For Quick Alerts
  ALLOW NOTIFICATIONS  
  For Daily Alerts

  ಹೋಟೆಲ್ ಸೆಕ್ಯೂರಿಟಿಗೆ ಗೌರವ ನೀಡಿದ ದಾಸನ ದೊಡ್ಡತನಕ್ಕೆ ಮೆಚ್ಚುಗೆ

  By Naveen
  |
  ಹೋಟೆಲ್ ಸೆಕ್ಯೂರಿಟಿಗೆ ದರ್ಶನ್ ಮಾಡಿದ್ದೇನು ನೋಡಿ..! | FIlmibeat Kannada

  ನಟ ದರ್ಶನ್ ಅಭಿಮಾನಿಗಳಿಗೆ ಬಹಳ ವಿಚಾರಗಳಿಗೆ ಇಷ್ಟ ಆಗುತ್ತಾರೆ. ಅವರಲ್ಲಿ ಅವರ ಸರಳತೆ ಕೂಡ ಒಂದು. ಡಿ ಬಾಸ್ ಸರಳತೆ ಎಂತಹುದು ಎಂಬುದಕ್ಕೆ ನಿನ್ನೆ ನಡೆದ ಒಂದು ಫಟನೆ ಸಾಕ್ಷಿಯಾಗಿದೆ.

  ನಿನ್ನೆ ಮೈಸೂರಿನ ಹೋಟೆಲ್ ನಲ್ಲಿ ಇದ್ದ ನಟ ದರ್ಶನ್ ಅಲ್ಲಿಂದ ಹೊರ ಬರುವಾಗ ಬಾಗಿಲ ಬಳಿ ನಿಂತಿದ್ದ ಹೋಟೆಲ್ ಸೆಕ್ಯೂರಿಟಿಗೆ ಸೆಲ್ಯೂಟ್ ಹೊಡೆದಿದ್ದಾರೆ. ಎಲ್ಲರಿಗೂ ಸೆಲ್ಯೂಟ್ ಹೊಡೆಯುವ ರೀತಿ ದರ್ಶನ್ ಗೆ ಸಹ ಅವರು ಸೆಲ್ಯೂಟ್ ಮಾಡಿದ್ದಾರೆ. ತಕ್ಷಣ ದರ್ಶನ್ ಕೂಡ ಪ್ರತಿಯಾಗಿ ಆ ಸೆಕ್ಯೂರಿಟಿಗೆ ಸೆಲ್ಯೂಟ್ ಹೊಡೆದು ಗೌರವ ನೀಡಿದ್ದಾರೆ. ದರ್ಶನ್ ಅವರ ಈ ಪ್ರತಿಕ್ರಿಯೆ ಆ ಸೆಕ್ಯೂರಿಟಿ ಮುಖದಲ್ಲಿ ನುಗು ಮೂಡಿಸಿದೆ.

  'ಡಿ ಬಾಸ್' ಹಾದಿಯಲ್ಲಿ ಹೆಜ್ಜೆ ಇಟ್ಟ ಅಭಿಮಾನಿಗಳು 'ಡಿ ಬಾಸ್' ಹಾದಿಯಲ್ಲಿ ಹೆಜ್ಜೆ ಇಟ್ಟ ಅಭಿಮಾನಿಗಳು

  ದರ್ಶನ್ ಸೆಲ್ಯೂಟ್ ಮಾಡಿದ ಫೋಟೋ ಅವರ ಅಭಿಮಾನಿಗಳು ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ''ದೊಡ್ಡ ವ್ಯಕ್ತಿಯಾಗುವುದು ಮಾತ್ರವಲ್ಲ ಯಾರ ಮುಂದೆ ತಲೆ ಬಾಗಿಸಿ ಯಾರಿಗೆ ಗೌರವಿಸಬೇಕೆಂದು ಗೊತ್ತಿರುವವರು ಮಾತ್ರ ದೊಡ್ಡ ವ್ಯಕ್ತಿಯಾಗಲು ಸಾಧ್ಯ'' ಎಂದು ಅಭಿಮಾನಿಗಳು ದರ್ಶನ್ ರನ್ನು ಹೊಗಳುತ್ತಿದ್ದಾರೆ.

  ಸದ್ಯ ದರ್ಶನ್ 'ಕುರುಕ್ಷೇತ್ರ' ಸಿನಿಮಾದಲ್ಲಿ ಬಿಜಿ ಇದ್ದಾರೆ. ಈ ಸಿನಿಮಾದ ಡಬ್ಬಿಂಗ್ ಕೆಲಸ ಹಾಗೂ 'ಯಜಮಾನ' ಸಿನಿಮಾದ ಶೂಟಿಂಗ್ ನಲ್ಲಿ ಅವರು ತೊಡಗಿದ್ದಾರೆ.

  ಚಿತ್ರಕೃಪೆ : ತೂಗುದೀಪ ಗ್ರೂಪ್ಸ್

  English summary
  In pics : Kannada actor Darshan salutes hotel security in Mysore Yesterday (June 12th)

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X