'ಬಾಹುಬಲಿ' ಸಿನಿಮಾವನ್ನು ಸೈಡಿಗಿಡಿ ಎಂದ ಡಿ ಬಾಸ್!
Recommended Video
''ಆ ಸಿನಿಮಾವನ್ನು ಸೈಡಿಗಿಡಿ'' ಎಂದು ನಟ ದರ್ಶನ್ ಹೇಳಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಆ ರೀತಿ ಹೇಳಿರುವುದು ತೆಲುಗಿನ ಸೂಪರ್ ಹಿಟ್ ಸಿನಿಮಾ 'ಬಾಹುಬಲಿ' ಬಗ್ಗೆ.
ದರ್ಶನ್ ಮೊದಲ ಬಾರಿಗೆ ಪೌರಾಣಿಕ ಸಿನಿಮಾದಲ್ಲಿ ನಟಿಸಿದ್ದಾರೆ. ಅದುವೇ 'ಕುರುಕ್ಷೇತ್ರ'. ಈ ಸಿನಿಮಾ ಇದೇ ಶುಕ್ರವಾರ ಬಿಡುಗಡೆಯಾಗುತ್ತಿದೆ. ಈ ವಿಶೇಷವಾಗಿ ಇತ್ತೀಚಿಗೆ 'ಕುರುಕ್ಷೇತ್ರ' ಸಿನಿಮಾದ ಸುದ್ದಿಗೋಷ್ಟಿ ಕಾರ್ಯಕ್ರಮ ನಡೆಯಿತು.
ಇಲ್ಲಿ ರಾಜಮೌಳಿ ನಿರ್ದೇಶನದ 'ಬಾಹುಬಲಿ' ಚಿತ್ರದ ಪ್ರಸ್ತಾಪ ಬಂತು. ಆಗ ದರ್ಶನ್ ಆ ಸಿನಿಮಾವನ್ನು ದೂರು ಇಡಿ ಎಂದು ಹೇಳಿದರು.

ಪ್ರಶ್ನೆ ಏನು..?, ಉತ್ತರ ಏನು..?
''ಈ ರೀತಿಯ ಪ್ರಯತ್ನಗಳನ್ನು ಬೇರೆ ಭಾಷೆಗಳಲ್ಲಿ ನೋಡುತ್ತಿದ್ವಿ. ಈಗ ಕನ್ನಡದಲ್ಲಿಯೂ ಈ ರೀತಿಯ ಸಿನಿಮಾ ಬಂದಿದೆ....'' ಎಂಬ ಪ್ರಶ್ನೆಯನ್ನು ಅರ್ಧಕ್ಕೆ ನಿಲ್ಲಿಸಿದ ದರ್ಶನ್ ಬೇರೆ ಭಾಷೆಯಲ್ಲಿ ಯಾವ ಸಿನಿಮಾ ಬಂದಿದೆ ಎಂದು ತಾವೇ ಮರು ಪ್ರಶ್ನೆ ಹಾಕಿದರು. ಆಗ 'ಬಾಹುಬಲಿ' ಚಿತ್ರ ಪ್ರಸ್ತಾಪ ಮಾಡಿದಾಗ ದರ್ಶನ್ ಅದನ್ನು ದೂರ ಇಡಿ ಎಂದು ಹೇಳಿದ್ದಾರೆ.

ಕಾಲ್ಪನಿಕ ಕಥೆಯೇ ಬೇರೆ.. 'ಕುರುಕ್ಷೇತ್ರ'ವೇ ಬೇರೆ..
'ಬಾಹುಬಲಿ' ಸಿನಿಮಾಗಿಂತ ತಮ್ಮ 'ಕುರುಕ್ಷೇತ್ರ' ಸಿನಿಮಾ ಹೇಗೆ ವಿಶೇಷ ಎಂಬುದನ್ನು ಒಂದೇ ಸಾಲಿನಲ್ಲಿ ದರ್ಶನ್ ಸಾಬೀತು ಮಾಡಿದ್ದಾರೆ. ಕಾಲ್ಪನಿಕ ಕಥೆ ಹೇಳುವುದೇ ಬೇರೆ, ಪೌರಾಣಿಕ ಸಿನಿಮಾವೇ ಬೇರೆ ಎಂದು ಹೇಳಿದ್ದಾರೆ. ಕಾಲ್ಪನಿಕ ಸಿನಿಮಾಗಳಲ್ಲಿ ಏನು ಬೇಕಾದರೂ ಬದಲಾವಣೆ ಮಾಡಿ ತೋರಿಸಬಹುದು. ಆದರೆ, ಇಂತಹ ಸಿನಿಮಾವನ್ನು ಬಹಳ ಎಚ್ಚರಿಕೆಯಿಂದ ಮಾಡಬೇಕು ಎನ್ನುವುದು ದರ್ಶನ್ ಅಭಿಪ್ರಾಯ.

ವಿಶ್ವದ ಮೊದಲ ತ್ರೀಡಿ ಪೌರಾಣಿಕ ಸಿನಿಮಾ
'ಕುರುಕ್ಷೇತ್ರ' ಸಿನಿಮಾ ವಿಶ್ವದ ಮೊದಲ ತ್ರೀಡಿ ಪೌರಾಣಿಕ ಸಿನಿಮಾ ಆಗಿದೆ. ಈವರೆಗೆ ಎಷ್ಟೋ ಪೌರಾಣಿಕ ಚಿತ್ರಗಳು ಬಂದಿವೆ, ಎಷ್ಟೋ ತ್ರೀಡಿ ಸಿನಿಮಾಗಳು ಬಂದಿವೆ. ಆದರೆ, ಇದೇ ಮೊದಲ ಬಾರಿಗೆ ಪೌರಾಣಿಕ ತ್ರೀಡಿ ಸಿನಿಮಾ ಕನ್ನಡದಲ್ಲಿ ನಿರ್ಮಾಣ ಆಗಿದೆ. ಇದು ದರ್ಶನ್ ರಿಗೂ ಹೆಮ್ಮೆ ಪಡುವ ವಿಷಯವಾಗಿದೆ.

'ಬಾಹುಬಲಿ' ಚಿತ್ರದ ಸಂಗೀತ ನಿರ್ದೇಶಕರಿಂದ ಹಾಡು
'ಕುರುಕ್ಷೇತ್ರ' ಸಿನಿಮಾದಲ್ಲಿ 'ಬಾಹುಬಲಿ' ಚಿತ್ರದ ಸಂಗೀತ ನಿರ್ದೇಶಕ ಎಂ ಎಂ ಕೀರವಾಣಿ ಹಾಡು ಹಾಡಿದ್ದಾರೆ. ತೆಲುಗು ಭಾಷೆಯ ಅವತರಣಿಕೆಯ 'ಸಾಹೋರೇ ಸಾಹೋ..' ಹಾಡಿಗೆ ಕೀರವಾಣಿ ಧ್ವನಿ ನೀಡಿದ್ದಾರೆ. ಆಗಸ್ಟ್ 9 ರಂದು ಕನ್ನಡ ಮತ್ತು ತೆಲುಗು ಎರಡೂ ಭಾಷೆಗಳಲ್ಲಿ ಒಂದೇ ದಿನ ಸಿನಿಮಾ ಬಿಡುಗಡೆ ಆಗುತ್ತಿದೆ.


Click it and Unblock the Notifications











