2ನೇ ಹಂತದ ಚಿತ್ರೀಕರಣಕ್ಕೆ ಸಜ್ಜಾದ 'ರಾಜವೀರ ಮದಕರಿ ನಾಯಕ'; ಲೊಕೇಶನ್ ಹುಡುಕಾಟದಲ್ಲಿ ಚಿತ್ರತಂಡ
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷೆಯ ರಾಜವೀರ ಮದಕರಿ ನಾಯಕ ಸಿನಿಮಾದ ಎರಡನೇ ಹಂತದ ಚಿತ್ರೀಕರಣಕ್ಕೆ ಚಿತ್ರತಂಡ ಸಜ್ಜಾಗಿದೆ. ಈಗಾಗಲೇ ಮೊದಲ ಹಂತದ ಚಿತ್ರೀಕರಣ ಮುಗಿಸಿರುವ ಸಿನಿಮಾತಂಡಕ್ಕೆ ಕೊರೊನಾ ವೈರಸ್ ಅಡ್ಡಿ ಪಡಿಸಿತ್ತು.
Recommended Video
ಲಾಕ್ ಡೌನ್ ಕಾರಣ ಸ್ಥಗಿತವಾಗಿದ್ದ ಚಿತ್ರೀಕರಣ ಇನ್ನು ಪ್ರಾರಂಭವಾಗಿರಲಿಲ್ಲ. ಇದೀಗ ಮತ್ತೆ ಶೂಟಿಂಗ್ ಶುರು ಮಾಡುವ ತಯಾರಿಯಲ್ಲಿದೆ ಸಿನಿಮಾತಂಡ. ಹಾಗಾಗಿ ಇದೀಗ ಲೊಕೇಶನ್ ಹುಡುಕಾಟದಲ್ಲಿ ಬ್ಯುಸಿಯಾಗಿದೆ ಚಿತ್ರತಂಡ. ಲಾಕ್ ಡೌನ್ ಬಳಿಕ ಅನೇಕ ಸಿನಿಮಾಗಳ ಚಿತ್ರೀಕರಣ ಪ್ರಾರಂಭವಾಗಿದೆ. ಆದರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಇನ್ನು ಚಿತ್ರೀಕರಣಕ್ಕೆ ಹೊರಟಿಲ್ಲ. ಇದೀಗ ರಾಜವೀರ ಮದಕರಿ ನಾಯಕ ಶೂಟಿಂಗ್ ಪ್ರಾರಂಭಿಸುವ ಮೂಲಕ ಮತ್ತೆ ಚಿತ್ರೀಕರಣಕ್ಕೆ ಹೊರಡಲಿದ್ದಾರೆ. ಮುಂದೆ ಓದಿ...

ಲೊಕೇಶನ್ ನೋಡುತ್ತಿರುವ ಸಿನಿಮಾತಂಡ
ರಾಜವೀರ ಮದಕರಿ ನಾಯಕ ಸಿನಿಮಾದ ಚಿತ್ರೀಕರಣ ಪ್ರಾರಂಭ ಮಾಡಲು ಸಿನಿಮಾತಂಡ ಲೊಕೇಶನ್ ಹುಡುಕಾಟದಲ್ಲಿದೆ. ಸದ್ಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು, ದೊಡ್ಡಣ್ಣ ಸೇರಿದಂತೆ ಸಿನಿಮಾತಂಡ ಲೊಕೇಶನ್ ಹುಡುಕುತ್ತ ಕುಮಟಾ ಕಡೆ ಹೊರಟಿದೆ.

ಮಿರ್ಜಾನ್ ಕೋಟೆಯಲ್ಲಿ ಚಿತ್ರೀಕರಣಕ್ಕೆ ತಯಾರಿ
ಕುಮಟಾದ ಮಿರ್ಜಾನ್ ಕೋಟೆಯಲ್ಲಿ ಮದಕರಿನಾಯಕ ಸಿನಿಮಾ ಶೂಟಿಂಗ್ ಮಾಡಲು ಸಿನಿಮಾತಂಡ ನಿರ್ಧರಿಸಿದೆ. ಕೋಟೆಯ ಬಳಿ ನಿಂತು ಫೋಟೋ ಕ್ಲಿಕ್ಕಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದೆ ಸಿನಿಮಾತಂಡ. ಈ ಮೂಲಕ ರಾಜವೀರ ಮದಕರಿ ನಾಯಕ ತಂಡ ಎರಡನೇ ಹಂತದ ಶೂಟಿಂಗ್ ಗೆ ಸಜ್ಜಾಗಿದೆ.

ಕೇರಳದಲ್ಲಿ ಮೊದಲ ಹಂತದ ಚಿತ್ರೀಕರಣ
ದರ್ಶನ್ ಅಭಿನಯದ ಬಹುನಿರೀಕ್ಷೆಯ ರಾಜವೀರ ಮದಕರಿ ನಾಯಕ ಸಿನಿಮಾ ಮೊದಲ ಹಂತದ ಚಿತ್ರೀಕರಣ ಕೇರಳದಲ್ಲಿ ಪ್ರಾರಂಭವಾಗಿತ್ತು. ಕೇರಳದ ಕೊಚ್ಚಿಯಲ್ಲಿ ಚಿತ್ರೀಕರಣ ಪ್ರಾರಂಭ ಮಾಡುವ ಮೂಲಕ ಚಿತ್ರಕ್ಕೆ ಕಿಕ್ ಸ್ಟಾರ್ಟ್ ಸಿಕ್ಕಿತ್ತು. ಬಳಿಕ ಚಿತ್ರೀಕರಣ ಸ್ಥಗಿತವಾಗಿತ್ತು. ರಾಕ್ ಲೈನ್ ವೆಂಕಟೇಶ್ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಈ ಸಿನಿಮಾ ದೊಡ್ಡ ಮಟ್ಟದಲ್ಲಿ ತಯಾರಾಗುತ್ತಿದೆ.

ವದಂತಿಗೆ ಬ್ರೇಕ್ ಹಾಕಿದ ಸಿನಿಮಾತಂಡ
ರಾಬರ್ಟ್ ಶೂಟಿಂಗ್ ಮುಗಿಸಿರುವ ದರ್ಶನ್ ಬಳಿಕ ರಾಜವೀರ ಮದಕರಿ ನಾಯಕ ಸಿನಿಮಾದಲ್ಲಿ ಬ್ಯುಸಿಯಾಗಿದ್ದರು. ಆದರೆ ಲಾಕ್ ಡೌನ್ ಕಾರಣ ನಿಂತುಹೋಗಿದ್ದ ಚಿತ್ರೀಕರಣ ಮತ್ತೆ ಪ್ರಾರಂಭವಾಗಿಲ್ಲ. ಈ ನಡುವೆ ಸಿನಿಮಾನೆ ನಿಂತು ಹೋಗಿದೆ ಎನ್ನುವ ಸುದ್ದಿ ಕೇಳಿಬರುತ್ತಿತ್ತು. ಅಲ್ಲದೆ ರಾಜವೀರ ಮದಕರಿ ನಾಯಕ ಸಿನಿಮಾ ಶೂಟಿಂಗ್ ಗೂ ಮೊದಲು ದರ್ಶನ್, ತರುಣ್ ಸುಧೀರ್ ನಿರ್ದೇಶನದ ಮತ್ತೊಂದು ಸಿನಿಮಾದಲ್ಲಿ ನಟಿಸಲಿದ್ದಾರೆ ಎನ್ನುವ ಮಾತು ಕೇಳಿಬರುತ್ತಿತ್ತು. ಆದರೆ ಈ ಎಲ್ಲಾ ವದಂತಿಗೆ ತೆರೆ ಬಿದ್ದಿದೆ.

ಮುಂದಿನ ವರ್ಷ ಪ್ರಾರಂಭವಾಗುವ ಸಾಧ್ಯತೆ
ರಾಜವೀರ ಮದಕರಿ ನಾಯಕ ಸಿನಿಮಾದ ಎರಡನೇ ಹಂತದ ಚಿತ್ರೀಕರಣ ಮುಂದಿನ ವರ್ಷದ ಪ್ರಾರಂಭದಲ್ಲಿ ಶುರುವಾಗುವ ಸಾಧ್ಯತೆ ಇದೆ. ಕೊರೊನಾ ಕಾರಣ ಈ ಮೊದಲು ನಿಗದಿಯಾಗಿದ್ದ ಶೂಟಿಂಗ್ ಲೊಕೇಶ್ ಗಳು ಬದಲಾಗುವ ಸಾಧ್ಯತೆ ಇದೆ, ಹಾಗಾಗಿ ಚಿತ್ರತಂಡ ಮತ್ತೆ ಲೊಕೇಶನ್ ಹಂಟಿಂಗ್ ನಲ್ಲಿದೆ.


Click it and Unblock the Notifications











