For Quick Alerts
  ALLOW NOTIFICATIONS  
  For Daily Alerts

  ವೀರ ಮದಕರಿ ನಾಯಕ ಸಿನಿಮಾ: ದರ್ಶನ್ ಅಭಿಮಾನಿಗಳಿಗೆ ಸಿಹಿ ಸುದ್ದಿ

  |

  ದರ್ಶನ್ ಸಿನಿಮಾಗಳು ತೆರೆ ಕಂಡು ಅರ್ದ ವರ್ಷವಾಯಿತು. ಅವರ ಒಡೆಯ ಸಿನಿಮಾ ಡಿಸೆಂಬರ್ 12 , 2019 ರಂದು ಬಿಡುಗಡೆ ಆಗಿತ್ತು.

  ಸಹೋದರನಿಗಾಗಿ ಭಾವನಾತ್ಮಕ‌ ಹಾಡು ಹಾಡಿದ ವಾಜಿದ್ ಅವರ ಕೊನೆಯ ವಿಡಿಯೋ | Wajid Khan

  ಇದೀಗ ರಾಬರ್ಟ್ ಸಿನಿಮಾ ರೆಡಿಯಾಗಿದೆ, ಬಹುಷಃ ಮುಂದಿನ ತಿಂಗಳು ರಾಬರ್ಟ್ ತೆರೆಗೆ ಬರುವ ಸಾಧ್ಯತೆ ಇದೆ. ಈ ಮಧ್ಯೆ ದರ್ಶನ್ ಅಭಿಮಾನಿಗಳಿಗೆ ಮತ್ತೊಂದು ಸಿಹಿ ಸುದ್ದಿ ದೊರೆತಿದೆ.

  ದರ್ಶನ್ ಅವರ ಬಹು ನಿರೀಕ್ಷಿತ ಚಿತ್ರ, 'ವೀರ ಮದಕರಿ ನಾಯಕ' ಚಿತ್ರದ ಚಿತ್ರೀಕರಣ ಪುನಃ ಪ್ರಾರಂಭದ ದಿನಾಂಕ ಘೋಷಣೆ ಆಗಿದೆ. ಚಿತ್ರದ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಅವರೇ ಈ ಬಗ್ಗೆ ಅಧಿಕೃತ ಮಾಹಿತಿ ನೀಡಿದ್ದಾರೆ.

  ದರ್ಶನ್ ಅಭಿನಯದ ಎರಡನೇ ಐತಿಹಾಸಿಕ ಸಿನಿಮಾ 'ವೀರ ಮದಕರಿ ನಾಯಕ' ಚಿತ್ರೀಕರಣ ಲಾಕ್‌ಡೌನ್ ಕಾರಣಕ್ಕೆ ನಿಂತಿತ್ತು. ಅದೀಗ ಪುನಃ ಪ್ರಾರಂಭವಾಗುವುದಾಗಿ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಹೇಳಿದ್ದಾರೆ.

  ಆಗಸ್ಟ್‌ನಿಂದ ಚಿತ್ರೀಕರಣ ಪುನರ್‌ ಪ್ರಾರಂಭ

  ಆಗಸ್ಟ್‌ನಿಂದ ಚಿತ್ರೀಕರಣ ಪುನರ್‌ ಪ್ರಾರಂಭ

  ಆಗಸ್ಟ್‌ ನಿಂದ ವೀರ ಮದಕರಿ ನಾಯಕ ಸಿನಿಮಾದ ಚಿತ್ರೀಕರಣ ಪುನಃ ಪ್ರಾರಂಭವಾಗಲಿದೆಯಂತೆ. ಆದರೆ ಚಿತ್ರೀಕರಣ ನಡೆಯುವ ತಾಣಗಳಲ್ಲಿ ಕೆಲವು ಮುಖ್ಯ ಬದಲಾವಣೆಗಳನ್ನು ಚಿತ್ರತಂಡ ಮಾಡಿಕೊಂಡಿದೆ.

  ಕೇರಳದಲ್ಲಿ ಈಗಾಗಲೇ ಚಿತ್ರೀಕರಣ ಮುಗಿದಿದೆ

  ಕೇರಳದಲ್ಲಿ ಈಗಾಗಲೇ ಚಿತ್ರೀಕರಣ ಮುಗಿದಿದೆ

  ಈ ಮುಂಚೆ ರಾಜಸ್ಥಾನ, ಕೇರಳ ರಾಜ್ಯಗಳಲ್ಲಿಯೂ ಚಿತ್ರೀಕರಣ ನಡೆಸುವ ಬಗ್ಗೆ ಯೋಜನೆ ಹಾಕಿಕೊಂಡಿದ್ದರು. ಕೇರಳದಲ್ಲಿ ಮೊದಲ ಹಂತದ ಚಿತ್ರೀಕರಣ ಮುಗಿದಿದೆ. ಆದರೆ ಈಗ ಬದಲಾದ ಯೋಜನೆಯಲ್ಲಿ ಮೊದಲಿಗೆ ಚಿತ್ರದುರ್ಗ, ಬೆಂಗಳೂರುಗಳಲ್ಲಿ ಚಿತ್ರೀಕರಣ ಮಾಡಿ ನಂತರ ಬೇರೆ ರಾಜ್ಯಗಳಿಗೆ ಹೋಗುವ ಬಗ್ಗೆ ಆಲೋಚನೆ ಮಾಡಲಾಗುವುದು ಎಂದು ರಾಕ್‌ಲೈನ್ ಖಾಸಗಿ ವಾಹಿನಿಯೊಂದಕ್ಕೆ ತಿಳಿಸಿದ್ದಾರೆ.

  ಚಿತ್ರೀಕರಣ ಮಾಡುವುದು ದೊಡ್ಡ ಸವಾಲು

  ಚಿತ್ರೀಕರಣ ಮಾಡುವುದು ದೊಡ್ಡ ಸವಾಲು

  ಈ ಸಿನಿಮಾ ದೊಡ್ಡ ಬಜೆಟ್‌ನದ್ದಾಗಿದ್ದು, ಭಾರಿ ದೊಡ್ಡ ಸಂಖ್ಯೆಯಲ್ಲಿ ನಟರು, ಪೋಷಕ ನಟರು, ಸಹಾಯಕ ನಟರು ಅಗತ್ಯವಿದ್ದಾರೆ. ದೊಡ್ಡ ಸೆಟ್‌ನಲ್ಲಿ ಭಾರಿ ಸಂಖ್ಯೆಯ ನಟರೊಂದಿಗೆ ಚಿತ್ರೀಕರಣ ನಡೆಸುವ ಅನಿವಾರ್ಯತೆ ಇದೆ. ಹಾಗಾಗಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವುದು ಚಿತ್ರತಂಡಕ್ಕೆ ದೊಡ್ಡ ಸವಾಲಾಗಿದೆ.

  ಜನಸಂದಣಿ ಆಗದಂತೆ ಮುನ್ನೆಚ್ಚರಿಕೆ

  ಜನಸಂದಣಿ ಆಗದಂತೆ ಮುನ್ನೆಚ್ಚರಿಕೆ

  ಹೆಚ್ಚು ಜನಸಂದಣಿ ಆಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುತ್ತೇವೆ. ಹೆಚ್ಚು ಜನರಿಲ್ಲದೆ ಚಿತ್ರೀಕರಣ ನಡೆಸಲು ಅನುವಾಗುವಂತೆ ಚಿತ್ರೀಕರಣ ಪ್ಲ್ಯಾನ್‌ಗಳನ್ನು ಬದಲಾವಣೆ ಮಾಡಿಕೊಳ್ಳುತ್ತೇವೆ. ಜ್ಯೂನಿಯರ್ ಆರ್ಟಿಸ್ಟ್‌ಗಳು, ಸಾಹಸ ಕಲಾವಿದರು ಎಷ್ಟು ಮಂದಿ ಇರಬೇಕೆಂಬುದನ್ನು ಮೊದಲೇ ನಿರ್ಧರಿಸುತ್ತೇವೆ ಎಂದು ರಾಕ್‌ಲೈನ್ ಹೇಳಿದ್ದಾರೆ.

  ಎಲ್ಲಾ ನಿಯಮಗಳನ್ನು ಪಾಲಿಸುತ್ತೇವೆ: ರಾಕ್‌ಲೈನ್

  ಎಲ್ಲಾ ನಿಯಮಗಳನ್ನು ಪಾಲಿಸುತ್ತೇವೆ: ರಾಕ್‌ಲೈನ್

  ಇದರ ಜೊತೆಗೆ ಸ್ಯಾನಿಟೈಸರ್‌ ಸುರಂಗ, ಮಾಸ್ಕ್‌, ಗುಣಮಟ್ಟದ ಆಹಾರ, ಸಾಮಾಜಿಕ ಅಂತರ ದಂತಹಾ ಆರೋಗ್ಯ ನಿಯಮಗಳನ್ನು ಪಾಲಿಸುತ್ತೇವೆ. ಸರ್ಕಾರ, ಆರೋಗ್ಯ ಇಲಾಖೆಗಳು ವಿಧಿಸುವ ಎಲ್ಲಾ ನಿಯಮಗಳನ್ನು ಪಾಲಿಸಿಯೇ ಚಿತ್ರೀಕರಣ ಪ್ರಾರಂಭಿಸುತ್ತೇವೆ ಎಂದು ರಾಕ್‌ಲೈನ್ ಹೇಳಿದ್ದಾರೆ.

  English summary
  Actor Darshan's Veera Madakari Nayaka resuming filming in August said producer Rockline Venkatesh.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X