ದರ್ಶನ್ 'ರಾಬರ್ಟ್' ತೆಲುಗು ಟೀಸರ್ ರಿಲೀಸ್ ಗೆ ದಿನಾಂಕ ನಿಗದಿ
ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ರಾಬರ್ಟ್ ಸಿನಿಮಾ ಕನ್ನಡದ ಜೊತೆಗೆ ತೆಲುಗಿನಲ್ಲೂ ರಿಲೀಸ್ ಆಗುತ್ತಿದೆ. ಕನ್ನಡ ಮತ್ತು ತೆಲುಗಿನಲ್ಲಿ ಏಕಕಾಲಕ್ಕೆ ರಿಲೀಸ್ ಮಾಡಲು ತೆಲುಗು ಸಿನಿಮಾರಂಗ ತಕರಾರು ತೆಗೆದಿತ್ತು. ಬೇರ ಭಾಷೆಯ ಸಿನಿಮಾಗಳು ಬಂದರೆ ತೆಲುಗು ಸಿನಿಮಾಗಳಿಗೆ ತೊಂದರೆ ಆಗಲಿದೆ ಎನ್ನುವುದು ಅವರ ವಾದವಾಗಿತ್ತು.
Recommended Video
ತನ್ನ ಬಿಡುಗಡೆಗೆ ಅವಕಾಶ ಕೊಡದ ತೆಲುಗು ಚಿತ್ರರಂಗದ ವಿರುದ್ಧ ಗರಂ ಆಗಿದ್ದ ದಚ್ಚು, ಕರ್ನಾಟಕ ಫಿಲ್ಮ್ ಚೆಂಬರ್ ಗೆ ದೂರು ನೀಡಿದ್ದರು. ಡಿ ಬಾಸ್ ಆಕ್ರೋಶದ ಬಳಿಕ ತೆಲುಗಿನಲ್ಲಿ ರಾಬರ್ಟ್ ರಿಲೀಸ್ ಮಾಡಲು ಅವಕಾಶ ಸಿಕ್ಕಿದೆ. ಕನ್ನಡದ ಹಾಗೆ ತೆಲುಗಿನಲ್ಲೂ ಅದ್ದೂರಿಯಾಗಿ ರಿಲೀಸ್ ಆಗುತ್ತಿದ್ದು, ಸುಮಾರು 400ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ರಾಬರ್ಟ್ ಪ್ರದರ್ಶನವಾಗುತ್ತಿದೆ.

ಫೆಬ್ರವರಿ 3ಕ್ಕೆ ತೆಲುಗು ಟೀಸರ್
ಸಮಸ್ಯೆ ಬಗೆಹರಿದ ಬಳಿಕ ಇದೀಗ ತೆಲುಗು ಟೀಸರ್ ರಿಲೀಸ್ ಗೆ ಸಿನಿಮಾತಂಡ ಸಜ್ಜಾಗಿದೆ. ಹೌದು, ರಾಬರ್ಟ್ ತೆಲುಗು ಟೀಸರ್ ಫೆಬ್ರವರಿ 3ರಂದು ರಿಲೀಸ್ ಆಗುತ್ತಿದೆ. ಸಂಜೆ 04:05ಕ್ಕೆ ಚಿತ್ರದ ಟೀಸರ್ ತೆಲುಗು ಅಭಿಮಾನಿಗಳ ಮುಂದೆ ಬರ್ತಿದೆ. ತೆಲುಗು ಟೀಸರ್ ಹೇಗಿರಲಿದೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮನೆ ಮಾಡಿದೆ.

ಮಾರ್ಚ್ 11ಕ್ಕೆ ಏಕಕಾಲಕ್ಕೆ ರಿಲೀಸ್
ರಾಬರ್ಟ್ ಸಿನಿಮಾ ಮಾರ್ಚ್ 11ಕ್ಕೆ ಚಿತ್ರಮಂದಿರದ ಅಂಗಳಕ್ಕೆ ಎಂಟ್ರಿ ಕೊಡುತ್ತಿದೆ. ಕನ್ನಡ ಮಾತ್ರವಲ್ಲದೆ ತೆಲುಗಿನಲ್ಲೂ ತೆರೆಗೆ ಬರುತ್ತಿರುವುದು ವಿಶೇಷ. ಅಂದಹಾಗೆ ತೆಲುಗು ಸಿನಿಮಾಗೆ ಸ್ವತಃ ದರ್ಶನ್ ಅವರೇ ಧ್ವನಿ ನೀಡಿದ್ದಾರೆ.

ತೆಲುಗಿನಲ್ಲಿ ರಾಬರ್ಟ್ ನಿರ್ಮಾಪಕರಿಗೆ ಸನ್ಮಾನ
'ರಾಬರ್ಟ್' ಸಿನಿಮಾವನ್ನು ತಮ್ಮದೇ ಸಿನಿಮಾ ಎಂಬಂತೆ ಸ್ವಾಗತಿಸಲು ತೆಲುಗು ಚಿತ್ರರಂಗ ಸಜ್ಜಾಗಿದೆ. ಇದರ ಸೂಚಕವಾಗಿ ಕೆಲವು ತೆಲುಗು ನಿರ್ಮಾಪಕರು ನಿನ್ನೆ (ಜನವರಿ 31) ಕಾರ್ಯಕ್ರಮವೊಂದನ್ನು ಆಯೋಜಿಸಿ 'ರಾಬರ್ಟ್' ಸಿನಿಮಾದ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡಗೆ ಸನ್ಮಾನ ಮಾಡಿದ್ದಾರೆ.

ಸುಳ್ಳು ಸುದ್ದಿ ನಂಬಬೇಡಿ
ನಿರ್ಮಾಪಕ, ವಿತರಕ, ನಿರ್ದೇಶಕರಾಗಿ ಗುರುತಿಸಿಕೊಂಡಿರುವ ಚದಲವಾಡ ಶ್ರೀನಿವಾಸ ರಾವ್ ನೇತೃತ್ವದಲ್ಲಿ ಇನ್ನೂ ಕೆಲವು ನಿರ್ಮಾಪಕರು ಒಟ್ಟುಗೂಡಿ 'ರಾಬರ್ಟ್' ಸಿನಿಮಾ ಉಮಾಪತಿ ಶ್ರೀನಿವಾಸ ಗೌಡ ಅವರಿಗೆ ತೆಲುಗು ಚಿತ್ರರಂಗಕ್ಕೆ ಆತ್ಮೀಯ ಸ್ವಾಗತ ಕೋರಿದರು. ಇದೇ ಸಮಯದಲ್ಲಿ ರಾಬರ್ಟ್' ಸಿನಿಮಾ ಬಿಡುಗಡೆಗೆ ತಡೆ ನೀಡಲಾಗಿದೆ ಎಂಬ ಸುಳ್ಳು ಸುದ್ದಿಯನ್ನು ಯಾರೂ ಸಹ ನಂಬಬೇಡಿ ಎಂದು ಸಹ ಚದಲವಾಡ ಶ್ರೀನಿವಾಸ ರಾವ್ ಮನವಿ ಮಾಡಿದರು.


Click it and Unblock the Notifications











