twitter
    For Quick Alerts
    ALLOW NOTIFICATIONS  
    For Daily Alerts

    ಡಿ ಬಾಸ್ ಹೊಂದಿರುವ ಪರಿಸರ ಕಾಳಜಿಗೆ ಶಹಭಾಸ್ ಎನ್ನಲೇಬೇಕು

    By Pavithra
    |

    Recommended Video

    ಪರಿಸರ ದಿನಾಚರಣೆ ಬಗ್ಗೆ D -Boss ಏನ್ ಹೇಳಿದ್ದಾರೆ ನೋಡಿ | Filmibeat Kannada

    ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರಾಣಿ ಪ್ರೇಮಿ ಎನ್ನುವುದು ಎಲ್ಲರೂ ಹೊತ್ತಿರುವ ವಿಚಾರ. ಪ್ರಾಣಿಗಳಿಗಾಗಿಯೇ ಪ್ರತ್ಯೇಕ ಸ್ಥಳವನ್ನು ಮಾಡಿಕೊಂಡು ಅಲ್ಲಿ ಸಾಕಷ್ಟು ಪ್ರಾಣಿ ಪಕ್ಷಗಳನ್ನು ದರ್ಶನ್ ಸಾಕುತ್ತಾ ಬಂದಿದ್ದಾರೆ. ಅಲ್ಲದೆ ಅವುಗಳಿಗಾಗಿಯೇ ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡುತ್ತಾರೆ.

    ಇದೇ ನಿಟ್ಟಿನಲ್ಲಿ ಅರಣ್ಯ ಇಲಾಖೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ಕರ್ನಾಟಕ ಅರಣ್ಯ ಇಲಾಖೆಯ ಬ್ರ್ಯಾಂಡ್ ಅಂಬಾಸಿಡರ್ ಆಗಿ ಆಯ್ಕೆ ಮಾಡಿಕೊಂಡಿದೆ. ಈ ವಿಚಾರವಾಗಿ ಈಗಾಗಲೇ ವಿಡಿಯೋ ಶೂಟ್ ಮಾಡಲಾಗಿದ್ದು ಪರಿಸರ ದಿನಾಚರಣೆ ಅಂಗವಾಗಿ ಇಂದು ಆ ವಿಡಿಯೋವನ್ನು ದರ್ಶನ್ ಬಿಡುಗಡೆ ಮಾಡುತ್ತಿದ್ದಾರೆ .

     ಮೈಸೂರು ಮೃಗಾಲಯಕ್ಕೆ 'ದಾಸ' ದರ್ಶನ್ ಬ್ರಾಂಡ್ ಅಂಬಾಸಿಡರ್.! ಮೈಸೂರು ಮೃಗಾಲಯಕ್ಕೆ 'ದಾಸ' ದರ್ಶನ್ ಬ್ರಾಂಡ್ ಅಂಬಾಸಿಡರ್.!

    ದರ್ಶನ್ ಪರಿಸರ ಕಾಳಜಿ ಬಗ್ಗೆ ತಿಳಿದುಕೊಂಡರೆ ನಿಜಕ್ಕೂ ಡಿ ಬಾಸ್ ಮೇಲಿರುವ ಅಭಿಮಾನ ಮತ್ತಷ್ಟು ಹೆಚ್ಚಾಗುತ್ತದೆ. ಹಾಗಾದರೆ, ದಾಸನ ಪರಿಸರ ಪ್ರೀತಿ ಹೇಗಿದೆ ಇಲ್ಲಿದೆ ಸಂಪೂರ್ಣ ಮಾಹಿತಿ ಮುಂದೆ ಓದಿ.

    ದರ್ಶನ್ ಪರಿಸರ ಕಾಳಜಿ ಮೆಚ್ಚಲೇಬೇಕು

    ದರ್ಶನ್ ಪರಿಸರ ಕಾಳಜಿ ಮೆಚ್ಚಲೇಬೇಕು

    ಪ್ರಾಣಿಗಳನ್ನು ಮತ್ತು ಪಕ್ಷಿಗಳನ್ನು ಹೆಚ್ಚಾಗಿ ಪ್ರೀತಿ ಮಾಡುವ ದರ್ಶನ್ ಪರಿಸರವನ್ನು ಅದೇ ರೀತಿಯಲ್ಲಿ ಪ್ರೀತಿ ಮಾಡುತ್ತಾರೆ ಎನ್ನುವ ವಿಚಾರ ಯಾರಿಗೂ ತಿಳಿದಿಲ್ಲ. ಹೌದು, ದರ್ಶನ್ ತಮ್ಮ ಫಾರ್ಮ್ ಹೌಸ್ ನಲ್ಲಿ ಸಾಕಷ್ಟು ಬಗೆಯ ಗಿಡಗಳಿನ್ನು ನೆಡಲು ನಿರ್ಧಾರ ಮಾಡಿದ್ದಾರೆ.

    ಹಸಿರಿನಿಂದ ಕಂಗೊಳಿಸಲಿದೆ ದರ್ಶನ್ ಫಾರ್ಮ್ ಹೌಸ್

    ಹಸಿರಿನಿಂದ ಕಂಗೊಳಿಸಲಿದೆ ದರ್ಶನ್ ಫಾರ್ಮ್ ಹೌಸ್

    ದರ್ಶನ್ ಅವರ ಫಾರ್ಮ್ ಹೌಸ್ ನಲ್ಲಿ ಸುಮಾರು 1800 ಈ ವಿವಿಧ ಜಾತಿಯ ಹಾಗೂ ಅಪರೂಪದ ಗಿಡಗಳು ತಲೆ ಎತ್ತಲಿವೆ. ಈ ಮೂಲಕ ದರ್ಶನ್ ಪರಿಸರ ಪ್ರೇಮಿಯಾಗಿ ಸಾವಿರಾರು ಜನರಿಗೆ ಸ್ಫೂರ್ತಿ ಆಗಲಿದ್ದಾರೆ.

    ಪರಿಸರ ಉಳಿವಿಗಾಗಿ ದರ್ಶನ್ ಧ್ವನಿ

    ಪರಿಸರ ಉಳಿವಿಗಾಗಿ ದರ್ಶನ್ ಧ್ವನಿ

    ದರ್ಶನ್ ಅರಣ್ಯ ಇಲಾಖೆಯ ರಾಯಭಾರಿ ಆಗಿರುವ ಕಾರಣದಿಂದಷ್ಟೆ ಡಿ ಬಾಸ್ ಈ ರೀತಿ ಕೆಲಸ ಮಾಡುತ್ತಿಲ್ಲ. ಅರಣ್ಯ ಇಲಾಖೆಯವರು ದರ್ಶನ್ ಅವರನ್ನು ಸಂಪರ್ಕ ಮಾಡುವ ಮುಂಚೆಯೇ ತಮ್ಮ ಫಾರ್ಮ್ ಹೌಸ್ ನಲ್ಲಿ ವಿವಿಧ ರೀತಿಯ ಗಿಡಗಳನ್ನು ನಡೆಸಲು ದರ್ಶನ್ ನಿರ್ಧಾರ ಮಾಡಿದ್ದರು.

    ಒಂದು ದಿನಕ್ಕೆ ಸೀಮಿತವಾಗದಿರಲಿ

    ''ಪರಿಸರ ಕಾಳಜಿ ಒಂದು ದಿನಕ್ಕೆ ಮಾತ್ರ ಮೀಸಲಾಗದೇ ಪ್ರತಿ ದಿನವೂ ನಮ್ಮ ಸುತ್ತಮುತ್ತಲಿನ ಪರಿಸರ ಹಾಗೂ ಪ್ರಕೃತಿಯನ್ನು ಕಾಪಾಡುವುದು ನಮ್ಮ ಹೊಣೆಯಾಗಿರುತ್ತದೆ. ಮುಂದಿನ ಯುವ ಪೀಳಿಗೆಗಳು ಪುಸ್ತಕದಲ್ಲಿ ಅಥವಾ ಟಿವಿಗಳಲ್ಲಿ ಪ್ರಾಣಿ, ಪಕ್ಷಿ ಹಾಗೂ ಮರಗಳನ್ನು ನೋಡಿ ತಿಳಿದುಕೊಳ್ಳುವಂತಾಗುವುದನ್ನು ನಾವು ಮಾಡುವ ಪರಿಸರ ಕಾಳಜಿಯಿಂದಾಗಿ ನಿಲ್ಲಿಸಬಹುದು'' ಎನ್ನುವುದು ದರ್ಶನ್ ಅವರ ಅಭಿಪ್ರಾಯ.

    English summary
    Kannada actor challenging star Darshan who has been roped in by the karnataka forest department to spread awareness on three planting is sowing the seeds 1800 varieties of saplings at his farmhouse this worlds environment day .
    Tuesday, June 5, 2018, 14:21
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X