twitter
    For Quick Alerts
    ALLOW NOTIFICATIONS  
    For Daily Alerts

    ಸಪ್ಲೈಯರ್ ಮೇಲೆ ದರ್ಶನ್ ಹಲ್ಲೆ ಆರೋಪ: ಗಲಾಟೆ ಆಗಿದ್ದು ನಿಜ ಎಂದ ಹೋಟೆಲ್ ಮಾಲೀಕ

    |

    ಮೈಸೂರಿನ ಸಂದೇಶ್ ಪ್ರಿನ್ಸ್ ಹೋಟೆಲ್‌ನಲ್ಲಿ ನಟ ದರ್ಶನ್ ಹಾಗೂ ಗೆಳೆಯರು ದಲಿತ ಸಪ್ಲೈಯರ್ ಒಬ್ಬನ ಮೇಲೆ ತೀವ್ರವಾಗಿ ಹಲ್ಲೆ ಮಾಡಿದ್ದಾರೆ ಎಂದು ನಿರ್ದೇಶಕ ಇಂದ್ರಜಿತ್ ಲಂಕೇಶ್ ಆರೋಪ ಮಾಡಿದ್ದು, ಆರೋಪಕ್ಕೆ ಸಂದೇಶ್ ಪ್ರಿನ್ಸ್ ಹೋಟೆಲ್ ಮಾಲೀಕ ಸಂದೇಶ್ ನಾಗರಾಜ್ ಪುತ್ರ ಸಂದೇಶ್ ಪ್ರತಿಕ್ರಿಯೆ ನೀಡಿದ್ದಾರೆ.

    Recommended Video

    ದರ್ಶನ್ ಆದ್ರು ಅಷ್ಟೆ ಯಾರಾದ್ರೂ ಅಷ್ಟೆ ಎಂದು ಬೈದ ಸಂದೇಶ್ ಹೋಟೆಲ್ ಮಾಲೀಕ | Filmibeat Kannada

    ಈ ಘಟನೆ ನಡೆದು ಒಂದು ತಿಂಗಳಿಗೂ ಹೆಚ್ಚು ಕಾಲವಾಯ್ತು. ಅಂದು ದರ್ಶನ್ ಹಾಗೂ ಗೆಳೆಯರು ಪೂಲ್‌ ಸೈಡ್ ಪಾರ್ಟಿ ಮಾಡುತ್ತಿದ್ದರು. ನಮ್ಮ ಒಬ್ಬ ಸಪ್ಲೈಯರ್ ಅನ್ನು ದರ್ಶನ್ ಬೈದಿದ್ದು ನಿಜ ಆಗ ನಾನೂ ಸಹ ಜೊತೆಗೆ ಇದ್ದೆ. ಆದರೆ ದರ್ಶನ್ ಯಾರ ಮೇಲೂ ಕೈ ಮಾಡಲಿಲ್ಲ. ಅಂದು ಆದ ಗಲಾಟೆಯಿಂದ ಹೋಟೆಲ್‌ ಸರ್ವೀಸ್‌ಗೆ, ಇತರ ಗ್ರಾಹಕರಿಗೆ ತೊಂದರೆ ಆಯ್ತು'' ಎಂದಿದ್ದಾರೆ ಸಂದೇಶ್.

    ಆ ಸಿಬ್ಬಂದಿಯ ಜಾತಿ ಎಲ್ಲ ನನಗೆ ಗೊತ್ತಿಲ್ಲ. ನಮ್ಮ ಹೋಟೆಲ್‌ನಲ್ಲಿ ನಾವು ಯಾರನ್ನಾದರೂ ಸೇರಿಸಿಕೊಳ್ಳುವ ಮುನ್ನ ಯಾರ ಜಾತಿಯನ್ನೂ ಕೇಳುವುದಿಲ್ಲ. ಆತ ಬಹುಷಃ ಮಹಾರಾಷ್ಟ್ರದಿಂದ ಬಂದಿದ್ದ ಟ್ರೈನಿ ಆಗಿರಬಹುದು ಆತ ತನ್ನ ಟ್ರೈನಿಂಗ್ ಪೀರಿಯಡ್ ಮುಗಿಸಿಕೊಂಡು ವಾಪಸ್ ಹೊರಟು ಹೋಗಿದ್ದಾನೆ ನಮ್ಮ ಹೋಟೆಲ್‌ನಲ್ಲಿ ಆತ ಇಲ್ಲ'' ಎಂದಿದ್ದಾರೆ.

    ಸಿಸಿಟಿವಿ ದೃಶ್ಯಗಳು ಡಿಲೀಟ್ ಆಗಿವೆ: ಸಂದೇಶ್

    ಸಿಸಿಟಿವಿ ದೃಶ್ಯಗಳು ಡಿಲೀಟ್ ಆಗಿವೆ: ಸಂದೇಶ್

    ಸಿಸಿಟಿವಿ ದೃಶ್ಯಾವಳಿ ವಿಚಾರದ ಬಗ್ಗೆ ಮಾತನಾಡಿದ ಸಂದೇಶ್, ''ನಮ್ಮಲ್ಲಿ ಹೋಟೆಲ್ ರೂಂಗಳನ್ನು ಹೊರತುಪಡಿಸಿ ಇನ್ನೆಲ್ಲಾ ಕಡೆ ಸಿಸಿಟಿವಿ ಕ್ಯಾಮೆರಾಗಳು ಇವೆ. ಆದರೆ ನಮ್ಮಲ್ಲಿ ರೆಕಾರ್ಡ್ ಆಗುವ ವಿಡಿಯೋಗಳು ಹತ್ತು ದಿನಗಳ ನಂತರ ತಂತಾನೆ ಡಿಲೀಟ್ ಆಗುತ್ತವೆ. ದೊಡ್ಡ ಮೊತ್ತದ ಡೆಟಾ ಒಟ್ಟಾಗುವ ಕಾರಣ ಈ ವ್ಯವಸ್ಥೆ ಮಾಡಿದ್ದೇವೆ. ದೂರು ನೀಡುವಷ್ಟು ದೊಡ್ಡ ಪ್ರಕರಣ ಅದಲ್ಲವಾದ್ದರಿಂದ ದೂರು ನೀಡಲಿಲ್ಲ. ಈಗಲೂ ದೂರು ನೀಡುವುದಿಲ್ಲ'' ಎಂದರು ಸಂದೇಶ್.

    ದರ್ಶನ್ ಬೈದಿದ್ದು ನಿಜ ಹಲ್ಲೆ ಮಾಡಿಲ್ಲ: ಸಂದೇಶ್

    ದರ್ಶನ್ ಬೈದಿದ್ದು ನಿಜ ಹಲ್ಲೆ ಮಾಡಿಲ್ಲ: ಸಂದೇಶ್

    ''ಅಂದು ನಾನಿದ್ದಾಗಲೇ ದರ್ಶನ್ ಆ ಸಿಬ್ಬಂದಿಯನ್ನು ಬೈದ. ನಾನು ದರ್ಶನ್‌ಗೆ ಸಮಯ ಹೆಚ್ಚಾಗಿದೆ ನೀನು ರೂಮ್‌ಗೆ ಹೋಗು ಎಂದು ಹೇಳಿ ಅಲ್ಲಿಂದ ಹೊರಟೆ. ಅಂದಿನ ದಿನ ಪಾರ್ಟಿಯಲ್ಲಿ ಸುಮಾರು ಇಪ್ಪತ್ತು ಮಂದಿ ಇದ್ದಿರಬಹುದು. ಸಿಬ್ಬಂದಿಯನ್ನು ದರ್ಶನ್ ಬೈದಾಗ ನಾನೇ ಅವನಿಗೆ ಹೇಳಿದೆ ಲಾಕ್‌ಡೌನ್ ಸಮಯದಲ್ಲಿ ಕೆಲಸಗಾರರು ಸಿಗುವುದು ಕಷ್ಟವೆಂದು. ನಮ್ಮ ಸಿಬ್ಬಂದಿ ಮೇಲೆ ಹಲ್ಲೆ ಆದರೆ ನಾನು ಸುಮ್ಮನೆ ಬಿಡುತ್ತಿದ್ದೆನಾ? ನಮಗೆ ಅನ್ನ ಹಾಕುತ್ತಿರುವವರು ಅವರು'' ಎಂದಿದ್ದಾರೆ ಸಂದೇಶ್ ನಾಗರಾಜ್ ಪುತ್ರ.

    ಪ್ರಕರಣ ಇಲ್ಲಿಗೆ ಬಿಟ್ಟುಬಿಡಿ ಎಂದು ಇಂದ್ರಜಿತ್‌ಗೆ ಹೇಳಿದ್ದೆ: ಸಂದೇಶ್

    ಪ್ರಕರಣ ಇಲ್ಲಿಗೆ ಬಿಟ್ಟುಬಿಡಿ ಎಂದು ಇಂದ್ರಜಿತ್‌ಗೆ ಹೇಳಿದ್ದೆ: ಸಂದೇಶ್

    ''ಇದೇ ಘಟನೆ ಬಗ್ಗೆ ಇಂದ್ರಜಿತ್ ಲಂಕೇಶ್ ಕೆಲವು ದಿನಗಳ ಹಿಂದೆ ನನಗೆ ಕರೆ ಮಾಡಿ ಮಾತನಾಡಿದ್ದರು. ಗಲಾಟೆ ಆಗಿರುವುದರ ಬಗ್ಗೆ ವಿಚಾರಿಸಿದರು. ಈ ಪ್ರಕರಣವನ್ನು ಇಲ್ಲಿಗೆ ಬಿಟ್ಟುಬಿಡಿ ಎಂದು ನಾನು ಮನವಿ ಮಾಡಿದ್ದೆ. ಸುಮ್ಮನೇ ಇಲ್ಲ-ಸಲ್ಲದ ವಿವಾದಗಳಾಗುತ್ತವೆ ಇದನ್ನು ಇಲ್ಲಿಗೆ ಬಿಡಿ ಎಂದು ನಾನು ಕೇಳಿಕೊಂಡಿದ್ದೆ. ಆದರೆ ಅವರು ಇಂದು ಮಾಧ್ಯಮಗಳ ಮುಂದೆ ಹೋಗಿದ್ದಾರೆ'' ಎಂದಿದ್ದಾರೆ ಸಂದೇಶ್.

    ''ಸಣ್ಣ ಘಟನೆ ಆದ್ದರಿಂದ ದೂರು ನೀಡಲಿಲ್ಲ, ನೀಡುವುದೂ ಇಲ್ಲ''

    ''ಸಣ್ಣ ಘಟನೆ ಆದ್ದರಿಂದ ದೂರು ನೀಡಲಿಲ್ಲ, ನೀಡುವುದೂ ಇಲ್ಲ''

    ಆ ಘಟನೆ ಬಳಿಕ ಉಳಿದ ಸಪ್ಲೈಯರ್‌ಗಳು ಪ್ರತಿಭಟನೆ ಮಾಡಿದರು, ಹಲ್ಲೆಗೊಳಗಾದ ವ್ಯಕ್ತಿಯ ಪತ್ನಿ ಪೊರಕೆ ಹಿಡಿದು ಬಂದು ಜಗಳ ಮಾಡಿದರು ಎಂಬುದೆಲ್ಲ ಸುಳ್ಳು ಎಂದ ಸಂದೇಶ್, ''ಸಿಬ್ಬಂದಿಗಳು ನಮಗೆ ಅನ್ನ ಹಾಕುವವರು, ಅವರಿಗೆ ಏನಾದರೂ ಆದರೆ ನಾನು ಸುಮ್ಮನೆ ಬಿಡುತ್ತಿರಲಿಲ್ಲ. ದರ್ಶನ್ ಎಂದೂ ಹಾಗೆ ಮಾತನಾಡದಿದ್ದವು ಅಂದು ಸಪ್ಲೈಯರ್ ಅನ್ನು ಬೈದ್, ಸರ್ವೀಸ್‌ ಕ್ಷೇತ್ರದಲ್ಲಿರುವವರಿಗೆ ಅದು ಸಾಮಾನ್ಯ ಸಹ. ಹಾಗಾಗಿ ನಾನು ದೂರು ನೀಡಲಿಲ್ಲ. ದರ್ಶನ್‌ ಜೊತೆ ಯಾವಾಗಲೂ ಹೆಚ್ಚು ಜನ ಹೋಟೆಲ್‌ಗೆ ಬರುತ್ತಾರೆ. ಇದಕ್ಕಾಗಿ ನಾನು ಅವನೊಂದಿಗೆ ಜಗಳ ಸಹ ಮಾಡಿದ್ದೇನೆ. ಅಂದೂ ಸಹ ಹೆಚ್ಚು ಜನ ಇದ್ದರು, ಆದರೆ ಯಾರ್ಯಾರು ಇದ್ದರು ಎಂಬುದು ನನಗೆ ಗೊತ್ತಿಲ್ಲ'' ಎಂದಿದ್ದಾರೆ ಸಂದೇಶ್.

    English summary
    Sandesh Prince hotel owner Sandesh said Darshan did scolded a supplier but he did not hit any one on that day.
    Thursday, July 15, 2021, 13:26
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X