twitter
    For Quick Alerts
    ALLOW NOTIFICATIONS  
    For Daily Alerts

    ದರ್ಶನ್ 'ಕೌರವ'ನಾಗಲು ಸಿದ್ದವಾಗಿದ್ದು ಯಾಕೆ?

    By Bharath Kumar
    |

    ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ 50ನೇ ಚಿತ್ರವನ್ನ ಮೈಲುಗಲ್ಲು ಮಾಡಿಕೊಂಡಿದ್ದಾರೆ. 'ಕುರುಕ್ಷೇತ್ರ' ಎಂಬ ಪೌರಣಿಕ ಚಿತ್ರವನ್ನ ಮಾಡುತ್ತಿದ್ದು, ಈ ಚಿತ್ರದಲ್ಲಿ ದುರ್ಯೋಧನ ಪಾತ್ರವನ್ನ ನಿರ್ವಹಿಸುತ್ತಿದ್ದಾರೆ.

    'ಮಹಾಭಾರತ' ಅಥವಾ 'ಕುರುಕ್ಷೇತ್ರ' ಎಂದಾಕ್ಷಣ ಮೊದಲು ನೆನಪಾಗುವುದು ಪಾಂಡವರು. ಕೌರವರು ಅಂದ್ರೆ, ದ್ರೌಪದಿ ವಸ್ತ್ರಾಪಹರಣ ಮಾಡಿದ್ರು, ಪಾಂಡವರಿಗೆ ಮೋಸ ಮಾಡಿದ್ರು ಎಂಬ ಟೀಕೆಗಳೇ ಹೆಚ್ಚು. ಹೀಗಿರುವಾಗ, ದರ್ಶನ್ ದುರ್ಯೋಧನನ ಪಾತ್ರ ಮಾಡುತ್ತಿರುವುದು ಯಾಕೆ? ಎಂಬ ಪ್ರಶ್ನೆ ಹಲವರದ್ದು.

    ಇದಕ್ಕೆ ಸ್ವತಃ ನಟ ದರ್ಶನ್ ಉತ್ತರ ಕೊಟ್ಟಿದ್ದಾರೆ. ದುಯೋರ್ಧನ ಪಾತ್ರದ ಮಹತ್ವದ ಬಗ್ಗೆ ಹಾಗೂ ಈ ಪಾತ್ರವನ್ನ ಆಯ್ಕೆ ಮಾಡಿಕೊಂಡಿದ್ದರ ಬಗ್ಗೆ ಸುದ್ದಿ ಪತ್ರಿಕೆಯೊಂದಿಗೆ ಮಾತನಾಡಿದ್ದಾರೆ. ಮುಂದೆ ಓದಿ.....

    ನನ್ನ ಪಾಲಿಗೆ ದುರ್ಯೋಧನ ನಾಯಕ

    ನನ್ನ ಪಾಲಿಗೆ ದುರ್ಯೋಧನ ನಾಯಕ

    ''ನನ್ನ ಪಾಲಿಗೆ ದುರ್ಯೋಧನ ಕೂಡ ನಾಯಕನೇ. ಐವತ್ತನೇ ಚಿತ್ರದಲ್ಲಿ ಕೌರವನ ಪಾತ್ರ ಯಾಕೆ ಮಾಡುತ್ತೀರಿ ಅಂತ ಅನೇಕರು ಕೇಳಿದರು. ಯಾಕೆ ಮಾಡಬಾರದು ಅಂತ ನಾನು ಕೇಳುತ್ತೇನೆ'' - ದರ್ಶನ್, ನಟ

    ಅಷ್ಟಕ್ಕೂ, 'ಕುರುಕ್ಷೇತ್ರ' ಚಿತ್ರದ ಕಥೆ ಏನು.?ಅಷ್ಟಕ್ಕೂ, 'ಕುರುಕ್ಷೇತ್ರ' ಚಿತ್ರದ ಕಥೆ ಏನು.?

    ದುರ್ಯೋಧನ ಕೆಟ್ಟವನಲ್ಲ

    ದುರ್ಯೋಧನ ಕೆಟ್ಟವನಲ್ಲ

    ''ದುರ್ಯೋಧನ ಕೆಟ್ಟವನಲ್ಲ. ಹಾಗೆ ನೋಡಿದರೆ ಪಾಂಡವರು ಪೈಕಿ ನ್ಯಾಯವಾಗಿ ಯುದ್ಧ ಗೆದ್ದವರು ಯಾರಿದ್ದಾರೆ? ಭೀಷ್ಮರ ಮುಂದೆ ಶಿಖಂಡಿಯನ್ನ ನಿಲ್ಲಿಸಿ ಗೆದ್ದರು, ಕರ್ಣನ ಕವಚ ದಾನ ಪಡೆದುಕೊಂಡರು, ಯುದ್ಧವನ್ನು ಅವರೂ ಮೋಸದ ಮೂಲಕವೇ ಗೆದ್ದರು. ಆದರೆ ಕೌರವ ಹಾಗೆ ಮಾಡಲಿಲ್ಲ'' - ದರ್ಶನ್, ನಟ

    ಯಾರೂ ನಿರೀಕ್ಷೆ ಮಾಡದ ನಟ ಈಗ ದರ್ಶನ್ 'ಕುರುಕ್ಷೇತ್ರ'ದಲ್ಲಿ ಭೀಮ.!ಯಾರೂ ನಿರೀಕ್ಷೆ ಮಾಡದ ನಟ ಈಗ ದರ್ಶನ್ 'ಕುರುಕ್ಷೇತ್ರ'ದಲ್ಲಿ ಭೀಮ.!

    ಕೌರವನ ಹಿರಿಮೆ ಹೆಚ್ಚಿದೆ

    ಕೌರವನ ಹಿರಿಮೆ ಹೆಚ್ಚಿದೆ

    ''ಮರ್ಯನಿರ್ಮಿತ ಅರಮನೆಗೆ ಕೌರವನನ್ನು ಕರೆಸಿ, ಆತ ಅಲ್ಲಿ ಬಿದ್ದಾಗ ದ್ರೌಪದಿ ನಕ್ಕು ಅವಮಾನಿಸಿದ್ದು, ಗದಾಯುದ್ಧದಲ್ಲಿ ಕೌರವನ ತೊಡೆಗೆ ಹೊಡೆದು ಕೊಲ್ಲು ಭೀಮನಿಗೆ ಕೃಷ್ಣ ಸೂಚಿಸಿದ್ದು - ಇವೆಲ್ಲವನ್ನೂ ನೋಡಿದಾಗ ಕೌರವನ ಹಿರಿಮೆ ಗೊತ್ತಾಗುತ್ತದೆ'' - ದರ್ಶನ್, ನಟ

    'ಕುರುಕ್ಷೇತ್ರ' ಚಿತ್ರದಲ್ಲಿ ನಿಖಿಲ್ ಕುಮಾರ್ ಲುಕ್ ಬಹಿರಂಗ'ಕುರುಕ್ಷೇತ್ರ' ಚಿತ್ರದಲ್ಲಿ ನಿಖಿಲ್ ಕುಮಾರ್ ಲುಕ್ ಬಹಿರಂಗ

    ದುರ್ಯೋಧನನ ದೃಷ್ಟಿಕೋನ ಯಾಕೆ?

    ದುರ್ಯೋಧನನ ದೃಷ್ಟಿಕೋನ ಯಾಕೆ?

    ''ಅದು ಮಹಾಭಾರತದ ಶಕ್ತಿ, ರಾಮಾಯಣವನ್ನು ನಾವು ಶ್ರೀರಾಮ, ಸೀತೆ, ರಾವಣ, ಹನುಮಂತ, ಲಕ್ಷ್ಮಣ- ಈ ಪಾತ್ರಗಳನ್ನು ಬಿಟ್ಟು ಬೇರೆ ಪಾತ್ರದಿಂದ ಹೇಳುವುದು ಕಷ್ಟ. ಆದರೆ ಮಹಾಭಾರತ ಹಾಗಲ್ಲ. ಶಿಖಂಡಿ, ಶಕುನಿ, ಕೃಷ್ಣ, ಧರ್ಮರಾಯ, ಕೌರವ-ಯಾರ ದೃಷ್ಟಿ ಕೋನದ ಮೂಲಕವೂ ಹೇಳಬಹುದು, ನಾವು ಆರಿಸಿಕೊಂಡಿರುವುದು ಈ ದಾರಿ'' - ದರ್ಶನ್, ನಟ

    ಬಿಗ್ ಬ್ರೇಕಿಂಗ್: 'ಕುರುಕ್ಷೇತ್ರ'ಕ್ಕೆ ದ್ರೌಪದಿ ಸಿಕ್ಕಿದ್ರಂತೆ.!ಬಿಗ್ ಬ್ರೇಕಿಂಗ್: 'ಕುರುಕ್ಷೇತ್ರ'ಕ್ಕೆ ದ್ರೌಪದಿ ಸಿಕ್ಕಿದ್ರಂತೆ.!

    ಕೌರವನ ಪಾತ್ರ ಸವಾಲಾಗಿದೆ

    ಕೌರವನ ಪಾತ್ರ ಸವಾಲಾಗಿದೆ

    ''ಒಬ್ಬ ನಟನಿಗೆ ಎಲ್ಲ ಪಾತ್ರಗಳೂ ಸವಾಲು ನೀಡುವಂಥದ್ದೇ. ಪ್ರತಿಯೊಂದು ಪಾತ್ರವನ್ನು ಒಬ್ಬ ನಟ ಅದೇ ಮೊದಲ ಚಿತ್ರ ಎಂಬಷ್ಟು ಎಚ್ಚರಿಕೆಯಿಂದಲೇ ಮಾಡಬೇಕು. ಕೌರವನ ಪಾತ್ರಕ್ಕೆ ಅಗಾಧತೆ ಇದೆ. ಆತನ ಭಯ, ಧೈರ್ಯ, ಶಕ್ತಿ, ಛಲ, ಎಲ್ಲವನ್ನೂ ಮೈಗೂಡಿಸಿಕೊಂಡು ಅಭಿನಯಿಸಬೇಕಾದ್ದರಿಂದ ಈ ಪಾತ್ರದ ವಿಸ್ತಾರವೇ ಬೇರೆ. ಹೀಗಾಗಿ, ನನಗೆ ಇದು ಖುಷಿ ಮತ್ತು ಸವಾಲಿನ ಪಾತ್ರವೂ ಹೌದು...'' - ದರ್ಶನ್, ನಟ

    50ನೇ ಸಿನಿಮಾ 'ಕುರುಕ್ಷೇತ್ರ'ಕ್ಕಾಗಿ ಡಿ ಬಾಸ್ ದರ್ಶನ್ ಸಿಕ್ಕಾಪಟ್ಟೆ ಡೆಡಿಕೇಶನ್50ನೇ ಸಿನಿಮಾ 'ಕುರುಕ್ಷೇತ್ರ'ಕ್ಕಾಗಿ ಡಿ ಬಾಸ್ ದರ್ಶನ್ ಸಿಕ್ಕಾಪಟ್ಟೆ ಡೆಡಿಕೇಶನ್

    English summary
    Challenging Star Darshan Talk about his character duryodhana. darshan Playing duryodhana in Kurukshetra Movie. The movie directed by naganna and prdoduced by munirathna.
    Thursday, July 27, 2017, 15:38
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X