For Quick Alerts
  ALLOW NOTIFICATIONS  
  For Daily Alerts

  ಚಿಕ್ಕಮಗಳೂರಿನಲ್ಲಿ ಡಿ ಬಾಸ್; ಮುತ್ತೋಡಿ ಅರಣ್ಯದಲ್ಲಿ ದರ್ಶನ್ ಸಫಾರಿ

  |

  ಚಾಲೆಂಜಿಂಗ್ ಸ್ಟಾರ್ ದರ್ಶನ್ ರಾಬರ್ಟ್ ಸಿನಿಮಾದ ಸೂಪರ್ ಸಕ್ಸಸ್ ಬಳಿಕ ಯಾವುದೇ ಸಿನಿಮಾವನ್ನು ಅನೌನ್ಸ್ ಮಾಡಿಲ್ಲ. ಡಿ ಬಾಸ್ ಮುಂದಿನ ಸಿನಿಮಾ ಯಾವುದು ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮನೆ ಮಾಡಿದೆ. ಯಾವುದರ ಬಗ್ಗೆಯೂ ಸುಳಿವು ಬಿಟ್ಟುಕೊಡದ ಚಾಲೆಂಜಿಂಗ್ ಸ್ಟಾರ್ ಸಫಾರಿ ಎಂಜಾಯ್ ಮಾಡುತ್ತಿದ್ದಾರೆ.

  ಚಿಕ್ಕಮಗಳೂರಿನ ಮುತ್ತೋಡಿ ಅರಣ್ಯದಲ್ಲಿ ದರ್ಶನ್ ಸಫಾರಿ | Filmibeat Kannada

  ಇತ್ತೀಚಿಗೆ ಚಿಕ್ಕಮಗಳೂರು ಕಡೆ ಪ್ರವಾಸ ಬೆಳೆಸಿದ್ದ ದರ್ಶನ್ ಮುತ್ತೋಡಿ ಅರಣ್ಯಕ್ಕೆ ಭೇಟಿ ನೀಡಿದ್ದರು. ಇದೇ ಅರಣ್ಯ ವಲಯದಲ್ಲಿ ತಂಗಿದ್ದ ದರ್ಶನ್ ಸಫಾರಿ ಮಾಡಿದ್ದಾರೆ. ಕರ್ನಾಟಕ ಅರಣ್ಯ ಇಲಾಖೆಯ ರಾಯಭಾರಿಯೂ ಆಗಿದ್ದಾರೆ.

  ಸ್ನೇಹಿತರ ಜೊತೆ ಚಿಕ್ಕಮಗಳೂರಿಗೆ ಬಂದಿದ್ದ ದರ್ಶನ್, ಸಿಗೇಖಾನ್ ಅರಣ್ಯ ವಿಶ್ರಾಂತಿ ಧಾಮದಲ್ಲಿ ಮಾಸ್ತವ್ಯ ಹೂಡಿದ್ದರು. ಮುತ್ತೋಡಿ ಅರಣ್ಯ ಸೌಂದರ್ಯವನ್ನು ದರ್ಶನ್ ಸವಿದಿದ್ದಾರೆ. ಅರಣ್ಯ ವಲಯದಲ್ಲಿ ಸಫಾರಿ ಮಾಡಿ ಎಂಜಾಯ್ ಮಾಡಿದ್ದಾರೆ.

  ರಾಜ್‌ಕುಮಾರ್ ಪುಣ್ಯಸ್ಮರಣೆ: ಅಣ್ಣಾವ್ರನ್ನು ದರ್ಶನ್ ಸ್ಮರಿಸಿದ್ದು ಹೀಗೆರಾಜ್‌ಕುಮಾರ್ ಪುಣ್ಯಸ್ಮರಣೆ: ಅಣ್ಣಾವ್ರನ್ನು ದರ್ಶನ್ ಸ್ಮರಿಸಿದ್ದು ಹೀಗೆ

  ಮುತ್ತೋಡಿ ಅರಣ್ಯ ವಲಯಕ್ಕೆ ಭೇಟಿ ನೀಡುತ್ತಿದ್ದಂತೆ ದರ್ಶನ್ ಗೆ ಅದ್ದೂರಿ ಸ್ವಾಗತ ಕೋರಿದ್ದಾರೆ. ಅರಣ್ಯಾಧಿಕಾರಿ ಲೋಕೇಶ್ ಹೂಗುಚ್ಛ ನೀಡಿ ಸ್ವಾಗತಿಸಿದ್ದಾರೆ. ಇದೇ ವೇಳೆ, ನೆಚ್ಚಿನ ನಟನನ್ನು ನೋಡಿ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಅರಣ್ಯ ಅಧಿಕಾರಿಗಳು ಮತ್ತು ಸಿಬ್ಬಂದಿ ಚಾಲೆಂಜಿಂಗ್ ಸ್ಟಾರ್ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂತಸಪಟ್ಟಿದ್ದಾರೆ.

  ಇನ್ನೇನು ಶೂಟಿಂಗ್ ಪ್ರಾರಂಭ ಮಾಡಬೇಕು ಎನ್ನುವಷ್ಟೊತ್ತಿಗೆ ಮತ್ತೆ ಕೊರೊನಾ ಹಾವಳಿ ಜಾಸ್ತಿ ಆಗಿದೆ. ಹಾಗಾಗಿ ಚಿತ್ರೀಕರಣ ಮತ್ತಷ್ಟು ದಿನಗಳು ತಡವಾಗುವ ಸಾಧ್ಯತೆ ಇದೆ. ಹಾಗಾಗಿ ದರ್ಶನ್ ಮುಂದಿನ ಸಿನಿಮಾದ ಮೇಲೆ ನಿರೀಕ್ಷೆ ಮತ್ತು ಕುತೂಹಲ ಮತ್ತಷ್ಟು ಹೆಚ್ಚಾಗಿದೆ.

  ದರ್ಶನ್ ಗೋಲ್ಡ್ ರಿಂಗ್ ಎನ್ನುವ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎನ್ನುವ ಸುದ್ದಿ ಕೇಳಿಬರುತ್ತಿದೆ. ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಬಂಡವಾಳ ಹೂಡುತ್ತಿದ್ದಾರೆ. ಮದಕರಿ ನಾಯಕ ಸಿನಿಮಾಗೂ ಮೊದಲು ದರ್ಶನ್, ರಾಕ್ ಲೈನ್ ವೆಂಕಟೇಶ್ ನಿರ್ಮಾಣದ ಹೊಸ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುವ ಸುದ್ದಿ ಅನೇಕ ದಿನಗಳಿಂದ ಕೇಳಿಬರುತ್ತಿದೆ. ಸದ್ಯದಲ್ಲೇ ಸಿನಿಮಾದ ಬಗ್ಗೆ ಅಧಿಕೃತ ಮಾಹಿತಿ ಹೊರಬೀಳಬಹುದು ಎನ್ನುವ ಕುತೂಹಲದಿಂದ ಅಭಿಮಾನಿಗಳು ಕಾಯುತ್ತಿದ್ದಾರೆ.

  English summary
  Challenging Star Darshan safari in Muthodi forest at chikmagalur.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X