For Quick Alerts
  ALLOW NOTIFICATIONS  
  For Daily Alerts

  ನಟಿ ಅಮೂಲ್ಯಾಗೆ ಕ್ಯೂಟ್ ಆಗಿ ವಿಶ್ ಮಾಡಿದ ದರ್ಶನ್ ಪತ್ನಿ

  |

  ಮದುವೆ ನಂತರ ಸಿನಿಮಾ ರಂಗದಲ್ಲಿ ದೂರ ಉಳಿದು, ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ನಟಿ ಅಮೂಲ್ಯ ಅವರ ಹುಟ್ಟುಹಬ್ಬ ಇಂದು.

  ಬಾಲನಟಿಯಾಗಿ ಸಿನಿಮಾ ರಂಗ ಪ್ರವೇಶಿಸಿದ ಅಮೂಲ್ಯ ಎರಡು ದಶಕಗಳ ಕಾಲ ಸಿನಿಮಾ ರಂಗದಕ್ಕೆ ನೆಲೆ ಊರಿದ್ದರು. ಕೆಲವು ಸೂಪರ್-ಡೂಪರ್ ಹಿಟ್ ಸಿನಿಮಾಗಳು ಅಮೂಲ್ಯ ಪಟ್ಟಿಯಲ್ಲಿವೆ.

  ವಿಶಿಷ್ಟವಾಗಿ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡ ಅಮೂಲ್ಯ ದಂಪತಿ, ಇತರರಿಗೆ ಮಾದರಿವಿಶಿಷ್ಟವಾಗಿ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡ ಅಮೂಲ್ಯ ದಂಪತಿ, ಇತರರಿಗೆ ಮಾದರಿ

  ಸಿನಿಮಾರಂಗದಿಂದ ದೂರ ಉಳಿದಿದ್ದರೂ ಸಹ ಸಿನಿಮಾ ಗೆಳೆಯರೊಂದಿಗೆ ಅಂತರ ಕಾಯ್ದುಕೊಂಡಿಲ್ಲ ಅಮೂಲ್ಯ. ಸಾಕಷ್ಟು ಮಂದಿ ಗೆಳೆಯರನ್ನು ಸಿನಿಮಾರಂಗದಲ್ಲಿ ಹೊಂದಿರುವ ಅಮೂಲ್ಯಾ ಗೆ ಹಲವು ನಟ-ನಟಿಯರು ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ.

  ಅಮೂಲ್ಯಾ ಗೆ ವಿಶ್ ಮಾಡಿದ ದರ್ಶನ್ ಪತ್ನಿ

  ಅಮೂಲ್ಯಾ ಗೆ ವಿಶ್ ಮಾಡಿದ ದರ್ಶನ್ ಪತ್ನಿ

  ಅಮೂಲ್ಯಾ ಬಾಲ್ಯ ನಟಿಯಾಗಿದ್ದಾಗಿನಿಂದಲೂ ಅವರ ಕುಟುಂಬ ದರ್ಶನ್ ಕುಟುಂಬಕ್ಕೆ ಆಪ್ತರು. ದರ್ಶನ್ ಅವರ ಆರಂಭಿಕ ಕೆಲ ಸಿನಿಮಾಗಳಲ್ಲಿ ಅಮೂಲ್ಯಾ ಬಾಲನಟಿಯಾಗಿ ನಟಿಸಿದ್ದಾರೆ. ಹಾಗಾಗಿ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮುದ್ದಾಗಿ ತಮ್ಮ ಮುದ್ದಿನ ಕಿರಿಯ ಗೆಳತಿಗೆ ವಿಶ್ ಮಾಡಿದ್ದಾರೆ. 'ಹುಟ್ಟುಹಬ್ಬದ ಶುಭಾಶಯಗಳು ಗೊಂಬೆ' ಎಂದು ವಿಶ್ ಮಾಡಿದ್ದಾರೆ ವಿಜಯಲಕ್ಷ್ಮಿ.

  ನೆನಪಿರಲಿ ಪ್ರೇಮ್ ಸಹ ವಿಶ್ ಮಾಡಿದ್ದಾರೆ

  ನೆನಪಿರಲಿ ಪ್ರೇಮ್ ಸಹ ವಿಶ್ ಮಾಡಿದ್ದಾರೆ

  ನೆನಪಿರಲಿ ಪ್ರೇಮ್ ಸಹ ಅಮೂಲ್ಯ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. ಎಲ್ಲರೂ ಒಟ್ಟಿಗಿರುವ ಚಿತ್ರ ಹಂಚಿಕೊಂಡಿರುವ ಪ್ರೇಮ್, 'ಹುಟ್ಟುಹಬ್ಬದ ಶುಭಾಶಯಗಳು ಅಮ್ಮು' ಎಂದಿದ್ದಾರೆ.

  ಕೊರೊನಾ ಸಮಯದಲ್ಲಿ ಮೆಚ್ಚುಗೆ ಪಡೆದ ಅಮೂಲ್ಯ ದಂಪತಿ ಸಮಾಜಸೇವೆಕೊರೊನಾ ಸಮಯದಲ್ಲಿ ಮೆಚ್ಚುಗೆ ಪಡೆದ ಅಮೂಲ್ಯ ದಂಪತಿ ಸಮಾಜಸೇವೆ

  ಅಭಿಮಾನಿಗಳಿಗೆ ಅಮೂಲ್ಯಾ ಮನವಿ

  ಅಭಿಮಾನಿಗಳಿಗೆ ಅಮೂಲ್ಯಾ ಮನವಿ

  ಹುಟ್ಟುಹಬ್ಬದ ಒಂದು ದಿನ ಮುನ್ನವೇ ಅಭಿಮಾನಿಗಳಿಗೆ ಮನವಿ ಮಾಡಿದ್ದ ಅಮೂಲ್ಯಾ, 'ಪ್ರತಿವರ್ಷ ದೂರದೂರುಗಳಿಂದ ಬಂದು ನನ್ನನ್ನು ನೀವು ಹರಸುತ್ತೀರಾ,ಶುಭಾಶಯಗಳನ್ನು ತಿಳಿಸುತ್ತೀರಾ. ನಿಮ್ಮ ಪ್ರೀತಿ,ಅಭಿಮಾನವನ್ನು ಕಂಡು ನಾನು ಮೂಕವಿಸ್ಮಿತಳಾಗಿದ್ದೇನೆ. ಆದರೆ ಈ ಬಾರಿ ಕಾರಣಾಂತರಗಳಿಂದ ನಾನು ಮನೆಯಲ್ಲಿ ಇರುವುದಿಲ್ಲ.ಹೀಗಾಗಿ ನೀವಿರುವ ಸ್ಥಳದಿಂದಲೇ ನನಗೆ ಶುಭ ಹಾರೈಸಿ ಎಂಬ ಕೋರಿಕೆ ನನ್ನದು' ಎಂದಿದ್ದರು.

  DIRECTORS DIARY : ನಾನು ಇಡ್ಲಿ ನೋಡಿದ್ದೇ ಬೆಂಗಳೂರಿಗೆ ಬಂದ್ಮೇಲೆ | R Chandru | Filmibeat Kannada
  ಸಿನಿಮಾಗಳಿಂದ ದೂರ ಉಳಿದಿರುವ ಅಮೂಲ್ಯಾ

  ಸಿನಿಮಾಗಳಿಂದ ದೂರ ಉಳಿದಿರುವ ಅಮೂಲ್ಯಾ

  ಅಮೂಲ್ಯ ಅವರು ಜಗದೀಶ್ ಆರ್ ಚಂದ್ರ ಅವರೊಟ್ಟಿಗೆ ವಿವಾಹವಾದ ನಂತರ ಸಿನಿಮಾಗಳಿಂದ ದೂರ ಉಳಿದಿದ್ದಾರೆ. ಪ್ರಸ್ತುತ ಪತಿಯೊಂದಿಗೆ ಸಾಮಾಜಿಕ ಕಾರ್ಯಗಳಲ್ಲಿ ಅಮೂಲ್ಯಾ ತೊಡಗಿಸಿಕೊಂಡಿದ್ದಾರೆ.

  ಚಿತ್ರಗಳು: ಅಮೂಲ್ಯ ಪತಿ ಜಗದೀಶ್ ಬರ್ತಡೇ ಪಾರ್ಟಿಯಲ್ಲಿ ಸ್ಯಾಂಡಲ್ ವುಡ್ ಸ್ಟಾರ್ಸ್.!ಚಿತ್ರಗಳು: ಅಮೂಲ್ಯ ಪತಿ ಜಗದೀಶ್ ಬರ್ತಡೇ ಪಾರ್ಟಿಯಲ್ಲಿ ಸ್ಯಾಂಡಲ್ ವುಡ್ ಸ್ಟಾರ್ಸ್.!

  English summary
  Darshan's wife Vijayalakshmi wishes actress Amulya on her birthday. VIjayalakshmi called Amulya 'Gombe'.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X