ಕೊನೆಯ ಆಷಾಢ ಶುಕ್ರವಾರ ಚಾಮುಂಡಿ ತಾಯಿಗೆ ದರ್ಶನ್ ವಿಶೇಷ ಪೂಜೆ
ಚಾಲೆಂಜಿಂಗ್ ಸ್ಟಾರ್ ದರ್ಶನ್ ಚಾಮುಂಡೇಶ್ವರಿ ತಾಯಿಯ ಅಪ್ಪಟ ಭಕ್ತ. ಅದರಲ್ಲು ಆಷಾಢ ಬಂತೆದ್ರೆ ವಿಶೇಷವಾಗಿ ವಿಶೇಷ ಪೂಡೆ ಸಲ್ಲಿಸುತ್ತಾರೆ. ಆಷಾಢದ ಮೊದಲ ಶುಕ್ರವಾರ ಚಾಮುಂಡಿ ಬೆಟ್ಟಕ್ಕೆ ಹೋಗಿ ಅಧಿದೇವತೆಯ ಆರಾಧನೆ ಮಾಡುತ್ತಾರೆ. ಪ್ರತೀ ವರ್ಷ ಮೊದಲ ಆಷಾಢ ಶುಕ್ರವಾರದಂದು ಚಾಮುಂಡಿ ಬೆಟ್ಟಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸುತ್ತಾರೆ.
ಇಂದು ಕೊನೆಯ ಆಷಾಢ ಶುಕ್ರವಾರ. ಕಡೆಯ ಆಷಾಢ ಶುಕ್ರವಾರ ದಿನವು ದರ್ಶನ್ ಚಾಮುಂಡಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಮೈಸೂರಿನಲ್ಲಿರುವ ದರ್ಶನ್ ಫಾರ್ಮ್ ಹೌಸ್ ನಲ್ಲಿ, ಚಾಮುಂಡಿ ತಾಯಿ ವಿಗ್ರಹಕ್ಕೆ ವಿಶೇಷ ಪೂಜೆ ಮಾಡಿದ್ದಾರೆ.
ದರ್ಶನ್ ಜೊತೆಗೆ ಅವರ ಸ್ನೇಹಿತರು ಮತ್ತು ಫಾರ್ಮ್ ಹೌಸ್ ನಲ್ಲಿ ಕೆಲಸ ಮಾಡುವರು ಪೂಜೆಯಲ್ಲಿ ಭಾಗಿಯಾಗಿದ್ದಾರೆ.

ದರ್ಶನ್ ಸದ್ಯ ಕುರುಕ್ಷೇತ್ರ ಚಿತ್ರದ ಪ್ರಮೋಷನ್ ನಲ್ಲಿ ಬ್ಯುಸಿಯಾಗಿದ್ದಾರೆ. ಕೇವಲ ಕನ್ನಡ ಮಾತ್ರವಲ್ಲದೆ ಬೇರೆ ಬೇರೆ ಭಾಷೆಯಲ್ಲಿ ತೆರೆಗೆ ಬರುತ್ತಿರುವ ಕಾರಣ ಪರಭಾಷೆಯಲ್ಲು ಪ್ರಮೋಷನ್ ಮಾಡಬೇಕಾಗಿದೆ. ಈಗಾಗಲೆ ತೆಲುಗು ಟ್ರೈಲರ್ ಅನ್ನು ರಿಲೀಸ್ ಮಾಡಿರುವ ಚಿತ್ರತಂಡ ಇನ್ನು ತಮಿಳು ಮತ್ತು ಹಿಂದಿ ಟ್ರೈಲರ್ ರಿಲೀಸ್ ಮಾಡಬೇಕಿದೆ.
ಪ್ರಮೋಷನ್ ಜೊತೆಗೆ ದರ್ಶನ್ ಸದ್ಯ 'ರಾಬರ್ಟ್' ಚಿತ್ರದ ಚಿತ್ರೀಕರಣದಲ್ಲೂ ಭಾಗಿಯಾಗುತ್ತಿದ್ದಾರೆ. ಕುರುಕ್ಷೇತ್ರ ಸಿನಿಮಾದ ರಿಲೀಸ್ ಡೇಟ್ ಸದ್ಯ ಆಗಸ್ಟ್ 2ರಿಂದ ಆಗಸ್ಟ್ 9 ಪೋಸ್ಟ್ ಪೋನ್ ಆಗಿದೆ. ವರಮಹಾಲಕ್ಷ್ಮಿ ಹಬ್ಬಕ್ಕೆ ಚಿತ್ರ ತೆರೆಗೆ ಬರುತ್ತಿದೆ.


Click it and Unblock the Notifications











