕರಣವೂ ಮುಗಿದಿತ್ತು. ಆದರೆ ಯಾಕೋ ದರ್ಶನ್ ಆ ಸಿನಿಮಾದ ಚಿತ್ರೀಕರಣವನ್ನು ನಿಲ್ಲಿಸಿದ್ದಾರೆ. ಈ ಸಮಯಕ್ಕೆ ಐತಿಹಾಸಿಕ ಸಿನಿಮಾ ಸೂಕ್ತವಲ್ಲ ಎಂಬ ಕಾರಣಕ್ಕೆ ಸಿನಿಮಾವನ್ನು ತಡೆ ಹಿಡಿದಿದ್ದಾರಂತೆ ದರ್ಶನ್.

More from Filmibeat

English summary
Darshan's new movie announced S Sachidanand Indugol producing the movie. Tarun Sudhir directing the movie. This is Sachidanand's first movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X