ನಮ್ಮನ್ನ ಕಿತ್ಕೊಂಡ್ರು ಅಂತ ಒಬ್ರು ಹೇಳಿದ್ರು, 'ಯಜಮಾನ' ಪೈರಸಿ ಆದಾಗ ಯಾರ್ ಮಾತಾಡ್ರಿ: ದರ್ಶನ್
ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ರಾಬರ್ಟ್ ಸಿನಿಮಾ ಸೂಪರ್ ಸಕ್ಸಸ್ ಕಂಡಿದೆ. ಬಾಕ್ಸ್ ಆಫೀಸ್ ನಲ್ಲಿ ದಾಖಲೆ ಗಳಿಕೆ ಮಾಡಿರುವ ರಾಬರ್ಟ್ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಚಿತ್ರದ ಈ ಗೆಲುವನ್ನು ಸಂಭ್ರಮಿಸಲು ಸಿನಿಮಾ ತಂಡ ಒಟ್ಟಾಗಿ ಮಾಧ್ಯಮದ ಮುಂದೆ ಹಾಜರಾಗಿತ್ತು.
Recommended Video
ಗೆಲುವಿನ ಸಂಭ್ರಮವನ್ನು ಆಚರಿಸಿದ ದರ್ಶನ್ ಮತ್ತು ತಂಡ ಚಿತ್ರದ ಬಗ್ಗೆ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಈ ಸಮಯದಲ್ಲಿ ದರ್ಶನ್ ಪೈರಸಿ ಬಗ್ಗೆಯೂ ಮಾತನಾಡಿದ್ದಾರೆ. ಈಗಾಗಲೇ ರಾಬರ್ಟ್ ಚಿತ್ರದ ಸಾವಿರಕ್ಕೂ ಅಧಿಕ ಪೈರಸಿ ಲಿಂಕ್ ಗಳನ್ನು ಡಿಲೀಟ್ ಮಾಡಿಸಲಾಗಿದೆ. ಆದರೆ ಸಿನಿಮಾ ಚೆನ್ನಾಗಿ ಇದ್ರೆ ನೋಡೆ ನೋಡುತ್ತಾರೆ ಎಂದು ಹೇಳಿದ್ದಾರೆ. ಇದೇ ಸಮಯದಲ್ಲಿ ಯಜಮಾನ ಸಿನಿಮಾ ಪೈರಸಿ ಆದ ಬಗ್ಗೆಯೂ ಮಾತನಾಡಿದ್ದಾರೆ. ಮುಂದೆ ಓದಿ..

ಉಚಿತವಾಗಿ ಕೊಟ್ರು ಸಿನಿಮಾ ನೋಡಲ್ಲ
'ಎಲ್ಲರೂ ಹೇಳುತ್ತಾರೆ ಪೈರಸಿ ಪೈರಸಿ ಅಂತ. ಯಜಮಾನ ಸಿನಿಮಾ ಮೊದಲ ದಿನವೇ ಪೈರಸಿ ಆಯ್ತು. ಯಾರು ಏನು ಮಾತನಾಡಿದ್ರಿ. ಆದರೂ 140 ದಿನ ಸಿನಿಮಾ ಓಡ್ತು. ಸಿನಿಮಾ ಚೆನ್ನಾಗಿ ಇದ್ರೆ, ನಾವೇ ಉಚಿತವಾಗಿ ಕೊಟ್ರು ನೋಡಲ್ಲ. ಕುರುಕ್ಷೇತ್ರ ಕೂಡ ಪೈರಸಿ ಆಗಿತ್ತು' ಎಂದಿದ್ದಾರೆ.

ನಮ್ಮನ್ನ ಕಿತ್ಕೊಂಡ್ರು ಅಂತ ಹೇಳಿದ್ರು
'ಇದರ ಮಧ್ಯದಲ್ಲಿ ಒಬ್ಬರು ಹೇಳಿದ್ರು ನಮ್ಮನ್ನ ಕಿತ್ಕೊಂಡ್ರು ಅಂತ, ನಮಗೆ ಹೀಗೆ ಮಾಡಿದ್ರು ಅಂತೆಲ್ಲ ಹೇಳಿದ್ರು. ನಮಗೆ ಈಗ ಪೈರಸಿ ಮಾಡಿದವರು ತುಂಬಾ ಜನ ಸಿಕ್ಕಿದ್ದಾರೆ. ಒಬ್ಬ ಲಿಂಕ್ ಅನ್ನು ಶೇರ್ ಮಾಡಿದ್ದ. ಆತನನ್ನು ಕರೆದು ಬುದ್ದಿ ಹೇಳಿ, ಬೇಲ್ ಕೊಟ್ಟು ಕಳುಹಿಸಿದ್ವಿ. ಆದರೆ ಇದೇ ನಮ್ಮ ಹುಡುಗ ಮಾಡಿದ್ದಕ್ಕೆ ಆತನನ್ನು ಕರೆದುಕೊಂಡು ಹೋಗಿ ಸ್ಟೇಷನ್‌ನಲ್ಲಿ ಕೂರಿಸಿದ್ರು. ಇದನ್ನು ಯಾರ್ ಹತ್ರ ಹೇಳಲಿ. ನಮ್ಮ ಅನ್ನ ಕಿತ್ಕೊಂಡ್ರು ತುಂಬಾ ಚೆನ್ನಾಗಿ ಹೇಳುತ್ತಾರೆ' ಎಂದು ಫ್ಯಾನ್ಸ್ ಪೈರಸಿ ವಾರ್ ಬಗ್ಗೆ ಮಾತನಾಡಿದ್ದಾರೆ.

ಸಿನಿಮಾದಲ್ಲಿ ಧಮ್ ಇದ್ದಾಗ ಮಾತಾಡಬಾರ್ದು
'ಸಿನಿಮಾದಲ್ಲಿ ಧಮ್ ಇದ್ದಾಗ ಮಾತನಾಡಬಾರ್ದು. ಇದನ್ನ ನಿಲ್ಲಿಸಕ್ಕೆ ಆಗಲ್ಲ. ಇಷ್ಟೆಲ್ಲ ತೆಗಿಸಿದ್ವಿ, ಆದರೂ ಜನ ನೋಡುತ್ತಿದ್ದಾರೆ. ನಾನು ಯಾವತ್ತು ನನ್ನ ಅಭಿಮಾನಿಗಳನ್ನು ಬಿಟ್ಟುಕೊಡಲ್ಲ. ಯಾಕಂದ್ರೆ ಅವರು ಇದ್ರೇನೆ ನಾನು. ಅವರಿಂದನೇ ನಾನು ಅನ್ನ ತಿನ್ನುತ್ತಿರುವುದು' ಎಂದು ಅಭಿಮಾನಿಗಳ ಬಗ್ಗೆ ಮಾತನಾಡಿದ್ದಾರೆ.

ಒಳ್ಳೆ ಸಿನಿಮಾ ಬಂದರೆ ಮತ್ತೊಂದಷ್ಟು ಸಿನಿಮಾ ಎದ್ದೇಳುತ್ತೆ
'ಕನ್ನಡ ಸಿನಿಮಾರಂಗವನ್ನು ಬೆಳೆಸೋಣ. ಒಂದೊಳ್ಳೆ ಸಿನಿಮಾ ಬಂದರೆ ಮತ್ತೊಂದಷ್ಟು ಸಿನಿಮಾ ಹುಟ್ಟುಕೊಳ್ಳುತ್ತೆ. ಯಾಕೆಂದ್ರೆ ಗಾಂಧಿನಗರದಲ್ಲಿ ದುಡ್ಡು ಓಡಾಡುತ್ತೆ. ಒಂದಷ್ಟು ಜನ ಹೀರೋಗಳು ಬರ್ತಾರೆ. ಎಲ್ಲರೂ ನಮ್ಮೋರೆ' ಎಂದು ದರ್ಶನ್ ಹೇಳಿದ್ದಾರೆ.


Click it and Unblock the Notifications











