ದರ್ಶನ್ 'ಡೆವಿಲ್' ಚಿತ್ರಕ್ಕೆ ಡಾನ್ ಬ್ರೌನ್ ಕಾದಂಬರಿಗಳೇ ಸ್ಫೂರ್ತಿ; ಏನಿದು ಇಲ್ಯುಮಿನಾಟಿ ಕಾನ್ಸೆಪ್ಟ್?
ಪ್ರಕಾಶ್ ವೀರ್ ನಿರ್ದೇಶನದ 'ಡೆವಿಲ್' ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಈಗಾಗಲೇ ಚಿತ್ರದ ಪೋಸ್ಟರ್ ಹಾಗೂ ಟೀಸರ್‌ಗಳು ಬಿಡುಗಡೆಯಾಗಿ ಅಭಿಮಾನಿಗಳ ಗಮನ ಸೆಳೆದಿದೆ. ಅಕ್ಟೋನಬರ್ ಕೊನೆಗೆ ಸಿನಿಮಾ ತೆರೆಗೆ ಬರುವ ಸಾಧ್ಯತೆಯಿದೆ. ಇನ್ನು ಸಿನಿಮಾ ಕಥೆ ಏನು? ದರ್ಶನ್ ಪಾತ್ರ ಏನು ಎನ್ನುವ ಕುತೂಹಲ ಅಭಿಮಾನಿಗಳಲ್ಲಿದೆ.
'ತಾರಕ್' ಬಳಿಕ ದರ್ಶನ್ ಹಾಗೂ ಪ್ರಕಾಶ್ ವೀರ್ 'ಡೆವಿಲ್' ಚಿತ್ರಕ್ಕಾಗಿ ಮತ್ತೆ ಕೈ ಜೋಡಿಸಿದ್ದಾರೆ. 'ನಮ್ಮ ಮನೆಯಲೊಂದು ಪುಟ್ಟ ಪಾಪು ಇರುವುದು' ಎಂಬ ಡೈಲಾಗ್ ಇರುವ ಟೀಸರ್ ಬಂದು ಹಿಟ್ ಆಗಿತ್ತು. ಅದರಲ್ಲಿ ದರ್ಶನ್ ಲುಕ್, ಮ್ಯಾನರಿಸಂ ಅಭಿಮಾನಿಗಳಿಗೆ ಇಷ್ಟವಾಗಿತ್ತು. ಆದರೆ ಕಾರಣಾಂತರಗಳಿಂದ ಸಿನಿಮಾ ಚಿತ್ರೀಕರಣ ತಡವಾಯಿತು. ಸದ್ಯ ಥಾಯ್ಲೆಂಡ್‌ನಲ್ಲಿ ಕೊನೆ ಹಂತದ ಚಿತ್ರೀಕರಣ ನಡೀತಿದೆ. ಒಂದು ಹಾಡು ಸೆರೆ ಹಿಡಿದರೆ ಚಿತ್ರಕ್ಕೆ ಕುಂಬಳಕಾಯಿ.

'ಡೆವಿಲ್' ಎಂಬ ಖಡಕ್ ಟೈಟಲ್‌ನಿಂದಲೇ ಸಿನಿಮಾ ಸದ್ದು ಮಾಡ್ತಿದೆ. ಇನ್ನು ಚಿತ್ರದ ಕಥೆ ಏನು? ಎನ್ನುವ ಸುಳಿವು ಸಿಕ್ಕಿಲ್ಲ. ಆದರೆ ಅಭಿಮಾನಿಗಳು ಈ ಬಗ್ಗೆ ಸಾಕಷ್ಟು ರೀಸರ್ಚ್ ಮಾಡುತ್ತಿದ್ದಾರೆ. ಚಿತ್ರದ ಪೋಸ್ಟರ್, ಟೀಸರ್ ಹಾಗೂ ಮೇಕಿಂಗ್ ವೀಡಿಯೋದಲ್ಲಿರುವ ಕೆಲ ಸಂಗತಿಗಳನ್ನು ಆಧರಿಸಿ ಅಭಿಮಾನಿಯೊಬ್ಬರು ಚಿತ್ರದ ಕಥೆ ಏನು? ಕಾನ್ಸೆಪ್ಟ್ ಏನಿರಬಹುದು? ಎಂದು ಗೆಸ್ ಮಾಡಿದ್ದಾರೆ. ಅಮೆರಿಕದ ಲೇಖಕ ಡಾನ್ ಬ್ರೌನ್ ಬರೆದ 3 ಕಾದಂಬರಿಗಳೇ 'ಡೆವಿಲ್' ಚಿತ್ರದ ಕಥೆಗೆ ಸ್ಫೂರ್ತಿ ಎಂದು ಬಲವಾದ ಲೆಕ್ಕಾಚಾರ ಮುಂದಿಟ್ಟಿದ್ದಾರೆ.
'ಡೆವಿಲ್' ಚಿತ್ರದ ಸ್ಯಾಂಪಲ್‌ಗಳಲ್ಲಿ ಬಳಸಿರುವ ಕೆಲ ಲೋಗೊಗಳು, ಚಿತ್ರಗಳು ಕುತೂಹಲ ಮೂಡಿಸಿದೆ. ಇದಕ್ಕೆಲ್ಲಾ ಕಾರಣವೂ ಇದೆ. ಇನ್ನು ಇಲ್ಯುಮಿನಾಟಿ ಕಾನ್ಸೆಪ್ಟ್ ಅನ್ನು ಕೂಡ ಚಿತ್ರದಲ್ಲಿ ಬಳಸಿಕೊಂಡಿದ್ದಾರೆ ಎಂದು ಅಭಿಮಾನಿಗಳು ಭಾವಿಸಿದ್ದಾರೆ. ಡಾನ್ ಬ್ರೌನ್ ಬರೆದ 'ಲೆ ಸಿಂಬೋಲ್ ಪೆರ್ಡು', 'ಇಲ್ಯುಮಿನಾಟಿ' ಹಾಗೂ 'ಏಂಜಲ್ಸ್ ಅಂಡ್ ಡಿಮೊನ್ಸ್' ಎಂಬ ಕಾದಂಬರಿಗಳನ್ನು ಆಧರಿಸಿ ಪ್ರಕಾಶ್ 'ಡೆವಿಲ್' ಸಿನಿಮಾ ಕಥೆ ಮಾಡಿದ್ದಾರೆ ಎಂದು ಅರುಣ್ ಎಂಬುವವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.
ಚಿತ್ರದಲ್ಲಿ ಕರುನಾಡ ಪ್ರಜಾ ಪಕ್ಷದಿಂದ ಗೆದ್ದು ಮುಖ್ಯಮಂತ್ರಿ ಆಗಿ ದರ್ಶನ್ ಕಾಣಿಸಿಕೊಳ್ಳುತ್ತಿದ್ದಾರೆ. ಇದನ್ನು ನೋಡಿ 'ಡೆವಿಲ್' ಪೊಲಿಟಿಕಲ್ ಥ್ರಿಲ್ಲರ್ ಸಿನಿಮಾ ಎಂದು ಕೆಲವರು ಭಾವಿಸಿದ್ದರು. ಆದರೆ ಅದಕ್ಕಿಂತ ಭಿನ್ನವಾಗಿ ನಿರ್ದೇಶಕ ಪ್ರಕಾಶ್ ವೀರ್ ಪ್ಲ್ಯಾನ್ ಮಾಡಿರುವುದು ಗೊತ್ತಾಗುತ್ತಿದೆ. ನಿರ್ದೇಶನದ ಜೊತೆಗೆ ತಾವೇ ಚಿತ್ರಕ್ಕೆ ಬಂಡವಾಳ ಸಹ ಹೂಡಿದ್ದಾರೆ. ಬೆಂಗಳೂರು, ಮೈಸೂರು, ರಾಜಸ್ಥಾನ ಹಾಗು ಥಾಯ್ಲೆಂಡ್‌ನಲ್ಲಿ ಚಿತ್ರದ ಚಿತ್ರೀಕರಣ ನಡೆದಿದೆ.

ಇನ್ನು ದರ್ಶನ್ ತಂದೆ ಪಾತ್ರದಲ್ಲಿ ಮಹೇಶ್ ಮಂಜ್ರೇಕರ್ ನಟಿಸಿದ್ದಾರೆ ಎನ್ನಲಾಗ್ತಿದೆ. ಅಚ್ಯುತ್ ಕುಮಾರ್, ಅವಿನಾಶ್ ಸೇರಿ ದೊಡ್ಡ ತಾರಾಗಣ ಚಿತ್ರದಲ್ಲಿದೆ. ರಚನಾ ರೈ ನಾಯಕಿಯಾಗಿ ಮಿಂಚಿದ್ದಾರೆ. ಸುಧಾಕರ್ ರಾಜ್ ಛಾಯಾಗ್ರಹಣ, ಅಜನೀಶ್ ಲೋಕನಾಥ್ ಸಂಗೀತ 'ಡೆವಿಲ್' ಚಿತ್ರಕ್ಕಿದೆ. 'ಕಾಟೇರ' ಬ್ಲಾಕ್‌ಬಸ್ಟರ್ ಹಿಟ್ ಬಳಿಕ ಬರುತ್ತಿರುವ ದರ್ಶನ್ ಸಿನಿಮಾ ಇದು. ಹಾಗಾಗಿ ಭಾರೀ ಹೈಪ್ ಕ್ರಿಯೇಟ್ ಆಗಿದೆ.
'ಡೆವಿಲ್' ಚಿತ್ರದಲ್ಲಿ ಸಿಜಿ ವರ್ಕ್ ಜಾಸ್ತಿ ಇದೆ. ಹಾಗಾಗಿ ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಹೆಚ್ಚು ಸಮಯ ಬೇಡುತ್ತಿದೆ. ಈ ವರ್ಷವೇ ಸಿನಿಮಾ ಬಿಡುಗಡೆಗೆ ಪ್ರಯತ್ನ ನಡೀತಿದೆ. ಆದರೆ ರಿಲೀಸ್ ದಿನಾಂಕ ಮಾತ್ರ ಇನ್ನು ಘೋಷಣೆ ಆಗಿಲ್ಲ. ದರ್ಶನ್ ಅಭಿಮಾನಿಗಳು ಫಸ್ಟ್ ಡೇ ಫಸ್ಟ್ ಶೋ ಸಿನಿಮಾ ನೋಡಲು ತುದಿಗಾಲಲ್ಲಿ ನಿಂತಿದ್ದಾರೆ. ಬಾಕ್ಸಾಫೀಸ್‌ನಲ್ಲಿ ಸಿನಿಮಾ ದೊಡ್ಡದಾಗಿ ಸದ್ದು ಮಾಡುವ ಲೆಕ್ಕಾಚಾರ ಜೋರಾಗಿದೆ.


Click it and Unblock the Notifications











