ದರ್ಶನ್‌ಗಿಲ್ಲ ಕೊರೊನಾ ಭಯ: ಹೇಳಿದ್ದ ಸಮಯಕ್ಕೆ ಅಭಿಮಾನಿಗಳ ಮುಂದೆ ಆಗಲಿದ್ದಾರೆ ಹಾಜರ್

ಕೊರೊನಾ ಭೀತಿ ಇಡೀಯ ವಿಶ್ವವನ್ನೇ ಸ್ಥಬ್ದವಾಗಿಸಿದೆ. ಚಿತ್ರರಂಗ ಪೂರ್ಣ ಬಂದ್ ಆಗಿದೆ. ಯಾವ ಸಿನಿಮಾಗಳೂ ಪ್ರದರ್ಶನ ಕಾಣುತ್ತಿಲ್ಲ. ಚಿತ್ರೀಕರಣಗಳು ಬಂದ್ ಆಗಿವೆ. ಆದರೆ ಡಿ-ಬಾಸ್ ದರ್ಶನ್ ಮಾತ್ರ ಕೊರೊನಾ ಗೆ ಹೆದರಿಲ್ಲ!

Recommended Video

ಪುನೀತ್ ರಾಜ್ ಕುಮಾರ್ ಗೆ ದರ್ಶನ್ ಮಾಡಿದ ವಿಷ್ ಹೇಗಿತ್ತು ನೀವೇ ನೋಡಿ | Darshan Wish for Puneeth

ಹೌದು, ದರ್ಶನ್ ಅಭಿನಯದ ಬಹುನಿರೀಕ್ಷಿತ ಚಿತ್ರ ರಾಬರ್ಟ್ ಬಿಡುಗಡೆಗೆ ಸಿದ್ದವಾಗಿದೆ. ಆದರೆ ಕೊರೊನಾ ಭೀತಿಯಿಂದ ಬಿಡುಗಡೆ ದಿನಾಂಕ ಮುಂದಕ್ಕೆ ಹೋಗುವ ಸಾಧ್ಯತೆ ಇದೆ ಎನ್ನಲಾಗಿತ್ತು. ಆದರೆ ಹಾಗಾಗುತ್ತಿಲ್ಲ.

ಹೌದು, ಕೊರೊನಾ ಭೀತಿ ಆವರಿಸಿದ್ದರೂ ಸಹ ಈ ಹಿಂದೆ ನಿಗದಿ ಮಾಡಿದ್ದ ದಿನಾಂಕಕ್ಕೆ ರಾಬರ್ಟ್ ಸಿನಿಮಾವನ್ನು ಬಿಡುಗಡೆ ಮಾಡುತ್ತೀವಿ ಎಂದು ರಾಬರ್ಟ್ ಚಿತ್ರತಂಡ ಹೇಳಿದೆ. ಹೇಳಿದ ಸಮಯಕ್ಕೇ ಚಿತ್ರಮಂದಿರಗಳಿಗೆ ಲಗ್ಗೆ ಇಡಲಿದ್ದಾರೆ 'ಅಭಿಮಾನಿಗಳ ದಾಸ' ದರ್ಶನ್.

ಹಾಡಿನ ಚಿತ್ರೀಕರಣ, ಆಡಿಯೋ ಲಾಂಚ್ ರದ್ದಾಗಿದೆ

ಹಾಡಿನ ಚಿತ್ರೀಕರಣ, ಆಡಿಯೋ ಲಾಂಚ್ ರದ್ದಾಗಿದೆ

ಏಪ್ರಿಲ್ 9 ಕ್ಕೆ ರಾಬರ್ಟ್ ಸಿನಿಮಾ ಬಿಡುಗಡೆ ಮಾಡುವುದಾಗಿ ಈ ಹಿಂದೆ ಚಿತ್ರತಂಡ ಹೇಳಿತ್ತು. ಆದರೆ ಕೊರೊನಾ ಭೀತಿಯಿಂದಾಗಿ ವಿದೇಶದಲ್ಲಿ ಚಿತ್ರೀಕರಣ ಆಗಬೇಕಿದ್ದ ಹಾಡಿನ ಚಿತ್ರೀಕರಣ ರದ್ದಾಯಿತು. ಅಷ್ಟೆ ಅಲ್ಲದೆ ದೊಡ್ಡದಾಗಿ ಆಯೋಜಿಸಿದ್ದ ಆಡಿಯೋ ಲಾಂಚ್ ಕಾರ್ಯಕ್ರಮವು ರದ್ದಾಯಿತು.

ಬಿಡುಗಡೆ ಮುಂದೂಡಲಾಗುತ್ತದೆಂಬ ಅನುಮಾನ ಕಾಡಿತ್ತು

ಬಿಡುಗಡೆ ಮುಂದೂಡಲಾಗುತ್ತದೆಂಬ ಅನುಮಾನ ಕಾಡಿತ್ತು

ಹೀಗಾಗಿ ಚಿತ್ರ ಬಿಡುಗಡೆ ಸಹ ಮುಂದಕ್ಕೆ ಹೋಗುತ್ತದೆ ಎಂಬ ಅನುಮಾನ ಸಹಜವಾಗಿಯೇ ಅಭಿಮಾನಿಗಳನ್ನು ಚಿಂತೆಗೆ ಈಡುಮಾಡಿತ್ತು. ಆದರೆ ಚಿತ್ರತಂಡ ಈ ಬಗ್ಗೆ ಸ್ಪಷ್ಟನೆ ನೀಡಿದ್ದು ಚಿತ್ರವನ್ನು ಏಪ್ರಿಲ್ ನಲ್ಲಿಯೇ ಬಿಡುಗಡೆ ಮಾಡುವುದಾಗಿ ಹೇಳಿದೆ.

ಸೆನ್ಸಾರ್ ಆದಮೇಲೆ ಅಧಿಕೃತ ದಿನಾಂಕ ಪ್ರಕಟ

ಸೆನ್ಸಾರ್ ಆದಮೇಲೆ ಅಧಿಕೃತ ದಿನಾಂಕ ಪ್ರಕಟ

ಚಿತ್ರವು ಸೆನ್ಸರ್‌ ಬೋರ್ಡ್‌ ನಿಂದ ಅನುಮತಿ ಪಡೆದ ಬಳಿಕ ದಿನಾಂಕವನ್ನು ಅಧಿಕೃತವಾಗಿ ಚಿತ್ರತಂಡ ಘೋಷಿಸಲಿದೆ. ಚಿತ್ರವನ್ನು ಏಪ್ರಿಲ್ 9 ಕ್ಕೆ ಬಿಡುಗಡೆ ಮಾಡುವುದಾಗಿ ಈ ಹಿಂದೆ ಹೇಳಿದ್ದೆವು. ಅಂತೆಯೇ ಅದೇ ದಿನವೇ ಬಿಡುಗಡೆ ಮಾಡಲು ಸಕಲ ಪ್ರಯತ್ನ ನಡೆದಿದೆ. ಅಂದೇ ಬಿಡುಗಡೆ ಆಗುವ ಸಾಧ್ಯತೆ ಹೆಚ್ಚಿದೆ ಎಂದು ಚಿತ್ರತಂಡ ಹೇಳಿದೆ.

ಪರಿಸ್ಥಿತಿ ಸುಧಾರಿಸುವ ವಿಶ್ವಾಸವಿದೆ: ಚಿತ್ರತಂಡ

ಪರಿಸ್ಥಿತಿ ಸುಧಾರಿಸುವ ವಿಶ್ವಾಸವಿದೆ: ಚಿತ್ರತಂಡ

'ಸರ್ಕಾರದ ಆದೇಶದಂತೆ ಚಿತ್ರಮಂದಿರಗಳು ಬಂದ್ ಆಗಿವೆ ಆದರೆ ನಮ್ಮ ಸಿನಿಮಾಕ್ಕೆ ಬಿಡುಗಡೆ ದಿನಾಂಕಕ್ಕೆ ಇನ್ನೂ ಸಮಯವಿದೆ. ಅಷ್ಟರಲ್ಲಿ ಪರಿಸ್ಥಿತಿ ಸರಿ ಹೋಗುವ ಪೂರ್ಣ ವಿಶ್ವಾಸವಿದೆ'' ಎಂದು ಸಿನಿಮಾದ ನಿರ್ದೇಶಕರು ಹೇಳಿದ್ದಾರೆ.

ದರ್ಶನ್ ಗೆ ವಿನೋದ್ ಪ್ರಭಾಕರ್ ಸಾಥ್

ದರ್ಶನ್ ಗೆ ವಿನೋದ್ ಪ್ರಭಾಕರ್ ಸಾಥ್

ರಾಬರ್ಟ್ ಸಿನಿಮಾದ ಟ್ರೇಲರ್ ಮತ್ತು ಲಿರಿಕಲ್ ಹಾಡು ಈಗಾಗಲೇ ಬಿಡುಗಡೆ ಆಗಿ ಭಾರಿ ಸದ್ದು ಮಾಡಿದೆ. ವಿನೋದ್ ಪ್ರಭಾಕರ್ ಸಹ ದರ್ಶನ್ ಅವರಿಗೆ ಈ ಚಿತ್ರದಲ್ಲಿ ಜೊತೆ ನೀಡಿದ್ದಾರೆ.

More from Filmibeat

English summary
Darshan's Robert movie may release on April 09 as film team said earlier. Officially date will be announced after the censor.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X