For Quick Alerts
  ALLOW NOTIFICATIONS  
  For Daily Alerts

  ಸುದೀಪ್ ಹೆಗಲ ಮೇಲೆ ದರ್ಶನ್ ಪುತ್ರ ವಿನೀಶ್

  |

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಪುತ್ರ ವಿನೀಶ್ ಗೆ ಇಂದು ಹುಟ್ಟುಹಬ್ಬದ ಸಂಭ್ರಮ. 11ನೇ ವರ್ಷಕ್ಕೆ ಕಾಲಿಟ್ಟ ವಿನೀಶ್ ಗೆ ಡಿ ಬಾಸ್ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೆ ಹರಿದು ಬರುತ್ತಿದೆ. ಜೊತೆಗೆ ಅಭಿಮಾನಿಗಳು ಕೇಕ್ ಕತ್ತರಿಸಿ ಸಂಭ್ರಮ ಮಾಡುತ್ತಿದ್ದಾರೆ.

  ಇದರ ಜೊತೆಗೆ ವಿನೀಶ್ ಮತ್ತು ಕಿಚ್ಚ ಸುದೀಪ್ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹೌದು, ಸುದೀಪ್ ಹೆಗಲ ಮೇಲೆ ಜ್ಯೂನಿಯರ್ ದರ್ಶನ್ ಕುಳಿತಿರುವ ಸುಂದರ ಫೋಟೋ ಇದಾಗಿದೆ. ಈ ಫೋಟೋ ಈಗ ಎಲ್ಲ ಕಡೆ ಹರಿದಾಡುತ್ತಿದೆ. ಅಂದ್ಹಾಗೆ ಈ ಫೋಟೋ ಇವತ್ತು ನಿನ್ನೆಯದಲ್ಲ. ತುಂಬಾ ಹಳೆಯ ಫೋಟೋ ಎನ್ನುವುದು ನೋಡಿದರೆ ಗೊತ್ತಾಗುತ್ತೆ. ಅಂದು ಈ ಫೋಟೋ ಅಂತಹ ವಿಶೇಷತೆ ಅನಿಸಿರಲಿಕ್ಕಿಲ್ಲ. ಆದರೀಗ ಈ ಫೋಟೋ ತುಂಬ ಅಪರೂಪ ಎನಿಸುತ್ತಿದೆ.

  ಹುಟ್ಟುಹಬ್ಬದ ಸಂಭ್ರಮದಲ್ಲಿ ವಿನೀಶ್ ದರ್ಶನ್ಹುಟ್ಟುಹಬ್ಬದ ಸಂಭ್ರಮದಲ್ಲಿ ವಿನೀಶ್ ದರ್ಶನ್

  ಈ ಫೋಟೋ ಕ್ಲಿಕ್ಕಿಸಿದ ಸಮಯದಲ್ಲಿ ದರ್ಶನ್ ಮತ್ತು ಸುದೀಪ್ ಸ್ನೇಹ ಗಾಢವಾಗಿತ್ತು. ಆದ್ರೀಗ ಇಬ್ಬರ ಸ್ನೇಹ ಮುರಿದು ಬಿದ್ದಿದೆ. ಇಬ್ಬರು ಈಗ ಹಾವು-ಮುಂಗುಸಿ ತರ ಆಗಿದ್ದಾರೆ. ಈ ಸಮಯದಲ್ಲಿ ಈ ಫೋಟೋ ವೈರಲ್ ಆಗಿರುವುದು ವಿಶೇಷ.

  ಇತ್ತೀಚಿಗೆ ಇಬ್ಬರು ಸ್ಟಾರ್ ನಟರ ಅಭಿಮಾನಿಗಳ ನಡುವಿನ ವಾರ್ ತಾರಕ್ಕೇರಿತ್ತು. ಪೈಲ್ವಾನ್ ಸಿನಿಮಾ ರಿಲೀಸ್ ಆದ ಸಮಯದಲ್ಲಿ ಸಮಾಜಿಕ ಜಾಲತಾಣದಲ್ಲಿ ಇಬ್ಬರು ನಟರ ಅಭಿಮಾನಿಗಳ ಕೆಸರೆರಚಾಟ ಜೋರಾಗಿತ್ತು. ಸದ್ಯ ಅಭಿಮಾನಿಗಳ ವಾರ್ ಕೊಂಚ ತಣ್ಣಗಾಗಿದೆ. ಕುಚುಕು ಕುಚುಕು ಅಂತಿದ್ದ ಸಮಯದಲ್ಲಿ ಕ್ಲಿಕ್ಕಿಸಿದ ಫೋಟೋ ಈಗ ವೈರಲ್ ಆಗಿರುವುದನ್ನು ನೋಡಿ ಅನೇಕರು ಸಂತಸ ಪಡುತ್ತಿದ್ದಾರೆ. ಸುದೀಪ್ ಅಭಿಮಾನಿಗಳು ಸಹ ಶುಭಾಶಯ ಕೋರುತ್ತಿದ್ದಾರೆ.

  English summary
  Kannada actor Darshan son Vineesh darshan sitting on Sudeep's shoulders photo viral.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X