»   » ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಗ ವಿನೀಶ್ ಸಾಧನೆ ಅಮೋಘ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಗ ವಿನೀಶ್ ಸಾಧನೆ ಅಮೋಘ

Posted By:
Subscribe to Filmibeat Kannada
ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಗ ವಿನೀಶ್ ದರ್ಶನ್ ಸಾಧನೆ ಅಪಾರ | Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್.... ಕನ್ನಡ ಸಿನಿಮಾರಂಗದ ಬಾಕ್ಸ್ ಆಫೀಸ್ ಸುಲ್ತಾನ್ ಅಂತಾನೇ ಕರೆಸಿಕೊಳ್ಳುವ ಖ್ಯಾತ ನಟ. ಕೇವಲ ಸಿನಿಮಾಗಳಲ್ಲಿ ಮಾತ್ರವಲ್ಲದೆ ಬೇರೆ ಬೇರೆ ಕ್ಷೇತ್ರಗಳಲ್ಲೂ ತಮ್ಮನ್ನ ತಾವು ತೊಡಗಿಸಿಕೊಂಡಿರೋ ನಟ. ಕಷ್ಟದ ದಿನಗಳನ್ನ ಮೆಟ್ಟಿನಿಂತು ಅದ್ಭುತವಾದ ಯಶಸ್ಸು ಪಡೆದುಕೊಂಡಿರುವ ಚಾಲೆಂಜಿಂಗ್ ಸ್ಟಾರ್ ಹಾದಿಯಲ್ಲೇ ಮಗ ವಿನೀಶ್ ನಡೆಯೋದಕ್ಕೆ ಪ್ರಾರಂಭ ಮಾಡಿದ್ದಾರೆ.

ಪುಟ್ಟವಯಸ್ಸಿನಲ್ಲೇ ಅದ್ಭುತ ಸಾಧನೆ ಮಾಡಿರುವ ದರ್ಶನ್ ಪುತ್ರ ವಿನೀಶ್ ಮುಂದಿನ ದಿನಗಳಲ್ಲಿ ತಂದೆಯಂತೆ ಸಾಧನೆ ಮಾಡೋದ್ರಲ್ಲಿ ಅನುಮಾನವಿಲ್ಲ. ಅಷ್ಟಕ್ಕೂ ವಿನೀಶ್ ಮಾಡಿರುವ ಅಂತಹ ಸಾಹಸವಾದರೂ ಏನು ಅಂತೀರಾ ? ಮುಂದಿರುವ ಫೋಟೋ ಸ್ಲೈಡ್ ನಲ್ಲಿ ಓದಿ ನೀವು ಆಶ್ಚರ್ಯ ಪಡ್ತೀರಾ..!

ಕರಾಟೆ ಕಿಂಗ್ ಆದ ಜ್ಯೂನಿಯರ್ ಚಾಲೆಂಜಿಂಗ್ ಸ್ಟಾರ್

ವಿನೀಶ್... ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ವಿಜಯಲಕ್ಷ್ಮೀ ರವರ ಏಕೈಕ ಪುತ್ರ. ಇಷ್ಟು ದಿನ ದರ್ಶನ್ ಸಾಧನೆಯನ್ನ ಕೊಂಡಾಡುತಿದ್ದ ಅಭಿಮಾನಿಗಳು ಈಗ ದರ್ಶನ್ ಪುತ್ರರನ್ನೂ ಮೆಚ್ಚಿಕೊಳ್ಳುವ ಸಂದರ್ಭ ಬಂದಿದೆ. ವಿನೀಶ್ ಕರಾಟೆ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ.

ಸಾಧನೆಯನ್ನ ಮೆಚ್ಚಿದ ಅಭಿಮಾನಿಗಳು

ವಿನೀಶ್ ಕರಾಟೆಯಲ್ಲಿ ಚಿನ್ನದ ಪದಕ ಗೆದ್ದು ಬಂದಿದ್ದಾರೆ ಅನ್ನೋದನ್ನ ತಿಳಿದ ಡಿ ಬಾಸ್ ಅಭಿಮಾನಿಗಳು ಸಾಮಾಜಿಕ ಜಾಲತಾಣದ ಮೂಲಕ ವಿನೀಶ್ ರಿಗೆ ಶುಭಾಶಯಗಳನ್ನ ಕೋರುತ್ತಿದ್ದಾರೆ. ಅಪ್ಪನಂತೆ ಮಗ ಮಾಡಿರುವ ಸಾಧನೆಗೆ ಫ್ಯಾನ್ಸ್ ಹರ್ಷ ವ್ಯಕ್ತಪಡಿಸಿದ್ದಾರೆ.

ವಿದ್ಯಾಭ್ಯಾಸದಲ್ಲೂ ಮೊದಲು

ಕೇವಲ ಕರಾಟೆಯಲ್ಲಿ ಮಾತ್ರವಲ್ಲದೆ ವಿನೀಶ್ ವಿದ್ಯಾಭ್ಯಾಸದಲ್ಲೂ ಮುಂಚೂಣಿಯಲ್ಲಿದ್ದಾರೆ. ತನ್ನ ಒಂಬತ್ತನೇ ವಯಸ್ಸಿನಲ್ಲೇ ವಿನೀಶ್ ಸಾಧನೆ ಅಪಾರವಾದದ್ದು. ರಾಜರಾಜೇಶ್ವರಿ ನಗರದ ಹಿಲ್ ವ್ಯೂವ್ ಸ್ಕೂಲ್ ನಲ್ಲಿ ವಿನೀಶ್ ದರ್ಶನ್ ವ್ಯಾಸಂಗ ಮಾಡುತ್ತಿದ್ದಾರೆ.

ಅಮ್ಮನ ಮುದ್ದಿನ ಮಗ

ಜ್ಯೂನಿಯರ್ ಚಾಲೆಂಜಿಂಗ್ ಸ್ಟಾರ್ ಆಸೆಗಳಿಗೆ ಅಪ್ಪ-ಅಮ್ಮ ಇಬ್ಬರೂ ಸಾಥ್ ನೀಡುತ್ತಿದ್ದಾರೆ. ವಿನೀಶ್ ಆಸಕ್ತಿ ಇರುವ ವಿಚಾರದಲ್ಲಿ ತೊಡಗಿಕೊಳ್ಳಲು ದರ್ಶನ್ ಹಾಗೂ ವಿಜಯಲಕ್ಷ್ಮೀ ಅವಕಾಶ ಮಾಡಿಕೊಡುತ್ತಾರೆ. ಅದರ ಜೊತೆಯಲ್ಲಿ ತಮ್ಮ ಮಗನನ್ನ ಹೀಗೆ ಬೆಳೆಸಬೇಕೆಂಬ ಆಸೆಯನ್ನೂ ಹೊಂದಿದ್ದಾರೆ ಚಾಲೆಂಜಿಂಗ್ ಸ್ಟಾರ್.

English summary
Kannada Actor Challenging star Darshan and Vijayalakshmi's son Vineesh won gold in Karate Competition.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada