»   » ದರ್ಶನ್ 'ತಾರಕ್'ಗೆ ಟಾಲಿವುಡ್ ಪ್ರಿನ್ಸ್ ಚಾಲೆಂಜ್.!

ದರ್ಶನ್ 'ತಾರಕ್'ಗೆ ಟಾಲಿವುಡ್ ಪ್ರಿನ್ಸ್ ಚಾಲೆಂಜ್.!

Posted By:
Subscribe to Filmibeat Kannada

ದಸರಾ ಹಬ್ಬದ ಪ್ರಯುಕ್ತ ಕನ್ನಡದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ತಾರಕ್' ಚಿತ್ರ ತೆರೆ ಕಾಣುತ್ತಿದೆ. ಇನ್ನುಳಿದಂತೆ ಸ್ಯಾಂಡಲ್ ವುಡ್ ನಲ್ಲಿ ಯಾವ ದೊಡ್ಡ ಸಿನಿಮಾಗಳು ಬರುತ್ತಿಲ್ಲ.

ಆದ್ರೆ, ತಮಿಳು ಮತ್ತು ತೆಲುಗಿನಲ್ಲಿ ದೊಡ್ಡ ಸ್ಟಾರ್ ನಟರ ಚಿತ್ರಗಳು ದಸರಾ ಹಬ್ಬಕ್ಕೆ ಬಿಡುಗಡೆಯಾಗುತ್ತಿದೆ. ಹೀಗಾಗಿ, ಕರ್ನಾಟಕದಲ್ಲಿ ಪರಭಾಷಾ ವ್ಯಾಮೋಹ ಹೆಚ್ಚಿರುವುದರಿಂದ ಕರ್ನಾಟಕ ಬಾಕ್ಸ್ ಆಫೀಸ್ ನಲ್ಲಿ 'ತಾರಕ್' ಚಿತ್ರಕ್ಕೆ ಚಾಲೆಂಜ್ ಆಗಲಿದ್ಯಾ ಎಂಬ ಚರ್ಚೆಗಳು ಆರಂಭವಾಗಿದೆ.

ಹಾಗಿದ್ರೆ, ದರ್ಶನ್ 'ತಾರಕ್' ಗೆ ಚಾಲೆಂಜ್ ಆಗಲಿರುವ ಪರಭಾಷಾ ಚಿತ್ರಗಳು ಯಾವುದು? ಮುಂದೆ ಓದಿ....

ದಸರಾ ಹಬ್ಬಕ್ಕೆ 'ತಾರಕ್' ಎಂಟ್ರಿ

ದಸರಾ ಹಬ್ಬದ ಪ್ರಯುಕ್ತ ದರ್ಶನ್ ಅಭಿನಯದ 'ತಾರಕ್' ಚಿತ್ರ ಸೆಪ್ಟಂಬರ್ 29 ರಂದು ಬಿಡುಗಡೆಯಾಗುತ್ತಿದೆ. ಪಕ್ಕಾ ಫ್ಯಾಮಿಲಿ ಎಂಟರ್ ಟೈನ್ ಮೆಂಟ್ ಚಿತ್ರ ಇದಾಗಿದ್ದು, ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಲಿದೆ ಎಂಬ ಕುತೂಹಲ ಹೆಚ್ಚಾಗಿದೆ.

'ತಾರಕ್' ಹಾಡಿಗೆ ಡ್ಯಾನ್ಸ್ ಮಾಡಿ, 25 ಸಾವಿರ ಗೆಲ್ಲಿ.!

'ತಾರಕ್' ಗೆ 'ಸ್ಪೈಡರ್' ಚಾಲೆಂಜ್!

'ತಾರಕ್' ಬಿಡುಗಡೆಗೂ ಒಂದು ದಿನ ಮುಂಚೆ ತೆಲುಗು ನಟ ಮಹೇಶ್ ಬಾಬು ಅಭಿನಯದ 'ಸ್ಪೈಡರ್' ಸಿನಿಮಾ ರಿಲೀಸ್ ಆಗುತ್ತಿದೆ. ಇದೊಂದು ಥ್ರಿಲ್ಲರ್ ಸಿನಿಮಾ ಆಗಿದ್ದು, ಈಗಾಗಲೇ ಟೀಸರ್ ಮೂಲಕ ದೊಡ್ಡ ಮಟ್ಟದ ಸೌಂಡ್ ಮಾಡುತ್ತಿದೆ. ಎ.ಆರ್ ಮುರುಗುದಾಸ್ ಈ ಚಿತ್ರವನ್ನ ನಿರ್ದೇಶನ ಮಾಡಿದ್ದಾರೆ.

'ತಾರಕ್' ವರ್ಸಸ್ 'ಸ್ಟೈಡರ್'

ತೆಲುಗಿನ 'ಸ್ಟೈಡರ್' ಹೇಗೆ 'ತಾರಕ್' ಸಿನಿಮಾಗೆ ಚಾಲೆಂಜ್ ಆಗಲಿದೆ ಅಂದ್ರೆ, 'ಸ್ಟೈಡರ್' ಚಿತ್ರ ಕರ್ನಾಟಕದಲ್ಲೂ ದೊಡ್ಡ ಮಟ್ಟದಲ್ಲಿ ಬಿಡುಗಡೆಯಾಗಲಿದೆ. ಹೀಗಾಗಿ, ಬಾಕ್ಸ್ ಆಫೀಸ್ ನಲ್ಲಿ 'ತಾರಕ್' ಗೆ ಚಾಲೆಂಜ್ ಆಗಲಿದೆ. ಅದಕ್ಕು ಹೆಚ್ಚಾಗಿ ಕರ್ನಾಟಕದಲ್ಲಿ ಬೇರೆ ಭಾಷೆ ಸಿನಿಮಾ ನೋಡುವ ಪ್ರೇಕ್ಷಕರು ಹೆಚ್ಚಿದ್ದಾರೆ ಎಂಬ ವಾದ ಈ ಎಲ್ಲಾ ಚರ್ಚೆಗಳಿಗೂ ಕಾರಣವಾಗಿದೆ.

'ಟೀಸರ್'ನಿಂದಲೇ ದಾಖಲೆ ಸೃಷ್ಠಿ ಮಾಡುತ್ತಿರುವ 'ಸ್ಪೈಡರ್'!

'ಸ್ಪೈಡರ್' ಜೊತೆಗೆ ಮತ್ತಷ್ಟು ಚಿತ್ರಗಳು

ಕೇವಲ 'ಸ್ಟೈಡರ್' ಮಾತ್ರವಲ್ಲ, ಜೂನಿಯರ್ ಎನ್.ಟಿ.ಆರ್ ಅಭಿನಯದ 'ಜೈ ಲವಕುಶ' ಸಿನಿಮಾ, 'ತಾರಕ್' ಚಿತ್ರಕ್ಕಿಂತ ಒಂದು ವಾರ ಮುಂಚೆ ಬಿಡುಗಡೆಯಾಗುತ್ತಿದೆ. ಹೀಗಾಗಿ, ಥಿಯೇಟರ್ ಸಮಸ್ಯೆ ಎದುರಾದರೂ ಅಚ್ಚರಿಯಿಲ್ಲ.

ದಸರಾ ಹಬ್ಬದ ಸಂಭ್ರಮ ಹೆಚ್ಚಿಸಲು ಬರ್ತಿದ್ದಾನೆ 'ತಾರಕ್'

ಕರ್ನಾಟಕದಲ್ಲಿ ಕನ್ನಡಿಗರೇ ಸಾರ್ವಭೌಮ

ಆದ್ರೆ, ಯಾವುದೇ ಸಿನಿಮಾ ಬಂದ್ರು, ಕನ್ನಡ ಸಿನಿಮಾಗಳನ್ನ ಮೊದಲು ನೋಡ್ತಿವಿ ಎಂಬ ಸ್ವಾಭಿಮಾನ ಕನ್ನಡಿಗರಿಗಿದೆ. ಹೀಗಾಗಿ, ದರ್ಶನ್ 'ತಾರಕ್' ಈ ಚಾಲೆಂಜ್ ಗಳನ್ನ ಎದುರಿಸಿ ನಿಲ್ಲಲಿದೆ.

English summary
Telugu Actor Mahesh babu starrer 'Spyder' and challenging star darshan's Tarak Movie Release together on Dasara Special.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada