'ದೋಸ್ತಾ ಕಣೋ...'ಎಂದು ಗೆಳೆತನದ ಬಗ್ಗೆ ಹೇಳಲು ಬರ್ತಿದ್ದಾರೆ ದರ್ಶನ್
ಚಾಲೆಂಜಿಂಗ್ ಸ್ಟಾರ್ ದರ್ಶನ್ ಸದ್ಯ ರಾಬರ್ಟ್ ಸಿನಿಮಾದ ರಿಲೀಸ್ ಗೆ ಎದುರು ನೋಡುತ್ತಿದ್ದಾರೆ. ಏಪ್ರಿಲ್ ತಿಂಗಳಲ್ಲಿ ಸಿನಿಮಾ ರಿಲೀಸ್ ಮಾಡುವ ಪ್ಲಾನ್ ಮಾಡಿಕೊಂಡಿದೆ ಚಿತ್ರತಂಡ. ಈಗಾಗಲೆ ಚಿತ್ರದಿಂದ ಇಂಟ್ರಸ್ಟಿಂಗ್ ಪೋಸ್ಟರ್ಸ್ ಮತ್ತು ಎರಡು ಹಾಡುಗಳು ರಿಲೀಸ್ ಆಗಿವೆ.
ರಾಬರ್ಟ್ ಸಿನಿಮಾದಿಂದ ಬಂದಿರುವ ಟೈಟಲ್ ಟ್ರ್ಯಾಕ್ ಮತ್ತು ಆಂಜನೇಯನ ಹಾಡು ಅಭಿಮಾನಿಗಳ ನಿದ್ದೆಗೆಡಿಸಿದೆ. ಇದರ ಬೆನ್ನಲ್ಲೆ ಈಗ ಚಿತ್ರದಿಂದ ಮತ್ತೊಂದು ಹಾಡನ್ನು ರಿಲೀಸ್ ಮಾಡಲು ಚಿತ್ರತಂಡ ನಿರ್ಧರಿಸಿದೆ. ಹೌದು, ಈ ಬಗ್ಗೆ ಚಿತ್ರತಂಡ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದೆ. ಮುಂದೆ ಓದಿ..

ದೋಸ್ತಾ ಕಣೋ ಅಂತ ಬರ್ತಿದ್ದಾರೆ ದರ್ಶನ್
ರಾಬರ್ಟ್ ಸಿನಿಮಾದಿಂದ ಮೂರನೆ ಹಾಡು ರಿಲೀಸ್ ಆಗಲು ಸಿದ್ಧವಾಗಿದೆ. ವಿಶೇಷ ಅಂದರೆ ಈ ಹಾಡು ಗೆಳೆತನದ ಬಗ್ಗೆ ಇರುವ ಹಾಡಾಗಿದೆ. ದೋಸ್ತಾ ಕಣೋ ಎನ್ನುವ ಸಾಲುಗಳಿಂದ ಈ ಹಾಡು ಪ್ರಾರಂಭವಾಗಲಿದೆಯಂತೆ. ಬೇಸಿಗೆಯಲ್ಲಿ ಗೆಳೆತನವನ್ನು ಆಚರಣೆ ಮಾಡೋಣ ಎಂದು ಈ ಹಾಡನ್ನು ರಿಲೀಸ್ ಮಾಡುತ್ತಿದೆ ಸಿನಿಮಾತಂಡ.

ಮಾರ್ಚ್ 21ಕ್ಕೆ ಹಾಡು ರಿಲೀಸ್
ಅಂದ್ಹಾಗೆ ರಾಬರ್ಟ್ ಸಿನಿಮಾ ಗೆಳೆತನದ ಬಗ್ಗೆ ಇರುವ ಹಾಡು ಮಾರ್ಚ್ 21ಕ್ಕೆ ರಿಲೀಸ್ ಆಗುತ್ತಿದೆ. ದೋಸ್ತಾ ಕಣೋ ಮಾರ್ಚ್ 21 ಬೆಳಗ್ಗೆ 11.04ಕ್ಕೆ ಅಭಿಮಾನಿಗಳ ಮುಂದೆ ಬರಲಿದೆ. ಈ ಹಾಡಿನ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನಾಳೆ(ಮಾರ್ಚ್ 20) ನೀಡುವುದಾಗಿ ಚಿತ್ರತಂಡ ಹೇಳಿದೆ.

ದೋಸ್ತಾ ಕಣೋ ಎಂದು ದಚ್ಚು ಯಾರಿಗೆ ಹೇಳುತ್ತಿದ್ದಾರೆ?
ಅಂದ್ಹಾಗೆ ರಾಬರ್ಟ್ ಸಿನಿಮಾದಿಂದ ತೆರೆಗೆ ಬರುತ್ತಿರುವ ದೋಸ್ತಾ ಕಣೋ ಹಾಡು ಸಾಕಷ್ಟು ನಿರೀಕ್ಷೆ ಮೂಡಿಸಿದೆ. ದೋಸ್ತಾ ಕಣೋ ಎಂದು ದಚ್ಚು ಯಾರ ಜೊತೆ ಗೆಳೆತನ ಆಚರಣೆ ಮಾಡುತ್ತಾರೆ ಎನ್ನುವುದು ಕುತೂಹಲ ಮೂಡಿಸಿದೆ. ಚಿತ್ರದಲ್ಲಿ ನಟ ವಿನೋದ್ ಪ್ರಭಾಕರ್ ಕೂಡ ಕಾಣಿಸಿಕೊಂಡಿದ್ದಾರೆ. ಹಾಗಾಗಿ ವಿನೋದ್ ಪ್ರಭಾಕರ್ ಮತ್ತು ದರ್ಶನ್ ನಡುವಿನ ಗೆಳೆತನದ ಹಾಡಾಗಿರಬಹುದು.

ಏಪ್ರಿಲ್ ನಲ್ಲಿ ಸಿನಿಮಾ ತೆರೆಗೆ ಬರುವ ಸಾಧ್ಯತೆ
ರಾಬರ್ಟ್ ಸಿನಿಮಾ ಏಪ್ರಿಲ್ ನಲ್ಲಿ ತೆರೆಗೆ ಬರುವ ಸಾಧ್ಯತೆ ಇದೆ. ಕೊರೊನಾ ವೈರಸ್ ಪರಿಣಾಮ ಮಾರ್ಚ್ 29ರ ವರೆಗೂ ಸಿನಿಮಾ ಚಟುವಟಿಕೆಗಳನ್ನು ಸಂಪೂರ್ಣ ಬಂದ್ ಆಗಿದೆ. ಆದರೂ ಏಪ್ರಿಲ್ ನಲ್ಲಿ ರಾಬರ್ಟ್ ಸಿನಿಮಾ ತೆರೆಗೆ ಬರುವುದು ಪಕ್ಕಾ ಎಂದು ಹೇಳಲಾಗುತ್ತಿದೆ. ಆದರೆ ಕೊರೊನಾ ವೈರಸ್ ನಿಯಂತ್ರಣಕ್ಕೆ ಬರದೆ ಇದ್ದರೆ ಸಿನಿಮಾ ರಿಲೀಸ್ ಮುಂದಕ್ಕೆ ಹೋಗುವ ಸಾಧ್ಯತೆ ಇದೆ.

ಅದ್ದೂರಿ ಆಡಿಯೋ ರಿಲೀಸ್ ಕಾರ್ಯಕ್ರಮ ರದ್ದಾಗಿದೆ
ರಾಬರ್ಟ್ ಹಾಡುಗಳನ್ನು ಅದ್ದೂರಿಯಾಗಿ ತೆರೆಗೆ ತರಲು ಸಿನಿಮಾ ತಂಡ ಪ್ಲಾನ್ ಮಾಡಿತ್ತು. ಆದರೆ ಅದ್ದೂರಿ ಆಡಿಯೋ ರಿಲೀಸ್ ಕಾರ್ಯಕ್ರಮ ಕೂಡ ರದ್ದುಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಉತ್ತರ ಕರ್ನಾಟಕದಲ್ಲಿ ಹಾಡುಗಳನ್ನು ರಿಲೀಸ್ ಮಾಡುವ ಕಾರ್ಯಕ್ರಮ ಹಮ್ಮಿಕೊಳ್ಳಲು ಸಿನಿಮಾತಂಡ ಪ್ಲಾನ್ ಮಾಡಿತ್ತು. ಆದರೀಗ ಕೊರೊನಾ ವೈರಸ್ ಕಾರ್ಯಕ್ರಮಕ್ಕೂ ಬ್ರೇಕ್ ಹಾಕಿದೆ.


Click it and Unblock the Notifications











