ಜೈಲಿನಲ್ಲಿರುವ ದರ್ಶನ್ ಹಾಗೂ ಅವರ ಅಭಿಮಾನಿಗಳಿಗೆ ನಾಳೆ ಬಹಳ ಮಹತ್ವದ ದಿನ

ರೇಣುಕಾಸ್ವಾಮಿ ಪ್ರಕರಣದಲ್ಲಿ ನಟ ದರ್ಶನ್‌ಗೆ ಸಂಕಷ್ಟ ಮುಂದುವರೆದಿದೆ. ಹೈಕೋರ್ಟ್‌ನಲ್ಲಿ ಜಾಮೀನು ಸಿಕ್ಕರೂ ಸುಪ್ರೀಂ ಕೋರ್ಟ್‌ನಲ್ಲಿ ರದ್ದಾಗಿ ಪ್ರಕರಣದ ಎಲ್ಲಾ ಆರೋಪಿಗಳು ಜೈಲು ಸೇರುವಂತಾಗಿತ್ತು. ಕಳೆದ ವರ್ಷ ಆಗಸ್ಟ್ 14ರಂದು ದರ್ಶನ್ ಪರಪ್ಪನ ಅಗ್ರಹಾರ ಜೈಲು ಸೇರಿದ್ದರು. 8 ತಿಂಗಳ ಬಳಿಕ ಜಾಮೀನು ಕೋರಿ ದರ್ಶನ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದಿದ್ದಾರೆ.

ಈಗಾಗಲೇ ರೇಣುಕಾಸ್ವಾಮಿ ಪ್ರಕರಣಡ ಟ್ರಯಲ್ ಆರಂಭವಾಗಿದೆ. ಸಾಕ್ಷ್ಯಗಳ ವಿಚಾರಣೆ ನಾಲ್ಕೈದು ತಿಂಗಳಿನಿಂದ ನಡೀತಿದೆ. ಪ್ರಾಥಮಿಕ ಸಾಕ್ಷಿಗಳಾಗಿ ರೇಣುಕಾಸ್ವಾಮಿ ತಂದೆ-ತಾಯಿ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ. ಅವರನ್ನು ಕ್ರಾಸ್ ಎಕ್ಸಾಮಿನೇಷನ್ ಕೂಡ ನಡೆದಿದೆ. ಸದ್ಯ ಪ್ರಕರಣದ ಟ್ರಯಲ್ ನಡೆಯುತ್ತಿರುವಾಗಲೇ ದರ್ಶನ್ ಸುಪ್ರೀಂ ಕೋರ್ಟ್ ಕದ ತಟ್ಟಿದ್ದಾರೆ. ವಿಚಾರಣೆ ತಡವಾಗುತ್ತಿದೆ. ಹಾಗಾಗಿ ಮಧ್ಯಂತರ ಜಾಮೀನು ನೀಡಿ ಎಂದು ವಕೀಲರ ಮೂಲಕ ಏಪ್ರಿಲ್ 27ರಂದು ರಿಟ್ ಅರ್ಜಿ ಸಲ್ಲಿಸಿದ್ದಾರೆ.

Darshan s Supreme Court Bail Hearing on May 4 in Renukaswamy Case Crucial Day for Actor and fans

ಸದ್ಯ ದರ್ಶನ ಪರ ವಕೀಲರು ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿರುವ ಜಾಮೀನು ಅರ್ಜಿ ವಿಚಾರಣೆ ನಾಳೆ(ಮೇ 4) ನಡೆಯಲಿದೆ. ಹಾಗಾಗಿ ದರ್ಶನ್ ಹಾಗೂ ಅವರ ಅಭಿಮಾನಿಗಳಿಗೆ ಇದು ಬಹಳ ಮುಖ್ಯ ಎನಿಸಿದೆ. ನೆಚ್ಚಿನ ನಟ ಸಂಕಷ್ಟದಿಂದ ಪಾರಾಗಬೇಕು, ಆದಷ್ಟು ಬೇಗ ಮತ್ತೆ ನಮ್ಮ ನಡುವೆ ಓಡಾಡಬೇಕು, ಸಿನಿಮಾಗಳಲ್ಲಿ ನಟಿಸಬೇಕು, ನಮ್ಮನ್ನು ರಂಜಿಸಬೇಕು ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ.

ಸುಪ್ರೀಂ ಕೋರ್ಟ್‌ನಲ್ಲಿ ಜಾಮೀನು ಅಷ್ಟು ಸುಲಭವಾಗಿ ಸಿಗಲ್ಲ ಎನ್ನಲಾಗ್ತಿದೆ. ಈ ಹಿಂದೆ ಪ್ರಕರಣದ ಎ1 ಆರೋಪಿ ಪವಿತ್ರಾ ಗೌಡ ಕೂಡ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿ ಜಾಮೀನು ಕೇಳಿದ್ದರು. ಆದರೆ ಆಕೆಗೆ ನಿರಾಸೆಯಾಗಿತ್ತು. ಕಾನೂನು ಎಲ್ಲರಿಗೂ ಒಂದೇ ಎಂದು ಹೇಳಿ ಹೈಕೋರ್ಟ್ ನೀಡಿದ್ದ ಜಾಮೀನು ರದ್ದು ಮಾಡಿ ಸುಪ್ರೀಂ ಕೋರ್ಟ್ ಆದೇಶ ನೀಡಿತ್ತು. ತಕ್ಷಣವೇ ಆರೋಪಿಗಳು ಶರಣಾಗುವಂತೆ ಸೂಚಿಸಿತ್ತು. ಹಾಗಾಗಿ ನಟ ದರ್ಶನ್‌ಗೆ ಮತ್ತೆ ಜಾಮೀನು ಸಿಗುತ್ತಾ? ಎನ್ನುವ ಕುತೂಹಲ ಮೂಡಿದೆ.

ಟ್ರಯಲ್ ಆರಂಭವಾದ ಬಳಿಕ ಸದ್ಯ ಪ್ರಕರಣದಲ್ಲಿ 15 ಸಾಕ್ಷಿಗಳ ವಿಚಾರಣೆ ಮಾತ್ರ ನಡೆದಿದೆ. ಪ್ರಕರಣದಲ್ಲಿ ಇನ್ನು 258 ಸಾಕ್ಷ್ಯಗಳ ವಿಚಾರಣೆ, ಪರಿಶೀಲನೆ ನಡೆಯಬೇಕಿದೆ. ಇದಕ್ಕೆ ಸಾಕಷ್ಟು ಸಮಯ ಬೇಕಾಗಬಹುದು. ಹಾಗಾಗಿ ಸದ್ಯಕ್ಕೆ ಜಾಮೀನು ನೀಡಿ ಎಂದು ದರ್ಶನ್ ಮನವಿ ಮಾಡಿದ್ದಾರೆ. "ಪ್ರಕರಣದಲ್ಲಿ 8 ತಿಂಗಳು ಕಳೆದರೂ ಎಲ್ಲಾ ಸಾಕ್ಷಿಗಳ ವಿಚಾರಣೆ ಕಂಪ್ಲೀಟ್ ಆಗಿಲ್ಲ. ಸಾಕ್ಷಿಗಳ ವಿಚಾರಣೆ ತಡವಾಗುತ್ತಿದೆ. ಹೀಗೆ ಮುಂದುವರೆದರೆ ಹಲವು ವರ್ಷಗಳು ಬೇಕಾಗಬಹುದು. ಹಾಗಾಗಿ ಜಾಮೀನು ಮಂಜೂರು ಮಾಡಿ" ಎಂದು ದರ್ಶನ್ ಅರ್ಜಿ ಹಾಕಿ ಮನವಿ ಮಾಡಿದ್ದಾರೆ.

ದರ್ಶನ್ ಬೇಗ ಜೈಲಿನಿಂದ ಬಿಡುಗಡೆಯಾಗಿ ಬರಲಿ ಎಂದು ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ. ಪತ್ನಿ ವಿಜಯಲಕ್ಷ್ಮಿ ಸೇರಿದಂತೆ ಆಪ್ತರು ಆಗಾಗ್ಗೆ ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡಿ ದರ್ಶನ್ ಅವರನ್ನು ಮಾತನಾಡಿಸಿಕೊಂಡು ಬರ್ತಿದ್ದಾರೆ. ಧೈರ್ಯ ತುಂಬುತ್ತಿದ್ದಾರೆ. ಪತ್ನಿ ವಿಜಯಲಕ್ಷ್ಮಿ ದೇವರ ಮೇಲೆ ಭಾರ ಹಾಕಿದ್ದಾರೆ. ದರ್ಶನ್ ಕಾನೂನು ಹೋರಾಟ ಆರಂಭಿಸಿದ್ದಾರೆ.

ದರ್ಶನ್ ಜೈಲಿನಿಂದ ಹೊರಬರಬೇಕು ಎಂದು ಚಿತ್ರರಂಗ ಕೂಡ ಕಾಯುತ್ತಿದೆ. 'ಡೆವಿಲ್' ಸಿನಿಮಾ ಒಂದು ಶೆಡ್ಯೂಲ್ ಚಿತ್ರೀಕರಣದ ಬಳಿಕ ದರ್ಶನ ಗಾಯಗೊಂಡಿದ್ದರು. ಹಾಗಾಗಿ ಚಿತ್ರೀಕರಣ ತಡವಾಗಿತ್ತು. 2ನೇ ಶೆಡ್ಯೂಲ್ ಆರಂಭಿಸುವ ಮುನ್ನ ರೇಣುಕಾಸ್ವಾಮಿ ಪ್ರಕರಣ ಬೆಳಕಿಗೆ ಬಂದಿತ್ತು. 2024, ಜೂನ್ 11ರಂದು ದರ್ಶನ್ ಬಂಧನವಾಗಿತ್ತು. ಬಳಿಕ ವಿಚಾರಣಧೀನ ಕೈದಿಯಾಗಿ ಜೈಲು ಸೇರಿದ್ದರು. ಅಕ್ಟೋಬರ್ ಕೊನೆಗೆ ಜಾಮೀನು ಪಡೆದು ಹೊರಬಂದಿದ್ದರು. ಒಂದಷ್ಟು ದಿನ ವಿಶ್ರಾಂತಿ ಪಡೆದು ಬಳಿಕ 'ಡೆವಿಲ್' ಸಿನಿಮಾ ಚಿತ್ರೀಕರಣ ಮುಗಿಸಿದ್ದರು.

Read more about: darshan sandalwood kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X