ತಂದೆಯ ಪಡಿಯಚ್ಚು; 'ಡೆವಿಲ್' ಚಿತ್ರದಲ್ಲಿ ವಿನೀಶ್ ಕಾಣಿಸಿಕೊಂಡಿದ್ದು ನಿಜಾನಾ? ಏನಿದು ಸರ್‌ಪ್ರೈಸ್

ದರ್ಶನ್ ನಟನೆಯ 'ಡೆವಿಲ್' ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಪ್ರಕಾಶ್ ವೀರ್ ನಿರ್ಮಿಸಿ ನಿರ್ದೇಶನ ಮಾಡಿರುವ ಆಕ್ಷನ್ ಥ್ರಿಲ್ಲರ್ ಚಿತ್ರದಲ್ಲಿ ಘಟಾನುಘಟಿ ಕಲಾವಿದರು ನಟಿಸಿದ್ದಾರೆ. ಅಚ್ಚರಿ ಅಂದ್ರೆ ಆಕ್ಷನ್ ಸನ್ನಿವೇಶವೊಂದರಲ್ಲಿ ದರ್ಶನ್ ಪುತ್ರ ವಿನೀಶ್ ಕೂಡ ಬಂದು ಹೋಗಿದ್ದಾರೆ. ಆದರೆ ಅದು ಯಾರ ಗಮನಕ್ಕೂ ಬಂದಿಲ್ಲ.

ಡಿಸೆಂಬರ್ 11ರಂದು ಬಿಡುಗಡೆಯಾಗಿದ್ದ 'ಡೆವಿಲ್' ಸಿನಿಮಾ 2ನೇ ವಾರಕ್ಕೆ ಕಾಲಿಟ್ಟಿದೆ. ಚಿತ್ರದ ಒಂದೊಂದೇ ವಿಡಿಯೋ ಸಾಂಗ್ ಕೂಡ ರಿಲೀಸ್ ಆಗ್ತಿದೆ. ವಿಜಯಲಕ್ಷ್ಮಿ ದರ್ಶನ್ ರಾಜ್ಯಾದ್ಯಂತ ವಿಜಯಯಾತ್ರೆಗೆ ಮುಂದಾಗಿದ್ದಾರೆ. ಮಂಡ್ಯದಿಂದ ಆರಂಭಿಸಿ ವಿವಿಧ ಜಿಲ್ಲೆಗಳಿಗೆ ಭೇಟಿ ನೀಡಿ ಸಿನಿಮಾ ಗೆಲ್ಲಿಸಿದ ಅಭಿಮಾನಿಗಳಿಗೆ ಧನ್ಯವಾದ ತಿಳಿಸಲು ಮುಂದಾಗಿದ್ದಾರೆ. ಇದೆಲ್ಲದರ ನಡುವೆ ದರ್ಶನ್ ಹಾಗೂ ಮಗ ವಿನೀಶ್ ಒಟ್ಟಿಗೆ 'ಡೆವಿಲ್' ಚಿತ್ರದ ಸೆಟ್‌ನಲ್ಲಿ ಕಾಣಿಸಿಕೊಂಡಿದ್ದ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.

Darshan s Son Vineesh Secretly Appears as Body Double in Devil Fans Didn t Notice

ಥೇಟ್ ದರ್ಶನ್ ರೀತಿಯಲ್ಲೇ ಕಾಸ್ಟ್ಯೂಮ್ ತೊಟ್ಟು ವಿನೀಶ್ ಮಿಂಚಿದ್ದಾನೆ. ಹೈಟು, ಪರ್ಸನಾಲಿಟಿ ಎಲ್ಲದರಲ್ಲೂ ವಿನೀಶ್ ತಂದೆಯನ್ನೇ ಹೋಲುತ್ತಾನೆ. ಚಿತ್ರದ ಆಕ್ಷನ್ ಸನ್ನಿವೇಶದಲ್ಲಿ ಅಪ್ಪನಿಗೆ ಡ್ಯೂಪ್ ಹಾಕಿದ್ದಾನೆ. ಈ ವಿಚಾರ ಸಿನಿಮಾ ನೋಡಿದ ಬಹುತೇಕರಿಗೆ ಗೊತ್ತಾಗಿಲ್ಲ. ಸಿನಿಮಾಗಳಲ್ಲಿ ನಾಯಕ, ನಾಯಕಿಗೆ ಡ್ಯೂಪ್ ಹಾಕುವುದು ಹೊಸದೇನು ಅಲ್ಲ. ಅದೇ ರೀತಿ 'ಡೆವಿಲ್' ಚಿತ್ರದ ಸಣ್ಣ ಝಲಕ್‌ನಲ್ಲಿ ವಿನೀಶ್ ಬಂದು ಹೋಗಿದ್ದಾನೆ.

ಉದಯ್‌ಪುರದಲ್ಲಿ 'ಡೆವಿಲ್' ಚಿತ್ರದ ಒಂದಷ್ಟು ಸನ್ನಿವೇಶಗಳನ್ನು ಚಿತ್ರೀಕರಿಸಲಾಗಿತ್ತು. ವಿಜಯಲಕ್ಷ್ಮಿ ದರ್ಶನ್ ಹಾಗೂ ಮಗ ವಿನೀಶ್ ಕೂಡ ಚಿತ್ರತಂಡದ ಜೊತೆ ಅಲ್ಲಿಗೆ ಹೋಗಿದ್ದರು. ಮೇಕಿಂಗ್ ವೀಡಿಯೋದಲ್ಲಿ ಕೂಡ ವಿನೀಶ್ ಹೇರ್ ಸ್ಟೈಲ್ ಮಾಡಿಕೊಳ್ಳುತ್ತಿದ್ದ ಫ್ರೇಮ್ ಕೂಡ ಮೇಕಿಂಗ್ ವೀಡಿಯೋದಲ್ಲಿ ಇತ್ತು. ಅದನ್ನು ನೋಡಿ ವಿನೀಶ್ ಕೂಡ ಚಿತ್ರದಲ್ಲಿ ನಟಿಸಿದ್ದಾನಾ? ಎನ್ನುವ ಅನುಮಾನ ಮೂಡಿತ್ತು.

Darshan s Son Vineesh Secretly Appears as Body Double in Devil Fans Didn t Notice

ಸದ್ಯ ವೈರಲ್ ಆಗುತ್ತಿರುವ ಫೋಟೊಗಳಲ್ಲಿ ಇಬ್ಬರೂ ಒಂದೇ ರೀತಿ ಮೇಕಪ್ ಹಾಕಿಕೊಂಡು ಸಿದ್ಧರಾಗಿದ್ದಾರೆ. ಅದೇ ಸನ್ನಿವೇಶದಲ್ಲಿ ತಂದೆ ದರ್ಶನ್ ಬದಲು ಡ್ಯೂಪ್ ಆಗಿ ವಿನೀಶ್ ಕಾಣಿಸಿಕೊಂಡಿದ್ದಾರೆ ಎನ್ನುವುದು ಗೊತ್ತಾಗುತ್ತಿದೆ. ಸೆಟ್‌ನಲ್ಲಿ ವಿನೀಶ್ ನೋಡಿ ಯಾಕೆ ಡ್ಯೂಪ್ ಮಾಡಿಸಬಾರದು ಎಂದು ಐಡಿಯಾ ಬಂದು ಈ ಪ್ರಯತ್ನ ಮಾಡಿದ್ದಾರೆ. ಈಗಾಗಲೇ ಬಾಲನಟನಾಗಿ ವಿನೀಶ್ 'ಮಿ. ಐರಾವತ' ಹಾಗೂ 'ಯಜಮಾನ' ಚಿತ್ರಗಳ ಸಣ್ಣ ಝಲಕ್‌ನಲ್ಲಿ ಕಾಣಿಸಿಕೊಂಡಿರುವುದು ಗೊತ್ತೇಯಿದೆ.

ಮಗನನ್ನು ಚಿತ್ರರಂಗಕ್ಕೆ ಪರಿಚಯಿಸುವ ಬಗ್ಗೆ ದರ್ಶನ್ ಈಗಾಗಲೇ ಮಾತನಾಡಿದ್ದಾರೆ. ಮುಂದಿನ ದಿನಗಳಲ್ಲಿ ಅವನನ್ನು ಚಿತ್ರರಂಗಕ್ಕೆ ಕರೆತರ್ತೀನಿ. ಆದರೆ ಸದ್ಯಕ್ಕೆ ಓದುತ್ತಿದ್ದಾನೆ ಓದಲಿ ಎಂದಿದ್ದರು. ಚಿತ್ರರಂಗಕ್ಕೆ ಬರುವಂತಿದ್ದರೆ ಮೊದಲು ಕ್ಯಾಮರಾ ಹಿಂದೆ ಕೆಲಸ ಕಲಿಯಬೇಕು. ಆ ಬಳಿಕ ಕ್ಯಾಮರಾ ಮುಂದೆ ಬರಲಿ ಎಂದು ಕೂಡ ಹೇಳಿದ್ದಾರೆ. ವಿನೀಶ್ ಈಗಾಗಲೇ ತಂದೆ ರೀತಿ ಕುದುರೆ ಸವಾರಿ ಕೂಡ ಕಲಿಯುತ್ತಿದ್ದಾನೆ.

ವಿನೀಶ್‌ಗೆ ಈಗ 16 ವರ್ಷ ವಯಸ್ಸು. 10ನೇ ತರಗತಿ ಮುಗಿಸಿದ್ದಾನೆ. ಇತ್ತೀಚೆಗೆ BGS ಉತ್ಸವ 2025 ವೇದಿಕೆಯಲ್ಲಿ ವಿನೀಶ್ ಡ್ಯಾನ್ಸ್ ಮಾಡಿದ್ದ ವೀಡಿಯೋ ವೈರಲ್ ಆಗಿತ್ತು. ತಮ್ಮದೇ ಕಾಲೇಜು ಕಾರ್ಯಕ್ರಮದಲ್ಲಿ ವೇದಿಕೆ ಏರಿದ್ದರು. ವಿಜಯಲಕ್ಷ್ಮಿ ದರ್ಶನ್ ಕೂಡ ಮಗನ ಪರ್ಫಾರ್ಮೆನ್ಸ್ ಕಣ್ತುಂಬಿಕೊಂಡಿದ್ದರು.

'ಡೆವಿಲ್' ಚಿತ್ರ ಭರ್ಜರಿ ಓಪನಿಂಗ್ ಪಡೆದುಕೊಂಡಿತ್ತು. ದರ್ಶನ್ ಅನುಪಸ್ಥಿತಿಯಲ್ಲಿ ಕೂಡ ಅಭಿಮಾನಿಗಳು ಅದ್ಧೂರಿಯಾಗಿ ಸಿನಿಮಾ ಬರಮಾಡಿಕೊಂಡಿದ್ದರು. ಆದರೆ ವೀಕೆಂಡ್ ಬಳಿಕ ವಾರದ ದಿನಗಳಲ್ಲಿ ಚಿತ್ರದ ಕಲೆಕ್ಷನ್ ಕಮ್ಮಿ ಆಗಿದೆ. 2ನೇ ವೀಕೆಂಡ್ ಹೇಗಿರುತ್ತೆ ರೆಸ್ಪಾನ್ಸ್ ಕಾದು ನೋಡಬೇಕಿದೆ.

More from Filmibeat

Read more about: darshan devil sandalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X