For Quick Alerts
  ALLOW NOTIFICATIONS  
  For Daily Alerts

  ಅಬ್ಬಾ! ಕೊನೆಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆದ್ದೇ ಬಿಟ್ರು

  By Suneetha
  |

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು 'ವಿರಾಟ್' ಚಿತ್ರದ ನಿರ್ಮಾಪಕ ಕಲ್ಯಾಣ್ ಅವರು 'ವಿರಾಟ್' ಸಿನಿಮಾ ಬಿಡುಗಡೆ ಮಾಡುವ ವಿಷಯದಲ್ಲಿ ಜಿದ್ದಾ ಜಿದ್ದಿಗೆ ಬಿದ್ದಿದ್ದರು.

  ದರ್ಶನ್ ಅವರು ತಮ್ಮ 'ವಿರಾಟ್' ಸಿನಿಮಾವನ್ನು ಜನವರಿ 22 ಕ್ಕೆ ಬಿಡುಗಡೆ ಮಾಡೋದು ಬೇಡ ಅದು ಇನ್ನುಳಿದ ಚಿತ್ರತಂಡಕ್ಕೆ ತೊಂದರೆ ಆಗುತ್ತೆ ಅಂತ ಬಡ್ಕೊಂಡ್ರು ನಿರ್ಮಾಪಕ ಕಲ್ಯಾಣ್ ಅವರು ಸಿನಿಮಾ 22 ಕ್ಕೆ ರಿಲೀಸ್ ಆಗಬೇಕು ಅಂತ ಹಠ ತೊಟ್ಟಿದ್ದರು.[ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ 'ರಿಯಲ್ ಹೀರೋ' ಅನ್ನೋದು ಇದಕ್ಕೆ!]

  ಆದರೆ ಇದೀಗ ಇವರಿಬ್ಬರ ಗುದ್ದಾಟದಲ್ಲಿ ಕೊನೆಗೂ ಬಾಕ್ಸಾಫೀಸ್ ಸುಲ್ತಾನ ದರ್ಶನ್ ಅವರೇ ಗೆದ್ದಿದ್ದಾರೆ. ನಟ ದರ್ಶನ್ ಅವರ ಮಾತಿಗೆ ಬೆಲೆ ಕೊಟ್ಟಿರುವ ಪಕ್ಕದ ರಾಜ್ಯದ ನಿರ್ಮಾಪಕ ಕಲ್ಯಾಣ್ ಅವರು 'ವಿರಾಟ್' ಸಿನಿಮಾವನ್ನು ಜನವರಿ 29ಕ್ಕೆ ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆ.

  ಇನ್ನು ಜನವರಿ 29ಕ್ಕೆ ನರ್ತಕಿಯಲ್ಲಿ ದರ್ಶನ್ ಅವರ 'ವಿರಾಟ್' ಸಿನಿಮಾ ತೆರೆ ಕಾಣಲಿದೆ. ಇಲ್ಲಿಯವರೆಗೆ ನರ್ತಕಿ ಚಿತ್ರಮಂದಿರದಲ್ಲಿ ಶ್ರೀಮುರಳಿ ಅಭಿನಯದ 'ರಥಾವರ' ಸಿನಿಮಾ ಪ್ರದರ್ಶನ ಕಾಣುತ್ತಿದೆ. ಅಲ್ಲದೆ ಈ ವಾರಕ್ಕೆ 'ರಥಾವರ' ಭರ್ಜರಿ 50 ದಿನಗಳನ್ನು ಪೂರೈಸುತ್ತಿದೆ.[ಪುಟ್ಟ ಅಭಿಮಾನಿಯ ಸಂತಸವನ್ನು ಇಮ್ಮಡಿಗೊಳಿಸಿದ ದರ್ಶನ್]

  ಅಂತೂ ಇದೀಗ ದರ್ಶನ್ ಅವರೇ ಮೇಲುಗೈ ಸಾಧಿಸಿದ್ದು, ದರ್ಶನ್ ಅವರ ಮಾತಿನಂತೆ ಸಿನಿಮಾ ಜನವರಿ 29ಕ್ಕೆ ತೆರೆ ಕಾಣಲಿದೆ. ಅಲ್ಲಿಗೆ ದರ್ಶನ್ ಅವರು ಮತ್ತೊಮ್ಮೆ ತಾವು ಒಬ್ಬ ರಿಯಲ್ ಜಂಟಲ್ ಮ್ಯಾನ್ ಅನ್ನೋದನ್ನ ತೋರಿಸಿಕೊಟ್ಟಿದ್ದಾರೆ.

  ಈ ನಡುವೆ 'ವಿರಾಟ್' ಸಿನಿಮಾದ ಒಂದು ಹಾಡಿನ ಚಿತ್ರೀಕರಣ ನಡೆಯಲಿದ್ದು, ನಿರ್ದೇಶಕ ಹೆಚ್.ವಾಸು ಅವರು ಆದಷ್ಟು ಬೇಗ ಎಲ್ಲವನ್ನೂ ಮುಗಿಸಿ ಸಿನಿಮಾವನ್ನು ತೆರೆ ಮೇಲೆ ತರುವ ಆತುರದಲ್ಲಿದ್ದಾರೆ.

  English summary
  Challenging star Darshan's upcoming Kannada movie 'Viraat', which was originally slated to release on January 22nd, will now hit the screens worldwide on January 29th.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X