ರವಿಚಂದ್ರನ್ ಹುಟ್ಟುಹಬ್ಬಕ್ಕೆ ಚಿತ್ರರಂಗದ ಗಣ್ಯರ ಶುಭಾಶಯ: ಯಾರ್ಯಾರ ವಿಶ್ ಹೇಗಿದೆ?
ಕ್ರೇಜಿ ಸ್ಟಾರ್ ರವಿಚಂದ್ರನ್ ಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಕೊರೊನಾ ಲಾಕ್ ಡೌನ್ ನಿಂದ ಈ ಬಾರಿ ಅದ್ದೂರಿ ಹುಟ್ಟುಹಬ್ಬಕ್ಕೆ ಬ್ರೇಕ್ ಬಿದ್ದಿದೆ. ಆದರೂ ಮನೆಯಲ್ಲಿಯೆ ಸರಳವಾಗಿ ಕುಟುಂಬದ ಜೊತೆ ಜನ್ಮದಿನ ಆಚರಿಸಿಕೊಳ್ಳುತ್ತಿದ್ದಾರೆ ರವಿಚಂದಜ್ರನ್. ಪ್ರತೀವರ್ಷ ಮನೆಯ ಮುಂದೆ ಅಭಿಮಾನಿಗಳು ಬಂದು ಜಮಾಯಿಸುತ್ತಿದ್ದರು. ಪ್ರೀತಿಯಿಂದ ಶುಭಹಾರೈಸುತ್ತಿದ್ದರು. ಆದರೆ ಈ ಬಾರಿ ಈ ಎಲ್ಲಾ ಸಂಭ್ರಮಕ್ಕೂ ಕೊರೊನಾ ಅಡ್ಡಿ ಬಂದಿದೆ.
Recommended Video
ಅದ್ದೂರಿ ಆಚರಣೆ ಇಲ್ಲದಿದ್ದರೂ, ಅಭಿಮಾನಿಗಳು, ಚಿತ್ರರಂಗದ ಗಣ್ಯರು ಸಾಮಾಜಿಕ ಜಾಲತಾಣದ ಮೂಲಕವೇ ಶುಭಹಾರೈಸುತ್ತಿದ್ದಾರೆ. ಗಣ್ಯರು ವಿಶ್ ಮಾಡಿ ರವಿಚಂದ್ರನ್ ಜೊತೆಗಿನ ಅನುಬಂಧವನ್ನು ಹಂಚಿಕೊಳ್ಳುತ್ತಿದ್ದಾರೆ. ದರ್ಶನ್, ಸುದೀಪ್, ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್ ಸೇರಿದಂತೆ ಸ್ಯಾಂಡಲ್ ವುಡ್ ನ ಬಹುತೇಕ ಗಣ್ಯರು ರವಿಚಂದ್ರನ್ ಗೆ ಶುಭಹಾರೈಸಿದ್ದಾರೆ. ಯಾರ್ಯಾರ ವಿಶ್ ಹೇಗಿದೆ? ಮುಂದೆ ಓದಿ..

ಸ್ನೇಹ ಪ್ರೀತಿ ಎಂದಿಗೂ ಕಮ್ಮಿ ಆಗಿಲ್ಲ-ಶಿವರಾಜ್ ಕುಮಾರ್
"ಅವಾಗಾವಾಗ ಸಿಗೋಲ್ಲ, ಪ್ರತಿದಿನಾ ಫೋನ್ನಲ್ಲಿ ಮಾತಾಡಲ್ಲ, ಆದರೆ ನಮ್ಮ ಸ್ನೇಹ ಪ್ರೀತಿ ಎಂದಿಗೂ ಕಮ್ಮಿ ಆಗೋಲ್ಲ. ಹುಟ್ಟುಹಬ್ಬದ ಶುಭಾಶಯಗಳು ರವಿ" ಎಂದು ಹ್ಯಾಟ್ರಿಕ್ ಹೀರ್ ಶಿವರಾಜ್ ಕುಮಾರ್ ಶುಭ ಹಾರೈಸಿದ್ದಾರೆ.

ಕನಸುಗಾರನ ಕನಸುಗಳೆಲ್ಲಾ ನನಸಾಗಲಿ-ದರ್ಶನ್
"ಕನಸುಗಾರನ ಕನಸುಗಳೆಲ್ಲಾ ಆದಷ್ಟು ಬೇಗ ನನಸಾಗಲಿ. ಅವರ ಕೊಡುಗೆ ಚಿತ್ರರಂಗಕ್ಕೆ ಅಪಾರ. ನಮ್ಮೆಲ್ಲರ ಪ್ರೀತಿಯ ಕ್ರೇಜಿ ಸ್ಟಾರ್ ರವಿ ಸರ್ ರವರಿಗೆ 'ರಾಬರ್ಟ್' ತಂಡದಿಂದ ಹುಟ್ಟುಹಬ್ಬದ ಹಾರ್ಧಿಕ ಶುಭಾಶಯಗಳು" ಎಂದು ದರ್ಶನ್ ವಿಶ್ ಮಾಡಿದ್ದಾರೆ.

ರಿಯಾಲ್ ಸ್ಟಾರ್ ಉಪೇಂದ್ರ ವಿಶ್
ರಿಯಲ್ ಸ್ಟಾರ್ ಉಪೇಂದ್ರ ರವಿಚಂದ್ರನ್ ಗೆ ವಿಶ್ ಮಾಡಿದ್ದು ಹೀಗೆ. "ನಟ, ನಿರ್ದೇಶಕ, ನಿರ್ಮಾಪಕ, ಚಿತ್ರಕಥೆಗಾರ, ಸಂಗೀತ ನಿರ್ದೇಶಕ, ಸಂಕಲನಕಾರ, ನೃತ್ಯ ಸಂಯೋಜಕ ಹೀಗೆ ಚಂದನವನದ ಬಹುಮುಖ ಪ್ರತಿಭೆಯಾದ ಕ್ರೇಜಿಸ್ಟಾರ್, ಕನಸುಗಾರ ವಿ.ರವಿಚಂದ್ರನ್ ರವರಿಗೆ ಜನ್ಮದಿನದ ಶುಭಾಷಯಗಳು" ಎಂದು ಹೇಳಿದ್ದಾರೆ.

ನಿಖಿಲ್ ಕುಮಾರಸ್ವಾಮಿ ಶುಭಾಶಯ
"ಕನ್ನಡ ಚಿತ್ರರಂಗಕ್ಕೆ ಹೊಸ ಆಯಾಮ ನೀಡಿದ ಅಪ್ರತಿಮ ಕಲಾವಿದರಾದ ವಿ.ರವಿಚಂದ್ರನ್ ಅವರಿಗೆ ಜನ್ಮ ದಿನದ ಹಾರ್ದಿಕ ಶುಭಾಶಯಗಳು" ಎಂದು ಸಾಮಾಜಿಕ ಜಾಲತಾಣದಲ್ಲಿ ಶುಭ ಹಾರೈಸಿದ್ದಾರೆ.

ನಟಿ ಮಾಲಾಶ್ರೀ
ರವಿಚಂದ್ರನ್ ಮತ್ತು ನಟಿ ಮಾಲಾಶ್ರೀ ಜೋಡಿ ಅಂದಾಕ್ಷಣ ರಾಮಾಚಾರಿ ಸಿನಿಮಾ ನೆನಪಾಗುತ್ತೆ. ಸ್ಯಾಂಡಲ್ ವುಡ್ ನ ಎವರ್ ಗ್ರೀನ್ ಸಿನಿಮಾಗಳಲ್ಲಿ ರಾಮಾಚಾರಿ ಸಿನಿಮಾ ಕೂಡ ಒಂದು. ರವಿಮಾಮನ ಹುಟ್ಟುಹಬ್ಬಕ್ಕೆ ನಟಿ ಮಾಲಾಶ್ರೀ ಕೂಡ ಶುಭಾರೈಸಿದ್ದಾರೆ. ಜೊತೆಗೆ ಫೋಟೋವನ್ನು ಶೇರ್ ಮಾಡಿದ್ದಾರೆ. "ಹುಟ್ಟುಹಬ್ಬದ ಶುಭಾಶಯಗಳು ರವಿಚಂದ್ರನ್, ಒಳ್ಳೆಯದಾಗಲಿ" ಎಂದು ವಿಶ್ ಮಾಡಿ ಹಾರ್ಟ್ ಇಮೋಜಿ ಹಾಕಿದ್ದಾರೆ.

ನಿಜವಾದ ಸ್ಫೂರ್ತಿ ರವಿಚಂದ್ರನ್- ವಸಿಷ್ಠ
"ನನ್ನ ಫೇವರಿಟ್ ರವಿಚಂದ್ರನ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. ಶೋ ಮ್ಯಾನ್, ನಿಜವಾದ ಸ್ಫೂರ್ತಿ, ಕ್ರೇಜಿ ಸ್ಟಾರ್ ರವಿಚಂದ್ರನ್" ಎಂದು ನಟ ವಸಿಷ್ಠ ಸಿಂಹ ಶುಭ ಹಾರೈಸಿದ್ದಾರೆ.

ತರುಣ್ ಸುಧೀರ್
ನಮ್ಮ ಚಿತ್ರರಂಗದ ಶೋ ಮ್ಯಾನ್ ರವಿಚಂದ್ರನ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. ನೀವು ಯಾವಾಗಲು ಸ್ಫೂರ್ತಿ ಸರ್. 100 ವರ್ಷ ಸುಖವಾಗಿ ಬಾಳಿ" ಎಂದು ನಿರ್ದೇಶಕ ತರುಣ್ ಸುಧೀರ್ ಶುಭ ಹಾರೈಸಿದ್ದಾರೆ.


Click it and Unblock the Notifications











