ದರ್ಶನ್ 'ಸಂಗೊಳ್ಳಿ ರಾಯಣ್ಣ' ಕಾದಿದ್ದವರಿಗೆ ನಿರಾಸೆ

<ul id="pagination-digg"><li class="next"><a href="/news/darshan-sangolli-rayanna-salman-khan-ek-tha-tiger-067391.html">Next »</a></li></ul>

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಸಂಗೊಳ್ಳಿ ರಾಯಣ್ಣ' ಚಿತ್ರ ಮೊನ್ನೆ ಆಗಸ್ಟ್ 15 ಕ್ಕೆ (15 ಆಗಸ್ಟ್ 2012) ಬಿಡುಗಡೆಯಾಗಬೇಕಿತ್ತು. ಆದರೆ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸ ಮುಗಿಯದೇ ಚಿತ್ರವನ್ನು ತೆರೆಗೆ ತರುವುದು ಹೇಗೆ? ಐತಿಹಾಸಿಕ ಕಥೆ ಆಧಾರಿತ ಚಿತ್ರವಾದ್ದರಿಂದ ಗಡಿಬಿಡಿಯಲ್ಲಿ ಏನಾದರೊಂದು ಮಾಡಿ ತೆರೆಯ ಮೇಲೆ ಪ್ರದರ್ಶಿಸುವಂತಿಲ್ಲ. ಕಾರಣ, 'ಸಂಗೊಳ್ಳಿ ರಾಯಣ್ಣ' ಚಿತ್ರವು ಒಬ್ಬ ಸ್ವಾತಂತ್ರ್ಯ ಯೋಧರ ಕಥೆಯಾಧಾರಿತ ಚಿತ್ರ.

ಆಗಸ್ಟ್ 15ಕ್ಕೇ ಈ ಚಿತ್ರವನ್ನು ಬಿಡುಗಡೆ ಮಾಡಬೇಕೆಂಬುದು ನಿರ್ಮಾಪಕ ಆನಂದ್ ಅಪ್ಪುಗೋಳ್ ಅವರ ಅಭಿಲಾಷೆಯೂ ಆಗಿತ್ತು. ಹೇಳಿಕೇಳಿ ಆಗಸ್ಟ್ 15, ಸಂಗೊಳ್ಳಿ ರಾಯಣ್ಣ ನವರ ಜನ್ಮದಿನ. ಅದೇ ದಿನ ಆ ಚಿತ್ರವನ್ನು ಬಿಡುಗಡೆ ಮಾಡಿದರೆ ಅದಕ್ಕೊಂದು ವಿಶೇಷ ಅರ್ಥವೂ ಸಿಗಲಿದೆ ಎಂಬುದು ಇಡೀ ಚಿತ್ರತಂಡದ ಆಸೆಯಾಗಿತ್ತು. ಕೊನೇಪಕ್ಷ ಆಡಿಯೋ ಬಿಡುಗಡೆಯನ್ನಾದರೂ ಮಾಡೋಣ ಎಂದುಕೊಂಡರೆ ಅದೂ ಸಾಧ್ಯವಾಗಲಿಲ್ಲ.

'ಸಂಗೊಳ್ಳಿ ರಾಯಣ್ಣ' ಆಡಿಯೋ ಹಕ್ಕುಗಳನ್ನು ಅಶ್ವಿನಿ ಆಡಿಯೋ ಪಡೆದಿದೆ. ಪ್ರಸಾದ್ ವೆಂಚರ್ಸ್ ನ ಪ್ರಸಾದ್ ಈ ಅಶ್ವಿನಿ ಆಡಿಯೋ ಕಂಪನಿಯನ್ನು ಖರೀದಿಸಿದ್ದು ಗೊತ್ತೇ ಇದೆ. ಆಡಿಯೋ ಬಿಡುಗಡೆಗೆ ಪ್ರಸಾದ್ ಕಡೆಯಿಂದ ಗ್ರೀನ್ ಸಿಗ್ನಲ್ ಬರಲಿಲ್ಲವಾಗಿ, ಅದೂ ಸಾಧ್ಯವಾಗದೇ ಚಿತ್ರತಂಡ ಹಾಗೂ ದರ್ಶನ್ ಅಭಿಮಾನಿಗಳು ನಿರಾಸೆ ಅನುಭವಿಸಿದ್ದಾರೆ.

'ಚಿಂಗಾರಿ' ನಂತರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಯಾವ ಚಿತ್ರವೂ ಬಿಡುಗಡೆಯಾಗಿಲ್ಲವಾಗಿ ಅವರ ಅಭಿಮಾನಿಗಳು ಕಾಯುತ್ತಿದ್ದಾರೆ. ದರ್ಶನ್ ನಟನೆಯ 'ಸಂಗೊಳ್ಳಿ ರಾಯಣ್ಣ' ಚಿತ್ರವೇನೋ ಬಿಡುಗಡೆಗೆ ಸಿದ್ಧವಾಗಿದೆ. ಆದರೆ ದಿನಾಂಕವಿನ್ನೂ ಪಕ್ಕಾ ಆಗಿಲ್ಲ. 'ಚಿಂಗಾರಿ' ಹಾಕಿದ ದುಡ್ಡು ಬಾಚಿಕೊಂಡರೂ 'ಸಾರಥಿ' ಚಿತ್ರಕ್ಕೆ ಸರಿಸಮಾನ ಹಿಟ್ ದಾಖಲಿಸಿಲ್ಲ. ಹೀಗಾಗಿ ದರ್ಶನ್ ಅಭಿಮಾನಿಗಳು 'ಸಂಗೊಳ್ಳಿ ರಾಯಣ್ಣ' ಚಿತ್ರದ ಬಗ್ಗೆ ಭಾರಿ ನಿರೀಕ್ಷೆ ಹೊಂದಿದ್ದಾರೆ.

ಸಮಾಧಾನದ ಸಂಗತಿಯೆಂದರೆ ಮೊನ್ನೆ ದರ್ಶನ್ ಹಾಗೂ ಜಗ್ಗೇಶ್ ಸಂಗಮದ ಹೊಸ ಚಿತ್ರ 'ಅಗ್ರಜ'ಕ್ಕೆ ಮುಹೂರ್ತ ನೆರವೇರಿದೆ. ಈ ಚಿತ್ರದಲ್ಲಿ ದರ್ಶನ್ ಮತ್ತು ಜಗ್ಗೇಶ್ ತಾವು ಈ ಮೊದಲು ಮಾಡಿರುವ ಪಾತ್ರಗಳಿಗೆ ತದ್ವಿರುದ್ಧವಾದ ಪಾತ್ರಗಳನ್ನು ಪೋಷಿಸಲಿದ್ದಾರೆ. "ಚಿತ್ರದಲ್ಲಿ ಆಕ್ಷನ್ ಹಾಗೂ ಕಾಮಿಡಿ ಮಿಶ್ರಣವಿದ್ದು ಪ್ರೇಕ್ಷಕರಿಗೆ ಎಲ್ಲೂ ಬೋರ್ ಆಗದಂತೆ ಚಿತ್ರಕಥೆ ಹಾಗೂ ನಿರೂಪಣೆ ಮಾಡಲಾಗುವುದು" ಎಂದಿದ್ದಾರೆ ನಿರ್ದೇಶಕ ಶ್ರೀನಂದನ್. ಮುಂದಿನ ಪುಟ ನೋಡಿ...

<ul id="pagination-digg"><li class="next"><a href="/news/darshan-sangolli-rayanna-salman-khan-ek-tha-tiger-067391.html">Next »</a></li></ul>

More from Filmibeat

English summary
Challenging Star Darshan upcoming movie 'Sangolli Rayanna' had to come on 15th August 2012. but, its post production work not completed yet. So the movie couldn't release as the team wish. If this movie could release, it would be the competitor for released Salman Khan's movie Ek Tha Tiger. &#13; &#13;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X