ದರ್ಶನ್ 'ತಾರಕ್' ಸಿನಿಮಾ ಬಿಡುಗಡೆಯ ದಿನಾಂಕ ಫಿಕ್ಸ್ ಆಯ್ತು

By Naveen

ಡಿ ಬಾಸ್ ದರ್ಶನ್ ಅಣ್ಣನ ಸಿನಿಮಾ ಯಾವಾಗ ರಿಲೀಸ್ ಅಂತ ಫ್ಯಾನ್ಸ್ ಕಾಯ್ತಿದ್ದಾರೆ. 'ಚಕ್ರವರ್ತಿ' ನಂತರ ದರ್ಶನ್ ಅವರನ್ನು ಆದಷ್ಟೂ ಬೇಗ ತೆರೆ ಮೇಲೆ ನೋಡಬೇಕು ಎಂಬ ಕಾತುರ ಅವರದ್ದು. ಇದೀಗ ಅವರ ಆಸೆ ನೆರವೇರುವ ಸಮಯ ಹತ್ತಿರ ಬಂದಿದೆ.

ದರ್ಶನ್ ಈಗ 'ತಾರಕ್' ಸಿನಿಮಾದಲ್ಲಿ ಬಿಜಿ ಇದ್ದಾರೆ. ಮಿಲನ ಪ್ರಕಾಶ್ ನಿರ್ದೇಶನ ಮಾಡುತ್ತಿರುವ ಈ ಸಿನಿಮಾದ ಬಗ್ಗೆ ನಿರೀಕ್ಷೆ ಸಾಮಾನ್ಯವಾಗಿಯೇ ಹೆಚ್ಚಿದೆ. ಮೂಲಗಳ ಪ್ರಕಾರ 'ತಾರಕ್' ಸಿನಿಮಾದ ಚಿತ್ರೀಕರಣ ಈಗಾಗಲೇ ಮುಗಿದಿದೆಯಂತೆ. ಅಲ್ಲದೆ ನಿರ್ದೇಶಕ ಪ್ರಕಾಶ್ ಸಿನಿಮಾ ಬಿಡುಗಡೆಯ ದಿನಾಂಕವನ್ನು ಅನೌನ್ಸ್ ಮಾಡಿದ್ದಾರೆ. ಮುಂದೆ ಓದಿ...

ಸಪ್ಟೆಂಬರ್ 29ಕ್ಕೆ

ಸಪ್ಟೆಂಬರ್ 29ಕ್ಕೆ

'ತಾರಕ್' ಸಿನಿಮಾದ ರಿಲೀಸ್ ಡೇಟ್ ಫಿಕ್ಸ್ ಆಗಿದೆ. ಸಿನಿಮಾವನ್ನು ಸಪ್ಟೆಂಬರ್ 29ಕ್ಕೆ ಬಿಡುಗಡೆ ಮಾಡುವುದಕ್ಕೆ ಚಿತ್ರತಂಡ ತಯಾರಿ ನಡೆಸಿದೆ.

ಚಿತ್ರೀಕರಣ ಮುಗಿದಿದೆ

ಚಿತ್ರೀಕರಣ ಮುಗಿದಿದೆ

'ತಾರಕ್' ಸಿನಿಮಾದ ಶೂಟಿಂಗ್ ಈಗಾಗಲೇ ಕಂಪ್ಲೀಟ್ ಆಗಿದೆ. ಸದ್ಯ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಚಿತ್ರತಂಡ ತೊಡಗಿದೆ.

ವಿದೇಶದಿಂದ ಬಂದ ದರ್ಶನ್

ವಿದೇಶದಿಂದ ಬಂದ ದರ್ಶನ್

'ತಾರಕ್' ಸಿನಿಮಾದ ಚಿತ್ರೀಕರಣಕ್ಕಾಗಿ ವಿದೇಶಕ್ಕೆ ತೆರಳಿದ ದರ್ಶನ್ ವಾಪಸ್ ಆಗಿದ್ದಾರೆ. ಚಿತ್ರದ ಹಾಡಿನ ಮತ್ತು ಸಾಹಸ ದೃಶ್ಯವನ್ನು ಮಲೇಶಿಯಾದಲ್ಲಿ ಶೂಟಿಂಗ್ ಮಾಡಲಾಗಿತ್ತು.

'ತಾರಕ್' ಸ್ಪೆಷಾಲಿಟಿ

'ತಾರಕ್' ಸ್ಪೆಷಾಲಿಟಿ

'ತಾರಕ್' ಸಿನಿಮಾ ಅನೇಕ ವಿಶೇಷತೆಗಳನ್ನು ಹೊಂದಿದೆ. ನಟ ದೇವರಾಜ್, ದರ್ಶನ್ ತಂದೆಯ ಪಾತ್ರವನ್ನು ಮಾಡುತ್ತಿದ್ದಾರೆ. ಶಾನ್ವಿ ಶ್ರೀವತ್ಸವ್ ಮತ್ತು ಶೃತಿ ಹರಿಹರನ್ ಚಿತ್ರದ ನಾಯಕಿಯರಾಗಿದ್ದಾರೆ.

ಫ್ಯಾಮಿಲಿ ಸಿನಿಮಾ

ಫ್ಯಾಮಿಲಿ ಸಿನಿಮಾ

ದರ್ಶನ್ ಸಿನಿಮಾ ಅಂದರೆ ಮಾಸ್ ಆಗಿರುತ್ತದೆ ಎಂಬ ಭಾವನೆ ಇರುತ್ತದೆ. ಆದರೆ 'ತಾರಕ್' ಸಿನಿಮಾವನ್ನು ಮಿಲನ ಪ್ರಕಾಶ್ ನಿರ್ದೇಶನ ಮಾಡಿದ್ದು, ಚಿತ್ರ ಫ್ಯಾಮಿಲಿ ಆಡಿಯನ್ಸ್ ಗೆ ಬೆಸ್ಡ್ ಆಗಿ ಇರಲಿದೆ ಎಂಬ ಸುದ್ದಿ ಇದೆ.

More from Filmibeat

English summary
Challenging Star Darshan starrer Kannada Movie 'Tarak' is Likely to release on september 29th. The movie is directed by Milana Prakash features Shanvi Srivastava, Sruthi Hariharan in the lead role.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X