»   » ರಾಜ್ಯದ ವಿದ್ಯುತ್ ಸಮಸ್ಯೆಗೆ ಪರಿಹಾರ ನೀಡ್ತಾರಂತೆ, ದರ್ಶನ್

ರಾಜ್ಯದ ವಿದ್ಯುತ್ ಸಮಸ್ಯೆಗೆ ಪರಿಹಾರ ನೀಡ್ತಾರಂತೆ, ದರ್ಶನ್

Posted By:
Subscribe to Filmibeat Kannada

ಚಂದನವನದ ಬಾಕ್ಸಾಫೀಸ್ ಸುಲ್ತಾನ ದರ್ಶನ್ ಅಭಿನಯದ 'ವಿರಾಟ್' ಸಿನಿಮಾ ಮುಂದಿನ ವರ್ಷ 2016, ಫೆಬ್ರವರಿಯಲ್ಲಿ ಗ್ರ್ಯಾಂಡ್ ರಿಲೀಸ್ ಆಗಲಿದೆಯಂತೆ. 'ವಿರಾಟ್' ಸಿನಿಮಾ ಸುಮಾರು ಮೂರು ವರ್ಷಗಳ ಹಿಂದೆ ಸೆಟ್ಟೇರಿದ್ದು, ಇದೀಗ ಕೊನೆಗೂ ಟೀಸರ್ ಬಿಡುಗಡೆಯಾಗಿದೆ.

ಅಂದಹಾಗೆ 'ವಿರಾಟ್' ಚಿತ್ರದಲ್ಲಿ ವಿದ್ಯುತ್ ಸಮಸ್ಯೆಯ ಬಗ್ಗೆ ಒಂದು ಉತ್ತಮ ಸಂದೇಶ ಇದೆಯಂತೆ. 'ವಿದ್ಯುತ್ ಬಗ್ಗೆ ಒಂದಿಷ್ಟು ವಿಷಯಗಳನ್ನು ಹೇಳಿದ್ದೀವಿ. ವಿದ್ಯುತ್ತನ್ನು ಹೇಗೆ ಸಪ್ಲೈ ಮಾಡಬಹುದು ಎಂದು ಈ ಚಿತ್ರದ ಮೂಲಕ ಹೇಳೋಕೆ ಹೊರಟಿದ್ದೀವಿ.ಎಂದು ದರ್ಶನ್ ನುಡಿದಿದ್ದಾರೆ.[ಜಬರ್ದಸ್ತ್ ಟೀಸರ್ ನಲ್ಲಿ ದರ್ಶನ್ ನ, 'ವಿರಾಟ್' ದರ್ಶನ]

Darshan's 'Viraat' Movie is about Power Problems

'ಚಿತ್ರದ ಮೂಲಕ ನಾವೇನೋ ಈ ಸಮಸ್ಯೆಗೆ ಪರಿಹಾರ ಹೇಳುವ ಕೆಲಸ ಮಾಡಿದ್ದೇವೆ, ಇದನ್ನು ಸರ್ಕಾರ ಮುಂದೆ ನಿಂತು ಕಾರ್ಯರೂಪಕ್ಕೆ ತರಬೇಕು. ತಗೊಳ್ಳೋದು, ಬಿಡೋದು ಸರ್ಕಾರಕ್ಕೆ ಬಿಟ್ಟಿದ್ದು. ಆದರೆ ಒಂದಂತೂ ಸತ್ಯ, ಈ ಸಮಸ್ಯೆ ಇಷ್ಟು ಸುಲಭವಾಗಿ ಪರಿಹಾರ ಕಾಣುವಂತ ವಿಚಾರ ಅಲ್ಲ. ಸರ್ಕಾರಕ್ಕೂ ಇದು ಕಷ್ಟದ ಕೆಲಸ ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ತಿಳಿಸಿದ್ದಾರೆ.[ದರ್ಶನ್ 'ವಿರಾಟ್' ಚಿತ್ರಕ್ಕೆ ಕಡೆಗೂ ಕೂಡಿಬಂತು ಗಳಿಗೆ]

Darshan's 'Viraat' Movie is about Power Problems

ಇನ್ನು 'ವಿರಾಟ್' ಸಿನಿಮಾದ ಒಂದು ಹಾಡು ಮಾತ್ರ ಬಾಕಿ ಇರುವುದು ಬಿಟ್ಟರೆ, ಇನ್ನುಳಿದಂತೆ ಚಿತ್ರೀಕರಣ ಕಂಪ್ಲೀಟ್ ಆಗಿದೆಯಂತೆ. ಸುಮಾರು 10 ರಿಂದ 12 ದಿನಗಳ ಕೆಲಸ ಮುಗಿದರೆ ಫೆಬ್ರವರಿ ತಿಂಗಳಿನಲ್ಲಿ ಚಿತ್ರ ಬಿಡುಗಡೆ ಮಾಡಬಹುದು ಎಂದು ದರ್ಶನ್ ಮತ್ತು ಚಿತ್ರತಂಡದವರು ಹೇಳಿದ್ದಾರೆ.

English summary
Actor Darshan has said that his new film 'Virat' which is all set to release in February talks about the power problem in the state. 'Though the film was launched three years back, it is applicable to now also. The film tells the power problem and we have tried to give a solution to the problems' said Darshan.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada