ಕುರುಕ್ಷೇತ್ರಕ್ಕೆ ಅಸಲಿ ಗತ್ತು ತಂದು ಕೊಟ್ಟ ಹೊಸ ಟ್ರೈಲರ್

Recommended Video

Kurukshetra Kannada Movie: ಬೆಂಕಿ ಹೊತ್ತಿಸುತ್ತಿದೆ ಕುರುಕ್ಷೇತ್ರ ಹೊಸ ಟ್ರೇಲರ್ | FILMIBEAT KANNADA

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕುರುಕ್ಷೇತ್ರ ಸಿನಿಮಾ ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಆಗಸ್ಟ್-2 ರಂದು ರಾಜ್ಯಾದ್ಯಂತ ತೆರೆಗೆ ಬರ್ತಿದ್ದು, ಈಗಾಗಲೇ ಆಡಿಯೋ ಮತ್ತು ಟೀಸರ್, ಟ್ರೈಲರ್ ಗಳ ಮೂಲಕ ಅಬ್ಬರಿಸುತ್ತಿದೆ.

ಆಡಿಯೋ ಬಿಡುಗಡೆ ವೇಳೆ ಚಿತ್ರತಂಡ ರಿಲೀಸ್ ಮಾಡಿದ್ದ ಟ್ರೈಲರ್ ಬಗ್ಗೆ ಅಭಿಮಾನಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಹಿಂದೆ ಬಂದಿದ್ದ ಎರಡು ಟೀಸರ್ ಗೆ ಹೊಸದೊಂದು ದೃಶ್ಯ ಸೇರಿಸಿ ಟ್ರೈಲರ್ ಎಂದು ಬಿಟ್ಟಿದ್ದೀರಾ. ಇದು ಚೆನ್ನಾಗಿಲ್ಲ ಎಂದು ಬೇಸರಗೊಂಡಿದ್ದರು.

ಹೀಗೆ, ಟ್ರೈಲರ್ ವಿಚಾರಕ್ಕೆ ಭಾರಿ ನಿರಾಸೆಯಾಗಿದ್ದ ಅಭಿಮಾನಿಗಳ ಒತ್ತಾಯಕ್ಕೆ ಮಣಿದ ದರ್ಶನ್ ಮತ್ತು ಕುರುಕ್ಷೇತ್ರ ಚಿತ್ರತಂಡ ಈಗ ಹೊಸ ಟ್ರೈಲರ್ ರಿಲೀಸ್ ಮಾಡಿದೆ. ಒಂದು ಪೌರಾಣಿಕ ಚಿತ್ರ ಅಂದ್ರೆ ಹೇಗಿರಬೇಕು, ಜನ ಏನು ನಿರೀಕ್ಷೆ ಮಾಡ್ತಿದ್ದಾರೆ ಎಂಬುದನ್ನ ಗಮನದಲ್ಲಿಟ್ಟುಕೊಂಡು ಈ ಟ್ರೈಲರ್ ಬಂದಿದೆ.

Darshan shared kurukshetra new trailer

ಹೊಸ ಟ್ರೈಲರ್ ನೋಡಿದ ಚಿತ್ರಾಭಿಮಾನಿಗಳು ಬಹಳ ಖುಷಿಯಾಗಿದ್ದಾರೆ. ಸಣ್ಣಪುಟ್ಟ ವಿಷ್ಯಗಳನ್ನ ಬಿಟ್ಟರೇ, ಹೊಸ ಟ್ರೈಲರ್ ಚಿಂದಿ ಎನ್ನುತ್ತಿದ್ದಾರೆ. ಭೀಷ್ಮನ ಎಂಟ್ರಿಯಿಂದ ಆರಂಭವಾಗಿ ದುರ್ಯೋಧನ, ಕರ್ಣ, ಕೃಷ್ಣ, ಅಭಿಮನ್ಯು, ಭೀಮ, ಅರ್ಜುನ, ದ್ರೌಪದಿ, ಶಕುನಿ, ಶಲ್ಯ, ದುಶ್ಯಾಸನ ಸೇರಿದಂತೆ ಬಹುತೇಕ ಪಾತ್ರಗಳ ಅಸಲಿ ಗತ್ತು ಏನು ಎಂಬುದು ಟ್ರೈಲರ್ ನಲ್ಲಿ ಪ್ರದರ್ಶನವಾಗಿದೆ.

ಇಷ್ಟು ದಿನ ಕುರುಕ್ಷೇತ್ರ ಚಿತ್ರವನ್ನ ಸರಿಯಾಗಿ ಪ್ರಚಾರ ಮಾಡುತ್ತಿಲ್ಲ, ನಿರ್ಮಾಪಕರು ನಿರ್ಲಕ್ಷ್ಯ ಮಾಡಿದ್ದಾರೆ ಎಂಬ ಮಾತುಗಳ ಸದ್ದು ಮಾಡುತ್ತಿದೆ. ಇದಕ್ಕೆಲ್ಲ ಉತ್ತರ ಕೊಡುವಂತೆ ಮೂಡಿ ಬಂದಿದೆ ಹೊಸ ಟ್ರೈಲರ್. ಸದ್ಯ ಯೂಟ್ಯೂಬ್ ನಲ್ಲಿ ಟ್ರೈಲರ್ ನೋಡಲು ಲಭ್ಯವಾಗಿಲ್ಲ. ದರ್ಶನ್ ತೂಗುದೀಪ ಶ್ರೀನಿವಾಸ್ ಅವರ ಫೇಸ್ ಬುಕ್ ಪೇಜ್ ನಲ್ಲಿ ಹೊಸ ಟ್ರೈಲರ್ ನೋಡಬಹುದು.

More from Filmibeat

English summary
Challenging star darshan shared kurukshetra new trailer in his facebook. this trailer looking very fresh and amezing. the movie will release on august 2nd. directed by naganna and produced by munirathna.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X