ಸಕಲ ಕಲಾವಲ್ಲಭನಾದ ಜ್ಯೂನಿಯರ್ ಚಾಲೆಂಜಿಂಗ್ ಸ್ಟಾರ್
ಚಾಲೆಂಜಿಂಗ್ ಸ್ಟಾರ್ ದರ್ಶನ್ ಪುತ್ರ ಅಪ್ಪನಂತೆ ಚಿಕ್ಕ ವಯಸ್ಸಿನಿಂದಲೇ ಸಾಧನೆಯ ಹಾದಿಯಲ್ಲಿ ಸಾಗುತ್ತಿದ್ದಾರೆ. ಅಪ್ಪ ಬಾಕ್ಸ್ ಆಫೀಸ್ ನಲ್ಲಿ ಸದ್ದು ಮಾಡುತ್ತಿದ್ದರೆ ಮಗ ತನ್ನ ಟ್ಯಾಲೆಂಟ್ ನಿಂದ ಎಲ್ಲರನ್ನು ಇಂಪ್ರೆಸ್ ಮಾಡುತ್ತಿದ್ದಾರೆ. ಇತ್ತಿಚಿಗಷ್ಟೆ ಕರಾಟೆಯಲ್ಲಿ ಚಿನ್ನದ ಪದಕವನ್ನು ಗೆದ್ದು ಅಪ್ಪ ಅಮ್ಮನಿಂಗೆ ಹೆಮ್ಮೆ ಪಡುವಂತಹ ಕೆಲಸ ಮಾಡಿದ್ದರು ವೀನಿಶ್ ದರ್ಶನ್ .
ಕೇವಲ ಓದುವುದಷ್ಟೇ ಅಲ್ಲದೆ ವೀನಿಶ್ ಇತರೆ ಕೆಲಸಗಳಲ್ಲಿಯೂ ಸಖತ್ ಟ್ಯಾಲೆಂಟ್ ಅನ್ನುವುದು ಮತ್ತೊಮ್ಮೆ ಪ್ರೂವ್ ಆಗಿದೆ. ವೀನಿಶ್ ತಾಯಿ ಕೂಡ ಮಗನನ್ನ ಎಲ್ಲಾ ರೀತಿಯ ಆಕ್ವಿವಿಟೀಸ್ ನಲ್ಲಿ ಮಗನನ್ನ ತೊಡಗಿಸಿಕೊಳ್ಳಲು ಅವಕಾಶ ಮಾಡಿಕೊಡುತ್ತಿದ್ದಾರೆ.
ಇತ್ತಿಚಿಗಷ್ಟೇ ವೀನಿಶ್ ಅಮ್ಮನ ಜೊತೆ ಸೇರಿ ಗಣೇಶನ ಮೂರ್ತಿ ಮಾಡುವುದನ್ನ ಕಲಿಯುತ್ತಿರುವ ಪೋಟೋಗಳು ವೈರಲ್ ಆಗುತ್ತಿದೆ. ಹಾಗಾದ್ರೆ ವಿನೀಶ್ ಚಿಕ್ಕ ವಯಸ್ಸಿಗೆ ಏನೆಲ್ಲಾ ಕಲಿತಿದ್ದಾರೆ? ಅದಕ್ಕಾಗಿ ಅಪ್ಪ-ಅಮ್ಮನ ಸಪೋರ್ಟ್ ಹೇಗಿದೆ ಎನ್ನುವುದರ ಬಗ್ಗೆ ಸಂಫೂರ್ಣ ಮಾಹಿತಿ ಇಲ್ಲಿದೆ ಮುಂದೆ ಓದಿ.

ಗಣಪನ ಮಾಡುವುದ ಕಲಿತ ವೀನಿಶ್
ದರ್ಶನ್ ಹಾಗೂ ವಿಜಯಲಕ್ಷ್ಮೀ ಪುತ್ರ ವೀನಿಶ್ ದರ್ಶನ್ ಚಿಕ್ಕ ವಯಸ್ಸಿನಲ್ಲೇ ಎಲ್ಲಾ ರೀತಿಯ ಕಲೆಗಳನ್ನ ಕರಗತ ಮಾಡಿಕೊಂಡಿದ್ದಾನೆ. ಇತ್ತೀಚಿಗಷ್ಟೇ ಅಮ್ಮನ ಜೊತೆ ಸೇರಿ ಮಣ್ಣಿನಲ್ಲಿ ಗಣೇಶನನ್ನು ಮಾಡುವುದನ್ನು ಕಲಿತುಕೊಂಡಿದ್ದಾನೆ.

ಕರಾಟೆಯಲ್ಲಿ ಚಿನ್ನದ ಪದಕ
ಶಾಲೆಯಲ್ಲಿ ಏರ್ಪಡಿಸಿದ್ದ ಕರಾಟೆ ಸ್ಪರ್ಧೆಯಲ್ಲಿ ವೀನಿಶ್ ಚಿನ್ನದ ಪದಕವನ್ನ ಗೆದ್ದು ತಂದಿದ್ದರು. ಈ ವಿಚಾರವನ್ನ ತಿಳಿದ ಅಭಿಮಾನಿಗಳು ವೀನಿಶ್ ಸಾಧನೆಯನ್ನ ಕೊಂಡಾಡಿದ್ದರು.

ವಿದ್ಯಾಭ್ಯಾಸದಲ್ಲೂ ಮೊದಲು
ಕೇವಲ ಕರಾಟೆಯಲ್ಲಿ ಮಾತ್ರವಲ್ಲದೆ ವೀನಿಶ್ ವಿದ್ಯಾಭ್ಯಾಸದಲ್ಲೂ ಮುಂಚೂಣಿಯಲ್ಲಿದ್ದಾರೆ. ತನ್ನ ಒಂಬತ್ತನೇ ವಯಸ್ಸಿನಲ್ಲೇ ವೀನಿಶ್ ಸಾಧನೆ ಅಪಾರವಾದದ್ದು. ರಾಜರಾಜೇಶ್ವರಿ ನಗರದ ಹಿಲ್ ವೀವ್ ಸ್ಕೂಲ್ ನಲ್ಲಿ ವೀನಿಶ್ ದರ್ಶನ್ ವ್ಯಾಸಾಂಗ ಮಾಡುತ್ತಿದ್ದಾರೆ.

ಅಮ್ಮನ ಮುದ್ದಿನ ಮಗ
ಜ್ಯೂನಿಯರ್ ಚಾಲೆಂಜಿಂಗ್ ಸ್ಟಾರ್ ಆಸೆಗಳಿಗೆ ಅಪ್ಪ-ಅಮ್ಮ ಇಬ್ಬರು ಸಾಥ್ ನೀಡುದ್ದಾರೆ , ವೀನಿಶ್ ಆಸಕ್ತಿ ಇರೋ ವಿಚಾರದಲ್ಲಿ ತೊಡಗಿಕೊಳ್ಳಲು ದರ್ಶನ್ ಹಾಗೂ ವಿಜಯಲಕ್ಷ್ಮೀ ಅವಕಾಶ ಮಾಡಿಕೊಡುತ್ತಾರೆ. ಶಾಲೆಯ ರಜಾ ದಿನಗಳಲ್ಲಿ ಫಾರ್ಮ್ ಹೌಸ್ ನಲ್ಲಿ ಪ್ರಾಣಿಗಳ ಜೊತೆಯಲ್ಲಿ ಕಾಲಕಳೆಯುವುದರ ಜೊತೆಯಲ್ಲಿ ಕ್ಲೇ ಮೇಕಿಂಗ್, ಕೇಕ್ ಮೇಕಿಂಗ್ ಹೀಗೆ ಇನ್ನೂ ಅನೇಕ ಕಾರ್ಯಗಾರದಲ್ಲಿ ವೀನಿಶ್ ಭಾಗಿ ಆಗುತ್ತಾರೆ.


Click it and Unblock the Notifications











