ಥಿಯೇಟರ್ ಮುಂದೆ ನಿಂತ ಜೂನಿಯರ್ 'ಯಜಮಾನ'.! ಎಲ್ಲಿದು?

Recommended Video

Yajamana Movie: ಥಿಯೇಟರ್ ಮುಂದೆ ನಿಂತ ಜೂನಿಯರ್ 'ಯಜಮಾನ'.! ಎಲ್ಲಿದು? | FILMIBEAT KANNADA

ದರ್ಶನ್ ಯಜಮಾನ ಚಿತ್ರ ನಾಳೆ ವರ್ಲ್ಡ್ ವೈಡ್ ತೆರೆಕಾಣುತ್ತಿದೆ. ಕರ್ನಾಟಕದಲ್ಲಿ ಅತಿ ಹೆಚ್ಚು ಸ್ಕ್ರೀನ್ ಗಳಲ್ಲಿ ಪ್ರದರ್ಶನ ಕಾಣಲಿರುವ ಯಜಮಾನ ಹೊರರಾಜ್ಯ, ಹೊರದೇಶಗಳಲ್ಲೂ ಅಬ್ಬರಿಸಲಿದೆ.

ಯಜಮಾನ ಚಿತ್ರವನ್ನ ಸ್ವಾಗತಿಸಲು ಡಿ-ಬಾಸ್ ಅಭಿಮಾನಿಗಳು ಭರ್ಜರಿ ಸಿದ್ಧತೆ ಮಾಡಿಕೊಂಡಿದ್ದು, ಥಿಯೇಟರ್ ಮುಂದೆ ಕಟೌಟ್ ಗಳು ರಾರಜಿಸುತ್ತಿದೆ. ರಾಜ್ಯದ ಬಹುತೇಕ ಚಿತ್ರಮಂದಿರಗಳ ಮುಂದೆ ದರ್ಶನ್ ಕಟೌಟ್ ನಿಲ್ಲಿಸಲಾಗಿದೆ. ಇಡೀ ಚಿತ್ರಮಂದಿರವೇ ಕಾಣದಂತೆ ಪೋಸ್ಟರ್ ಹಾಕಿರುವುದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

Darshan son cutout in front of theater

ಆದ್ರೆ, ಇಲ್ಲೊಂದು ಚಿತ್ರಮಂದಿರದಲ್ಲಿ ಜೂನಿಯರ್ ದರ್ಶನ್ ಅಂದ್ರೆ, ದರ್ಶನ್ ಅವರ ಮಗ ವಿನೀಶ್ ಅವರ ಕಟೌಟ್ ನಿಲ್ಲಿಸಲಾಗಿದೆ. ಹೌದು, ಈ ಕಟೌಟ್ ನಿಲ್ಲಿಸಿರುವುದು ಮೆಜಿಸ್ಟಿಕ್ ರಸ್ತೆಯಲ್ಲಿರುವ ನರ್ತಕಿ ಥಿಯೇಟರ್ ಬಳಿ. ನರ್ತಕಿ ಎದುರು ದರ್ಶನ್ ಅವರ 80 ಅಡಿ ಕಟೌಟ್ ನಿಲ್ಲಿಸಿದ್ರೆ, ದರ್ಶನ್ ಕಟೌಟ್ ಹಿಂದೆ ಮಗನ ಪೋಸ್ಟರ್ ನಿಲ್ಲಿಸಲಾಗಿದೆ.

ವಿಶೇಷ ಅಂದ್ರೆ ಯಜಮಾನ ಚಿತ್ರದಲ್ಲಿ ದರ್ಶನ್ ಮಗ ವಿನೀಶ್ ಕೂಡ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ. ಈ ಬಗ್ಗೆ ಎಲ್ಲಿಯೂ ಅಧಿಕೃತವಾಗಿ ಮಾಹಿತಿ ಬಿಟ್ಟುಕೊಟ್ಟಿಲ್ಲ. ಆದ್ರೆ, ಸಿನಿಮಾದಲ್ಲಿ ಅಭಿನಯಿಸಿರುವುದು ಪಕ್ಕಾ. ಆ ಚಿತ್ರದ ದೃಶ್ಯವೇ ಈ ಕಟೌಟ್ ಎನ್ನಲಾಗಿದೆ.

ಈ ಹಿಂದೆ ಮಿಸ್ಟರ್ ಐರಾವತ ಚಿತ್ರದಲ್ಲಿ ದರ್ಶನ್ ಮಗ ವಿನೀಶ್ ಕಾಣಿಸಿಕೊಂಡಿದ್ದರು. ಅದಾದ ಬಳಿಕ ಈಗ ಯಜಮಾನದಲ್ಲಿ ಬಣ್ಣ ಹಚ್ಚಿದ್ದಾರೆ.

More from Filmibeat

English summary
Challenging star darshan starring most expected movie yajamana will releasing tomorrow all over world. the movie directed by harikrishna.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X