ದರ್ಶನ್ 'ಸಂಗೊಳ್ಳಿ ರಾಯಣ್ಣ' ಟ್ರೇಲರ್ ನೋಡಿ!

<ul id="pagination-digg"><li class="previous"><a href="/news/darshan-sangolli-rayanna-release-19th-october-2012-068892.html">« Previous</a>

'ಸಂಗೊಳ್ಳಿ ರಾಯಣ್ಣ' ಚಿತ್ರವನ್ನು ಕರ್ನಾಟಕದಲ್ಲಿ ಮಾತ್ರವಲ್ಲದೇ, ಮುಂಬೈ, ಪುಣೆ, ಗೋವಾಗಳಲ್ಲಿಯೂ ಬಿಡುಗಡೆ ಮಾಡಲಾಗುವುದು ಎಂದಿದ್ದಾರೆ ನಿರ್ಮಾಪಕ ಅಪ್ಟಪುಗೋಳ್. ಇನ್ನು ಅವರ ಗೆಳೆಯರು ಇದನ್ನು ಬ್ರಿಟನ್, ಅಮೆರಿಕಾ ಹಾಗೂ ಆಸ್ಟ್ರೇಲಿಯಾಗಳಲ್ಲೂ ಕೂಡ ಬಿಡುಗಡೆ ಮಾಡಲಿದ್ದಾರಂತೆ. ಆದರೆ ಎಲ್ಲೆಲ್ಲಿ ಎಷ್ಟೆಷ್ಟು ಚಿತ್ರಮಂದಿರಗಳಲ್ಲಿ ಬಿಡುಗಡೆ ಎಂಬ ಮಾಹಿತಿ ಸದ್ಯಕ್ಕಿಲ್ಲ. ಅಂದಹಾಗೆ, 3 ನಿಮಿಷಗಳ 'ಸಂಗೊಳ್ಳಿ ರಾಯಣ್ಣ ಟ್ರೇಲರ್' ಬಿಡುಗಡೆಯಾಗಿದೆ.

'ಸಂಗೊಳ್ಳಿ ರಾಯಣ್ಣ' ಚಿತ್ರದ ಟ್ರೇಲರ್ ನಲ್ಲಿ ಸುದೀಪ್ ಧ್ವನಿಯಿದೆ. ಅಂದರೆ, ಸಂಗೊಳ್ಳಿ ರಾಯಣ್ಣ ಎಂಬ ವ್ಯಕ್ತಿಯ ಬಗ್ಗೆ, ಇತಿಹಾಸದ ಬಗ್ಗೆ ಹಾಗೂ ಈ ಚಿತ್ರದಲ್ಲಿ ಏನಿದೆ ಎಂಬ ಬಗ್ಗೆ ಈ ಟ್ರೇಲರ್ ನಲ್ಲಿ ಸುದೀಪ್ ಧ್ವನಿಯಲ್ಲಿ ವಿವರಣೆ ನೀಡಲಾಗಿದೆ. ಟ್ರೇಲರ್ ನಲ್ಲಿ ಸಂಗೊಳ್ಳಿ ರಾಯಣ್ಣ ಪಾತ್ರಧಾರಿ ದರ್ಶನ್ ಅಭಿನಯದ ದೃಶ್ಯಗಳ ತುಣುಕುಗಳಿವೆ. ಬಿಡುಗಡೆಯಾಗಿರುವ ಟ್ರೇಲರ್ ನಲ್ಲಿರುವ ದೃಶ್ಯಗಳು ಈಗಾಗಲೇ ಬಹಳಷ್ಟು ಜನರ ಮೆಚ್ಚುಗೆ ಗಳಿಸಿವೆ.

ಈ ಚಿತ್ರದಲ್ಲಿ ನಾಯಕ ದರ್ಶನ್ ಅವರಿಗೆ ನಾಯಕಿಯಾಗಿ ನಿಖಿತಾ ತುಕ್ರಲ್ ನಟಿಸಿದ್ದಾರೆ. ಹಿರಿಯ ನಟಿ ಜಯಪ್ರದಾ ಕಿತ್ತೂರು ರಾಣಿ ಚೆನ್ನಮ್ಮನ ಪಾತ್ರದಲ್ಲಿ ನಟಿಸಿದ್ದಾರೆ. ಹಿರಿಯ ನಟಿ ಉಮಾಶ್ರೀ, ನಟ ಬ್ಯಾಂಕ್ ಜನಾರ್ಧನ್, ಶೋಭರಾಜ್ ಕೂಡ ಈ ಚಿತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರದ ಪ್ರದರ್ಶನಕ್ಕೆ ಟಿಕೆಟ್ ದರವನ್ನು ರು. 5 ಹೆಚ್ಚು ನಿಗದಿಪಡಿಸಲಾಗಿದೆ. ಉಳಿದಂತೆ ಸಿಕ್ಕ ಮಾಹಿತಿ ಪ್ರಕಾರ ಭಾರಿ ಬಜೆಟ್ಟಿನ ಈ ಚಿತ್ರವನ್ನು ಕಡಿಮೆ ಥಿಯೇಟರುಗಳಲ್ಲಿ ಬಿಡುಗಡೆ ಮಾಡಲಾಗುವುದು.

ಇಷ್ಟೇ ಅಲ್ಲ, ಈ ಚಿತ್ರವನ್ನು ಕನ್ನಡದಲ್ಲಿ ಬಿಡುಗಡೆ ಮಾಡಿದ ನಂತರ ತಮಿಳು, ತೆಲುಗು ಹಾಗೂ ಹಿಂದಿಗೆ ಡಬ್ ಮಾಡುವ ಯೋಚನೆ ನಿರ್ಮಾಪಕರಿಗಿದೆ. ಆ ವಿಷಯ ಇನ್ನೂ ಮಾತುಕತೆ ಹಂತದಲ್ಲಿದ್ದು ಅಂತಿಮ ಫಲಿತಾಂಶ ಇನ್ನಷ್ಟೇ ಹೊರಬರಬೇಕಾಗಿದೆ. ಅಂದಹಾಗೆ ಚಿತ್ರವನ್ನು ರಾಜ್ಯದಾದ್ಯಂತ ಬಿಡುಗಡೆ ಮಾಡಲಿರುವ ವಿತರಕ ಎಚ್.ಡಿ. ಗಂಗರಾಜು, "ಚಿತ್ರದ ಬಜೆಟ್ ಹೆಚ್ಚಾಗಿರುವುದರಿಂದ ಅನಿವಾರ್ಯವಾಗಿ ಟಿಕೆಟ್ ದರದಲ್ಲಿ ರು. 5 ಏರಿಕೆ ಮಾಡಲಾಗಿದೆ" ಎಂದಿದ್ದಾರೆ.

ಇನ್ನು ಒಂದು ಪ್ರಮುಖ ಮಾಹಿತಿಯೆಂದರೆ, ನಿರ್ಮಾಪಕರು ಹಾಗೂ ವಿತರಕರು ಈ ಚಿತ್ರವನ್ನು ಸಿಕ್ಕಾಪಟ್ಟೆ ಥಿಯೇಟರ್ ಗಳಲ್ಲಿ ಬಿಡುಗಡೆ ಮಾಡದಿರಲು ನಿರ್ಧರಿಸಿದ್ದಾರೆ. ಅಂದಹಾಗೆ, ನಾಗಣ್ಣ ನಿರ್ದೇಶನದ ಈ ಚಿತ್ರಕ್ಕೆ ಯಶೋವರ್ಧನ್ ಸಂಗೀತ ನೀಡಿದ್ದಾರೆ. ರಮೇಶ್ ಬಾಬು ಛಾಯಾಗ್ರಹಣ ಹಾಗೂ ಗೋವರ್ಧನ್ ಸಂಕಲನ ಚಿತ್ರಕ್ಕಿದೆ. ಒಟ್ಟಿನಲ್ಲಿ ಬಹುನಿರೀಕ್ಷೆಯ, ದರ್ಶನ್ ಅಭಿನಯದ ಸಂಗೊಳ್ಳಿ ರಾಯಣ್ಣ ಚಿತ್ರವು ಅಕ್ಟೋಬರ್ 19 ರಂದು ತೆರೆಗೆ ಅಪ್ಪಳಿಸಲಿದೆ. (ಒನ್ ಇಂಡಿಯಾ ಕನ್ನಡ)

<ul id="pagination-digg"><li class="previous"><a href="/news/darshan-sangolli-rayanna-release-19th-october-2012-068892.html">« Previous</a>

More from Filmibeat

English summary
Challenging Star Darshan upcoming movie 'Sangolli Rayanna' to hit Screen on 19th October 2012. Darshan and Nikita Thukral acted in Lead Role for this Naganna directed movie. Yashovardhan Music, Ramesh Babu Cemara and Govardhan editing. Released movie trailer to watch here...&#13; &#13;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X