ಕಾರನ್ನು ಫಾಲೋ ಮಾಡಿಕೊಂಡು ಹೋದ ಅಭಿಮಾನಿಗೆ 'ನಮಸ್ಕಾರ' ಎಂದ ದರ್ಶನ್.!
ನೆಚ್ಚಿನ ನಟನನ್ನ ಒಮ್ಮೆ ನೋಡಬೇಕು.. ಬಾಯ್ತುಂಬಾ ಮಾತನಾಡಿಸಬೇಕು.. ತಮ್ಮ ಅಭಿಮಾನವನ್ನು ವ್ಯಕ್ತ ಪಡಿಸಬೇಕು.. ಎಂಬ ಆಸೆ ಅಭಿಮಾನಿಗಳಲ್ಲಿ ಇದ್ದೇ ಇರುತ್ತದೆ. ಅದಕ್ಕೆ ನೋಡಿ ಸ್ಟಾರ್ ಗಳು ಎಲ್ಲೇ ಹೋದರು ಅಭಿಮಾನಿಗಳ ದಂಡು ಅಲ್ಲಿ ನೆರೆದಿರುತ್ತದೆ.
ಸ್ಟಾರ್ ಗಳು ಪ್ರಯಾಣ ಮಾಡುತ್ತಿರುವಾಗಲೂ ಅವರನ್ನು ಫಾಲೋ ಮಾಡಿಕೊಂಡು ಹೋಗಿ ಸೆಲ್ಫಿ ತೆಗೆಸಿಕೊಂಡ ಅಭಿಮಾನಿಗಳನ್ನು ನಾವು ನೋಡಿದ್ದೇವೆ. ಸೇಮ್ ಟು ಸೇಮ್ ಇಂಥದ್ದೇ ಘಟನೆ ಇತ್ತೀಚಿಗಷ್ಟೇ ರಿಪೀಟ್ ಆಗಿದೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಇರುವ ಫ್ಯಾನ್ಸ್ ಫಾಲೋಯಿಂಗ್ ಬಗ್ಗೆ ನಿಮಗೆಲ್ಲಾ ಗೊತ್ತೇ ಇದೆ. ಇತ್ತೀಚಿಗಷ್ಟೇ ದರ್ಶನ್ ತಮ್ಮ ಕಾರ್ ನಲ್ಲಿ ಎಲ್ಲೋ ಹೊರಟಿದ್ದರು.
ಬಿಳಿ ಬಣ್ಣದ ಕಾರಿನಲ್ಲಿ ದರ್ಶನ್ ಇದ್ದಾರೆಂಬ ಕ್ಲೂ ಅಭಿಮಾನಿ ಒಬ್ಬರಿಗೆ ಸಿಕ್ಕಿಬಿಟ್ಟಿದೆ. ಹೀಗಾಗಿ ದಾರಿಯಲ್ಲಿ ಅದೇ ಕಾರನ್ನು ಫಾಲೋ ಮಾಡ್ಕೊಂಡು ಹೋಗಿ ಕೂಗಿಕೊಂಡಿದ್ದಾರೆ.

ಫಾಲೋ ಮಾಡಿಕೊಂಡು ಬಂದ ಅಭಿಮಾನಿಗೆ ಸ್ಪಂದಿಸಿದ ದರ್ಶನ್, ಕಾರಿನ ಗ್ಲಾಸ್ ಅನ್ನ ಕೆಳಗೆ ಇಳಿಸಿ ಅಭಿಮಾನಿಗೆ ನಮಸ್ಕಾರ ಹೇಳಿದ್ದಾರೆ. ಇದಕ್ಕೆ ಆ ಅಭಿಮಾನಿ ಫುಲ್ ಖುಷ್ ಆಗಿದ್ದಾರೆ.
ಅಭಿಮಾನಿಗಳನ್ನು ಮನಸಾರೆ ಪ್ರೀತಿಸುವ ದರ್ಶನ್, ತಮ್ಮ ಫ್ಯಾನ್ಸ್ ಗೆ ಎಂದೂ ನೋವು ಮಾಡಿದವರಲ್ಲ. ಅದಕ್ಕೆ ಇಂತಹ ಅದೆಷ್ಟೋ ಉದಾಹರಣೆಗಳಿವೆ.!


Click it and Unblock the Notifications