ನಟಿ ಅಮೂಲ್ಯಾಗೆ ಕ್ಯೂಟ್ ಆಗಿ ವಿಶ್ ಮಾಡಿದ ದರ್ಶನ್ ಪತ್ನಿ

ಮದುವೆ ನಂತರ ಸಿನಿಮಾ ರಂಗದಲ್ಲಿ ದೂರ ಉಳಿದು, ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ನಟಿ ಅಮೂಲ್ಯ ಅವರ ಹುಟ್ಟುಹಬ್ಬ ಇಂದು.

ಬಾಲನಟಿಯಾಗಿ ಸಿನಿಮಾ ರಂಗ ಪ್ರವೇಶಿಸಿದ ಅಮೂಲ್ಯ ಎರಡು ದಶಕಗಳ ಕಾಲ ಸಿನಿಮಾ ರಂಗದಕ್ಕೆ ನೆಲೆ ಊರಿದ್ದರು. ಕೆಲವು ಸೂಪರ್-ಡೂಪರ್ ಹಿಟ್ ಸಿನಿಮಾಗಳು ಅಮೂಲ್ಯ ಪಟ್ಟಿಯಲ್ಲಿವೆ.

ಸಿನಿಮಾರಂಗದಿಂದ ದೂರ ಉಳಿದಿದ್ದರೂ ಸಹ ಸಿನಿಮಾ ಗೆಳೆಯರೊಂದಿಗೆ ಅಂತರ ಕಾಯ್ದುಕೊಂಡಿಲ್ಲ ಅಮೂಲ್ಯ. ಸಾಕಷ್ಟು ಮಂದಿ ಗೆಳೆಯರನ್ನು ಸಿನಿಮಾರಂಗದಲ್ಲಿ ಹೊಂದಿರುವ ಅಮೂಲ್ಯಾ ಗೆ ಹಲವು ನಟ-ನಟಿಯರು ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ.

ಅಮೂಲ್ಯಾ ಗೆ ವಿಶ್ ಮಾಡಿದ ದರ್ಶನ್ ಪತ್ನಿ

ಅಮೂಲ್ಯಾ ಗೆ ವಿಶ್ ಮಾಡಿದ ದರ್ಶನ್ ಪತ್ನಿ

ಅಮೂಲ್ಯಾ ಬಾಲ್ಯ ನಟಿಯಾಗಿದ್ದಾಗಿನಿಂದಲೂ ಅವರ ಕುಟುಂಬ ದರ್ಶನ್ ಕುಟುಂಬಕ್ಕೆ ಆಪ್ತರು. ದರ್ಶನ್ ಅವರ ಆರಂಭಿಕ ಕೆಲ ಸಿನಿಮಾಗಳಲ್ಲಿ ಅಮೂಲ್ಯಾ ಬಾಲನಟಿಯಾಗಿ ನಟಿಸಿದ್ದಾರೆ. ಹಾಗಾಗಿ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮುದ್ದಾಗಿ ತಮ್ಮ ಮುದ್ದಿನ ಕಿರಿಯ ಗೆಳತಿಗೆ ವಿಶ್ ಮಾಡಿದ್ದಾರೆ. 'ಹುಟ್ಟುಹಬ್ಬದ ಶುಭಾಶಯಗಳು ಗೊಂಬೆ' ಎಂದು ವಿಶ್ ಮಾಡಿದ್ದಾರೆ ವಿಜಯಲಕ್ಷ್ಮಿ.

ನೆನಪಿರಲಿ ಪ್ರೇಮ್ ಸಹ ವಿಶ್ ಮಾಡಿದ್ದಾರೆ

ನೆನಪಿರಲಿ ಪ್ರೇಮ್ ಸಹ ವಿಶ್ ಮಾಡಿದ್ದಾರೆ

ನೆನಪಿರಲಿ ಪ್ರೇಮ್ ಸಹ ಅಮೂಲ್ಯ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. ಎಲ್ಲರೂ ಒಟ್ಟಿಗಿರುವ ಚಿತ್ರ ಹಂಚಿಕೊಂಡಿರುವ ಪ್ರೇಮ್, 'ಹುಟ್ಟುಹಬ್ಬದ ಶುಭಾಶಯಗಳು ಅಮ್ಮು' ಎಂದಿದ್ದಾರೆ.

ಅಭಿಮಾನಿಗಳಿಗೆ ಅಮೂಲ್ಯಾ ಮನವಿ

ಅಭಿಮಾನಿಗಳಿಗೆ ಅಮೂಲ್ಯಾ ಮನವಿ

ಹುಟ್ಟುಹಬ್ಬದ ಒಂದು ದಿನ ಮುನ್ನವೇ ಅಭಿಮಾನಿಗಳಿಗೆ ಮನವಿ ಮಾಡಿದ್ದ ಅಮೂಲ್ಯಾ, 'ಪ್ರತಿವರ್ಷ ದೂರದೂರುಗಳಿಂದ ಬಂದು ನನ್ನನ್ನು ನೀವು ಹರಸುತ್ತೀರಾ,ಶುಭಾಶಯಗಳನ್ನು ತಿಳಿಸುತ್ತೀರಾ. ನಿಮ್ಮ ಪ್ರೀತಿ,ಅಭಿಮಾನವನ್ನು ಕಂಡು ನಾನು ಮೂಕವಿಸ್ಮಿತಳಾಗಿದ್ದೇನೆ. ಆದರೆ ಈ ಬಾರಿ ಕಾರಣಾಂತರಗಳಿಂದ ನಾನು ಮನೆಯಲ್ಲಿ ಇರುವುದಿಲ್ಲ.ಹೀಗಾಗಿ ನೀವಿರುವ ಸ್ಥಳದಿಂದಲೇ ನನಗೆ ಶುಭ ಹಾರೈಸಿ ಎಂಬ ಕೋರಿಕೆ ನನ್ನದು' ಎಂದಿದ್ದರು.

Recommended Video

DIRECTORS DIARY : ನಾನು ಇಡ್ಲಿ ನೋಡಿದ್ದೇ ಬೆಂಗಳೂರಿಗೆ ಬಂದ್ಮೇಲೆ | R Chandru | Filmibeat Kannada
ಸಿನಿಮಾಗಳಿಂದ ದೂರ ಉಳಿದಿರುವ ಅಮೂಲ್ಯಾ

ಸಿನಿಮಾಗಳಿಂದ ದೂರ ಉಳಿದಿರುವ ಅಮೂಲ್ಯಾ

ಅಮೂಲ್ಯ ಅವರು ಜಗದೀಶ್ ಆರ್ ಚಂದ್ರ ಅವರೊಟ್ಟಿಗೆ ವಿವಾಹವಾದ ನಂತರ ಸಿನಿಮಾಗಳಿಂದ ದೂರ ಉಳಿದಿದ್ದಾರೆ. ಪ್ರಸ್ತುತ ಪತಿಯೊಂದಿಗೆ ಸಾಮಾಜಿಕ ಕಾರ್ಯಗಳಲ್ಲಿ ಅಮೂಲ್ಯಾ ತೊಡಗಿಸಿಕೊಂಡಿದ್ದಾರೆ.

More from Filmibeat

English summary
Darshan's wife Vijayalakshmi wishes actress Amulya on her birthday. VIjayalakshmi called Amulya 'Gombe'.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X