ನಟ ದರ್ಶನ್+ ಡೈರೆಕ್ಟರ್ ಸೂರಿ= ಪ್ಯಾನ್ ಇಂಡಿಯಾ ಮೂವಿ!

ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕನ್ನಡದ ಸ್ಟಾರ್ ನಟರಲ್ಲಿ ಒಬ್ಬರು. ಅತಿ ಹೆಚ್ಚು ಮಾಸ್ ಫಾಲೊಯಿಂಗ್ ಇರುವ ನಟ ದರ್ಶನ್. ಹಾಗಾಗಿ ದರ್ಶನ್ ಯಾವುದೇ ಸಿನಿಮಾ ಮಾಡಿದರು ನಿರ್ಮಾಪಕರಿಗೆ ನಷ್ಟದ ಕಷ್ಟ ಇರುವುದಿಲ್ಲ. ಹಾಗಾಗಿ ದರ್ಶನ್ ಜೊತೆಗೆ ಸಿನಿಮಾ ಮಾಡಲು ನಿರ್ಮಾಪಕರು ಕಾಯುತ್ತಾ ಇರುತ್ತಾರೆ.

ಕೆಜಿಎಫ್ ಸಿನಿಮಾದ ಬಳಿಕ ನಟ ದರ್ಶನ್ ಪ್ಯಾನ್ ಇಂಡಿಯಾ ಸಿನಿಮಾದ ಬಗ್ಗೆ ಒಂದಷ್ಟು ಸುದ್ದಿಗಳು ಹರಿದಾಡುತ್ತಾ ಇವೆ. ಇನ್ನು 'ಕ್ರಾಂತಿ' ಸಿನಿಮಾ ಪ್ಯಾನ್ ಇಂಡಿಯಾ ಸಿನಿಮಾ ಆಗಲಿದ್ದು, ಸಿನಿಮಾದಲ್ಲಿ ದರ್ಶನ್ ಅಬ್ಬರಿಸಲಿದ್ದಾರೆ.

'ಕ್ರಾಂತಿ' ಬಿಟ್ಟು ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾಗೂ ನಟ ದರ್ಶನ್ ತೆರೆಮರೆಯಲ್ಲಿ ತಯಾರಿ ನಡೆಸಿದ್ದಾರೆ ಎನ್ನುವ ಸುದ್ದಿ ಗಾಂಧಿ ನಗರದಲ್ಲಿ ಹಬ್ಬಿದೆ. ಚಿತ್ರದ ನಿರ್ದೇಶನಕ ಬಗ್ಗೆಯೂ ಸುದ್ದಿ ಹಬ್ಬಿದ್ದು, ದುನಿಯಾ ಸೂರಿ ದರ್ಶನ್‌ಗೆ ನಿರ್ದೇಶನ ಮಾಡಲಿದ್ದಾರೆ ಎನ್ನಲಾಗುತ್ತಿದೆ.

ಸೂರಿ ನಿರ್ದೇಶನದಲ್ಲಿ ದರ್ಶನ್ ಪ್ಯಾನ್ ಇಂಡಿಯಾ ಸಿನಿಮಾ!

ಸೂರಿ ನಿರ್ದೇಶನದಲ್ಲಿ ದರ್ಶನ್ ಪ್ಯಾನ್ ಇಂಡಿಯಾ ಸಿನಿಮಾ!

ನಟ ದರ್ಶನ್ ಮತ್ತು ದುನಿಯಾ ಸೂರಿ ಜೊತೆಯಾಗಿ ಸಿನಿಮಾ ಮಾಡುತ್ತಾರೆ ಎನ್ನುವ ಬಗ್ಗೆ ಹಲವು ಬಾರಿ ಸುದ್ದಿ ಆಗಿದೆ. ಆದರೆ ಬಹುತೇಕ ಸ್ಕ್ರಿಪ್ಟ್ ಓಕೆ ಆಗಿ ಲಾಕ್ ಆಗಿದೆ ಎನ್ನಲಾಗಿದೆ. ಇವರಿಬ್ಬರ ಕಾಂಬಿನೇಶನ್‌ನಲ್ಲಿ ಸಿನಿಮಾ ಬರುತ್ತೆ ಎನ್ನುವ ಸುದ್ದಿಯೇ ಕ್ರೇಜ್ ಹುಟ್ಟು ಹಾಕುತ್ತೆ. ಸುಕ್ಕಾ ಸೂರಿ, ಮಾಸ್ ನಟ ದರ್ಶನ್ ಒಂದಾದರೆ ಸಿನಿಮಾ ಮತ್ತೊಂದು ರೇಂಜಿಗೆ ಇರುತ್ತೆ ಎನ್ನುವುದರಲ್ಲಿ ಎರಡು ಮಾತಿಲ್ಲ. ದರ್ಶನ್‌ಗಾಗಿ ಸೂರಿ ಮಾಡುತ್ತಿರುವ ಸಿನಿಮಾ ಪ್ಯಾನ್ ಇಂಡಿಯಾ ಸಿನಿಮಾ ಆಗಿರಲಿದೆಯಂತೆ.

ಟೈಟಲ್ 'ಕದನ ವಿರಾಮ'!

ಟೈಟಲ್ 'ಕದನ ವಿರಾಮ'!

ಇನ್ನು ಈ ಚಿತ್ರಕ್ಕೆ ಟೈಟಲ್ ಕೂಡ ಫಿಕ್ಸ್ ಆಗಿದೆ ಎನ್ನಲಾಗುತ್ತಿದೆ. ಸೂರಿ ಮತ್ತು ದರ್ಶನ್ ಮುಂದಿನ ಚಿತ್ರಕ್ಕೆ 'ಕದನ ವಿರಾ' ಎನ್ನುವ ಟೈಟಲ್ ಫಿಕ್ಸ್ ಆಗಿದ್ದರ ಬಗ್ಗೆ ಸುದ್ದಿ ಹರಿದಾಡುತ್ತಾ ಇದೆ. ಈ ಟೈಟಲ್‌ಗೆ ತಕ್ಕ ಹಾಗೆ ಸಿನಿಮಾ ಮಾಸ್ ಫೀಲ್‌ನಲ್ಲಿ ಇರಲಿದೆಯಂತೆ. ಆದರೆ ಈ ಬಗ್ಗೆ ಸೂರಿ ಅಥವಾ ಸಿನಿಮಾ ತಂಡವೇ ಉತ್ತರ ನೀಡಬೇಕು.

'ಕ್ರಾಂತಿ' ಚಿತ್ರದಲ್ಲಿ ದರ್ಶನ್ ಬ್ಯುಸಿ!

'ಕ್ರಾಂತಿ' ಚಿತ್ರದಲ್ಲಿ ದರ್ಶನ್ ಬ್ಯುಸಿ!

ಸದ್ಯ ನಟ ದರ್ಶನ್ ಕ್ರಾಂತಿ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ರಾಬರ್ಟ್ ಬಳಿಕ ಕೊರೊನಾ ಕಾರಣಕ್ಕೆ ದರ್ಶನ್ ರವರ ಯಾವುದೇ ಸಿನಿಮಾ ಬಂದಿಲ್ಲ. ಹಾಗಾಗಿ ಈಗ ಸಾಲು-ಸಾಲು ಸಿನಿಮಾ ಮಾಡಲು ದರ್ಶನ್ ಮುಂದಾಗಿದ್ದಾರೆ. 'ಕ್ರಾಂತಿ' ಚಿತ್ರೀಕರಣ ವೇಗವಾಗಿ ನಡೆಯುತ್ತಿದ್ದು, ಸದ್ಯದಲ್ಲೇ ಶೂಟಿಂಗ್ ಮುಗಿಯಲಿದೆ. ದರ್ಶನ್ ಜೊತೆಗೆ ನಟಿ ರಚಿತಾ ರಾಮ್ ಕಾಣಿಸಿಕೊಂಡಿದ್ದಾರೆ.

ದರ್ಶನ್ 'ಗೋಲ್ಡ್ ರಿಂಗ್' ಸಿನಿಮಾ ಕಥೆ ಏನು?

ದರ್ಶನ್ 'ಗೋಲ್ಡ್ ರಿಂಗ್' ಸಿನಿಮಾ ಕಥೆ ಏನು?

ಕಳೆದ ಬಾರಿ ದರ್ಶನ್ ಹುಟ್ಟುಹಬ್ಬಕ್ಕೆ ಹಲವು ಸಿನಿಮಾಗಳು ಅನೌನ್ಸ್ ಆಗಿವೆ. ಅದರಲ್ಲಿ 'ಗೋಲ್ಡ್‌ ರಿಂಗ್' ಸಿನಿಮಾ ಕೂಡ ಒಂದು. 'ಗೋಲ್ಡ್ ರಿಂಗ್' ಸಿನಿಮಾದಲ್ಲಿ ನಟ ದರ್ಶನ್ ನೇವಿ ಆಫಿಸರ್ ಆಗಿ ಕಾಣಸಿಕೊಳ್ಳಲಿದ್ದಾರೆ. ಆದರೆ ಈ ಸಿನಿಮಾ ಯಾವಾಗ ಸೆಟ್ಟೇರಲಿದೆ ಎನ್ನುವುದನ್ನು ನೋಡಬೇಕಿದೆ. ಇದರ ಜೊತೆಗೆ 'ರಾಜ ವೀರಮದಕರಿ ನಾಯಕ' ಸಿನಿಮಾದ ಶೂಟಿಂಗ್ ಆರಂಭ ಆಗಿತ್ತು. ಆದರೆ ಅದು ಕೂಡ ನಿಂತು ಬಿಟ್ಟಿದೆ.

More from Filmibeat

English summary
Darshan's Next Pan Iindia Movie director Will Be Duniya Suri, Know More,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X