ಡಿ ಬಾಸ್ ಅಭಿಮಾನಿಗಳಿಗೆ ಸಂತಸದ ಸುದ್ದಿ ನೀಡಿದ 'ರಾಬರ್ಟ್' ಟೀಂ
ಸ್ಯಾಂಡಲ್ ವುಡ್ ನ ಬಹುನಿರೀಕ್ಷೆಯ ಸಿನಿಮಾಗಳಲ್ಲಿ ರಾಬರ್ಟ್ ಸಿನಿಮಾ ಕೂಡ ಒಂದು. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಸಿನಿಮಾ ಈಗಾಗಲೆ ರಿಲೀಸ್ ಆಗಿ ಬಾಕ್ಸ್ ಆಫೀಸ್ ನಲ್ಲಿ ಧೂಳ್ ಎಬ್ಬಿಸಬೇಕಿತ್ತು. ಆದರೆ ಲಾಕ್ ಡೌನ್ ಪರಿಣಾಮ ಸಿನಿಮಾ ರಿಲೀಸ್ ಮುಂದಕ್ಕೆ ಹೋಗುತ್ತಲೆ ಇದೆ.
Recommended Video
ಸಿನಿಮಾ ಯಾವಾಗ ಬರುತ್ತೆ ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಆದರೆ ಚಿತ್ರದಿಂದ ಯಾವುದೆ ಅಪ್ ಡೇಟ್ ಬಂದಿರಲಿಲ್ಲ. ಆದರೀಗ ಚಿತ್ರತಂಡ ಡಿ ಬಾಸ್ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದೆ. ರಾಬರ್ಟ್ ಸಿನಿಮಾ ರಿಲೀಸ್ ಮುಂದಕ್ಕೆ ಹೋದರು ಅಭಿಮಾನಿಗಳು ಖುಷಿಪಡುವ ವಿಚಾರ ಹೊರಬಿದ್ದಿದೆ. ಮುಂದೆ ಓದಿ..

ರಂಜಾನ್ ಗೆ ರಾಬರ್ಟ್ ಹೊಸ ಪೋಸ್ಟರ್
ರಂಜಾನ್ ಹಬ್ಬಕ್ಕೆ ರಾಬರ್ಟ್ ಸಿನಿಮಾ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದೆ. ರಾಬರ್ಟ್ ಸಿನಿಮಾದ ಹೊಸ ಪೋಸ್ಟರ್ ರಿಲೀಸ್ ಮಾಡಲು ಸಿನಿಮಾತಂಡ ಮುಂದಾಗಿದೆ. ಈ ಬಗ್ಗೆ ನಿರ್ದೇಶಕ ತರುಣ್ ಸುಧೀರ್ ಬಹಿರಂಗ ಪಡಿಸಿದ್ದಾರೆ.

ಕುತೂಹಲ ಮೂಡಿಸಿದೆ ಪೋಸ್ಟರ್
ಕಳೆದ ವರ್ಷ ರಂಜಾನ್ ಗೆ ಚಿತ್ರದ ರಾಬರ್ಟ್ ಥೀಮ್ ಪೋಸ್ಟರ್ ಬಿಡುಗಡೆಯಾಗಿತ್ತು. ಈ ವರ್ಷ ರಂಜಾನ್ ಹಬ್ಬದ ಪ್ರಯುಕ್ತ ಮತ್ತೊಂದು ಪೋಸ್ಟರ್ ಮೂಲಕ ಎಂಟ್ರಿ ಕೊಡಲಿದ್ದಾರೆ ದರ್ಶನ್. ಈಗಾಗಲೆ ದರ್ಶನ್ ಅವರ ಎರಡು ಅವತಾರದ ಪೋಸ್ಟರ್ ರಿಲೀಸ್ ಆಗಿದೆ. ಸದ್ಯ ರಂಜಾನ್ ಹಬ್ಬಕ್ಕೆ ಬರುವ ಪೋಸ್ಟರ್ ಹೇಗಿರಲಿದೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮನೆ ಮಾಡಿದೆ.

ಆಗಸ್ಟ್ 15ಕ್ಕೆ ರಾಬರ್ಟ್ ರಿಲೀಸ್?
ಆಗಸ್ಟ್ 15 ಸ್ವಾತಂತ್ರ್ಯ ದಿನಾಚರಣೆ ದಿನ ರಾಬರ್ಟ್ ರಿಲೀಸ್ ಮಾಡಲು ಚಿತ್ರತಂಡ ನಿರ್ಧರಿಸಿದೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ. ರಾಬರ್ಟ್ ದರ್ಶನಕ್ಕೆ ಕಾದು ಕುಳಿತಿರುವ ಅಭಿಮಾನಗಳಿಗೆ ನಿರಾಸೆಯಾಗುತ್ತಲೆ ಇದೆ. ಹಾಗಾಗಿ ಆಗಸ್ಟ್ ವೇಳೆಗೆ ಪರಿಸ್ಥಿತಿ ಸುದಾರಿಸುವ ಸಾಧ್ಯತೆ ಇದ್ದು, ಆಗಸ್ಟ್ 15ಕ್ಕೆ ರಿಲೀಸ್ ಮಾಡಲು ಸಿನಿಮಾತಂಡ ಪ್ಲಾನ್ ಮಾಡಿದೆ ಎಂದು ಹೇಳಲಾಗುತ್ತಿದೆ.

ಹಾಡುಗಳ ಮೂಲಕ ಮೋಡಿ ಮಾಡುತ್ತಿದೆ ರಾಬರ್ಟ್
ರಾಬರ್ಟ್ ಚಿತ್ರದಿಂದ ಈಗಾಗಲೆ ಮೂರು ಹಾಡುಗಳು ರಿಲಸ್ ಆಗಿವೆ. ಜೊತೆಗೆ ರಾಮನವಮಿ ಪ್ರಯುಕ್ತ ಚಿತ್ರದ ಜೈ ಶ್ರೀರಾಮ್ ಹಾಡಿನ ಹೊಸ ಅವತರಣಿಕೆಯನ್ನು ಬಿಡುಗಡೆ ಮಾಡಲಾಗಿದೆ. ಟೈಟಲ್ ಟ್ರ್ಯಾಕ್, ಬ್ರದರ್ ಸಾಂಗ್ ಮತ್ತು ಜೈ ಶ್ರೀರಾಮ್ ಹಾಡುಗಳು ಅಭಿಮಾನಿಗಳ ಮನಗೆದ್ದಿವೆ. ಇನ್ನೇನಿದ್ರು ಟ್ರೈಲರ್ ಮತ್ತು ಸಿನಿಮಾ ನೋಡು ಸಂಭ್ರಮಿಸುವುದೊಂದೆ ಬಾಕಿ ಇದೆ.


Click it and Unblock the Notifications











