»   » ನಾನು No.1 ರೇಸ್ ನಲ್ಲಿ ಇರಲು ಇಷ್ಟಪಡಲ್ಲ ಎಂದ ದರ್ಶನ್

ನಾನು No.1 ರೇಸ್ ನಲ್ಲಿ ಇರಲು ಇಷ್ಟಪಡಲ್ಲ ಎಂದ ದರ್ಶನ್

Posted By:
Subscribe to Filmibeat Kannada

ಫೆಬ್ರವರಿ 16 ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಹುಟ್ಟುಹಬ್ಬ. ಈಗಾಗಲೇ ಡಿ ಉತ್ಸವಕ್ಕೆ ಚಾಲನೆ ಸಿಕ್ಕಿದ್ದು, ದಾಸನ ಅಭಿಮಾನಿಗಳು ಕಳೆದ ಒಂದು ತಿಂಗಳಿನಿಂದ ಜಾತ್ರೆ ಮಾಡುತ್ತಿದ್ದಾರೆ. ರಾಜರಾಜೇಶ್ವರಿ ನಗರದಲ್ಲಿರುವ ದರ್ಶನ್ ನಿವಾಸದೆದುರು ದುಯೋರ್ಧನ ದರ್ಶನ್ ಕಟೌಟ್ ಗಳು ರಾರಾಜಿಸುತ್ತಿದೆ.

ಸದ್ಯ ಸ್ಯಾಂಡಲ್ ವುಡ್ ನಟರ ಪೈಕಿ ಬಾಕ್ಸ್ ಆಫೀಸ್ ಸುಲ್ತಾನ್ ಎಂದು ಕರೆಸಿಕೊಳ್ಳುವ ದರ್ಶನ್ ಕನ್ನಡದ ನಂಬರ್ ವನ್ ನಟರ ಸಾಲಿನಲ್ಲಿ ನಿಲ್ತಾರೆ. ಅತಿ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ಡಿ ಬಾಸ್ ಮೊದಲ ಪಂಕ್ತಿಯಲ್ಲಿದ್ದಾರೆ.

'ಮಜೆಸ್ಟಿಕ್' ಸಿನಿಮಾದ 16 ವರ್ಷದ ನೆನಪು

ಈ ಅಭಿಮಾನ ಕೆಲವೊಮ್ಮೆ ಫ್ಯಾನ್ಸ್ ವಾರ್ ಗೂ ಕಾರಣವಾಗಿದೆ. ನಮ್ಮ ಬಾಸ್ ನಂಬರ್ ವನ್, ನಮ್ಮ ಬಾಸ್ ನಂಬರ್ ವನ್ ಎಂದು ಸ್ಟಾರ್ ನಟರ ಅಭಿಮಾನಿಗಳು ಕಿತ್ತಾಡಿರುವುದು ಉಂಟು. ಆದ್ರೆ, ಟಾಪ್ ಕಾಂಪಿಟೇಶನ್ ಬಗ್ಗೆ ದರ್ಶನ್ ಹೇಳೋದೆ ಬೇರೆ. ಮುಂದೆ ಓದಿ.....

ಹುಟ್ಟುಹಬ್ಬ ಅಭಿಮಾನಿಗಳಿಗೆ ಮೀಸಲು

ನನ್ನ ಹುಟ್ಟುಹಬ್ಬಕ್ಕೆ ಅಭಿಮಾನಿಗಳು ಹೇಗೆ ಕಾಯ್ತರೋ, ಅದೇ ರೀತಿ ನಾನು ಕೂಡ ಕಾಯುತ್ತೇನೆ. ಯಾಕಂದ್ರೆ, ಆ ದಿನ ಅವರ ಜೊತೆ ಕಾಲ ಕಳೆಯಬಹುದು. ಪ್ರೀತಿಯಿಂದ ನನ್ನ ಮನೆಗೆ ಬರ್ತಾರೆ. ಅವರಿಗಾಗಿ ಆ ದಿನವನ್ನ ಮೀಸಲು ಇಡುತ್ತೇನೆ. ಎಲ್ಲರನ್ನ ಮಾತನಾಡಿಸುತ್ತೇನೆ. ಇದು ನನ್ನ ಹುಟ್ಟುಹಬ್ಬ ಎನ್ನುವುದಕ್ಕಿಂತ ಅವರ ಹಬ್ಬ ಎನ್ನುವುದು ಖುಷಿ.

ಎರಡು ವರ್ಷಗಳ ನಂತರ 'ಡಿ-ಬಾಸ್' ದರ್ಶನ್ ಭೇಟಿ ಮಾಡಿದ ಬುಲೆಟ್ ಪ್ರಕಾಶ್!

ನನ್ನ ಜನಕ್ಕೆ ಏನಾದರ ಕೊಡಬೇಕು

''ನನ್ನನ್ನು ಪ್ರೀತಿಸುವ ಜನರಿಗೆ ನಾನು ಏನಾದರೂ ವಾಪಸ್ ಕೊಟ್ಟಾಗಲೇ ನನಗೆ ಖುಷಿಯಾಗುವುದು. ಅದು ಸಿನಿಮಾ ಮೂಲಕವಾಗಿರಬಹುದು ಅಥವಾ ಬೇರೆ ವಿಷಯಗಳ ಮೂಲಕವಾಗಿರಬಹುದು. ಅದು ರಾಜಕೀಯ ಪ್ರವೇಶಿಸದೆ ಕೂಡ ಮಾಡಬಹುದು'' - ದರ್ಶನ್, ನಟ

ನಾನು ಶೂನ್ಯ ಮಟ್ಟದಲ್ಲಿ ಗುರುತಿಸಿಕೊಳ್ಳವ ನಟ

ಸಿನಿಮಾ ಜಗತ್ತಿಗೆ ಬಂದು ಸುಮಾರು 21 ವರ್ಷ ಆಗಿದೆ. ಮೆಜೆಸ್ಟಿಕ್ ಸಿನಿಮಾ ತೆರೆಕಂಡು 16 ವರ್ಷ ಆಗಿದೆ. ಇಲ್ಲಿಯವರೆಗೂ ಸುಮಾರು 50 ಚಿತ್ರಗಳನ್ನ ಮಾಡಿದ್ದಾರೆ. ಇಷ್ಟೆಲ್ಲಾ ಇದ್ರು, ನಾನು ಶೂನ್ಯ ಮಟ್ಟದಲ್ಲಿ ಗುರುತಿಸಿಕೊಳ್ಳಲು ಇಷ್ಟ ಪಡುತ್ತೇನೆ'' ಎನ್ನುತ್ತಾರೆ ದಾಸ.

ನಂಬರ್ 1 ರೇಸ್ ನಲ್ಲಿ ನಾನಿಲ್ಲ

ಸೊನ್ನೆ ಸಂಖ್ಯೆಯನ್ನು ಯಾರೂ ಇಷ್ಟಪಡುವುದಿಲ್ಲ, ಆದರೂ ನಾನು ಆ ಸಂಖ್ಯೆಯಲ್ಲಿಯೇ ಇರಲು ಬಯಸುತ್ತಾರೆ. ನಂಬರ್ 1 ನಟ ಎಂಬ ರೇಸ್ ನಲ್ಲಿ ಇರಲು ನಾನು ಇಚ್ಛಿಸುವುದಿಲ್ಲ ಎಂದು ಚಾಲೆಂಜಿಂಗ್ ಸ್ಟಾರ್ ಪತ್ರಿಕೆಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.

ಲಂಬೋರ್ಗಿನಿ ಇದ್ದರೂ ಮಾರುತಿ 800 ಮರೆಯಲಿಲ್ಲ ಡಿ ಬಾಸ್

53ನೇ ಸಿನಿಮಾ ಅನೌನ್ಸ್

ಸದ್ಯ, 50ನೇ ಸಿನಿಮಾ 'ಕುರುಕ್ಷೇತ್ರ' ಮುಗಿಸಿರುವ ದರ್ಶನ್ ಡಬ್ಬಿಂಗ್ ಮಾಡ್ತಿದ್ದಾರೆ. ಅದಾದ ನಂತರ ಶೈಲಾಜ ನಾಗ್ ನಿರ್ಮಾಣ ಹಾಗೂ ಪಿ ಕುಮಾರ್ ನಿರ್ದೇಶನದಲ್ಲಿ 51ನೇ ಸಿನಿಮಾ ತಯಾರಾಗ್ತಿದೆ. 52ನೇ ಚಿತ್ರಕ್ಕೆ ಸಂದೇಶ್ ನಾಗರಾಜ್ ನಿರ್ಮಾಪಕರು ಎನ್ನಲಾಗಿದೆ. ಇದರ ಮಧ್ಯೆ ಮೆಜೆಸ್ಟಿಕ್ ಚಿತ್ರದ ನಿರ್ಮಾಪಕ ಎಂ.ಜೆ ರಾಮಮೂರ್ತಿ ಅವರಿಗೆ 53ನೇ ಚಿತ್ರಕ್ಕೆ ಕಾಲ್ ಶೀಟ್ ಕೊಟ್ಟಿದ್ದಾರೆ.

English summary
After 50 films, Kannada cinema's 'Challenging Star' Darshan says he likes to stay at zero. The Challenging Star’s birthday falls on February 16, this Friday, but the celebrations have already begun.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X