ಗಣೇಶ ಹಬ್ಬಕ್ಕೆ ದರ್ಶನ್ ಸ್ಪೆಷಲ್ ವಿಶ್!

ದೇಶದಾದ್ಯಂತ ಗಣೇಶ ಹಬ್ಬದ ಸಂಭ್ರಮ ಕಳೆಗಟ್ಟುತ್ತಿದೆ. ಕೊರೋನಾ ಕಾರಣದಿಂದಾಗಿ ಕಳೆದ ಎರಡು ವರ್ಷಗಳಿಂದ ಗಣೇಶ ಹಬ್ಬವನ್ನು ಅದ್ದೂರಿಯಾಗಿ ಆಚರಣೆ ಮಾಡಲು ಸಾಧ್ಯವಾಗಿರಲಿಲ್ಲ. ಹಾಗಾಗಿ ಈ ಬಾರಿಯ ಗಣೇಶ ಹಬ್ಬ ಎಲ್ಲರಿಗೂ ಅತ್ಯಂತ ವಿಶೇಷವಾಗಿ ಇರಲಿದೆ.

ಈಗಾಗಲೇ ಮಾರುಕಟ್ಟೆಗೆ ಗಣೇಶನ ಮೂರ್ತಿಗಳು ಬಂದು ಬಿಟ್ಟಿವೆ. ನಾನಾ ವಿನ್ಯಾಸದ, ಹಲವು ರೀತಿಯ, ಹಲವು ಬಣ್ಣಗಳ ಗಣೇಶ ಮಾರುಕಟ್ಟೆಯಲ್ಲಿ ರಾರಾಜಿಸುತ್ತಿದ್ದಾನೆ. ಮನೆ-ಮನೆಗಳಲ್ಲಿ ಮಾತ್ರವಲ್ಲದೆ ಬೀದಿಬೀದಿಗಳಲ್ಲಿ ಗಣೇಶನ ಮಹೋತ್ಸವ ನಡೆಯಲಿದೆ.

ಹಬ್ಬ ಬಂತೂ ಅಂದ್ರೆ ಸಿನಿಮಾರಂಗದಲ್ಲಿ ವಿಶೇಷ ಸಂಭ್ರಮ ಕಳೆಗಟ್ಟುತ್ತದೆ. ಸಿನಮಾ ಮಂದಿ, ಹಬ್ಬದ ಪ್ರಯುಕ್ತ ಫೋಟೋ ಶೂಟ್ ಮಾಡಿಸಿ, ಹಬ್ಬ ಆಚರಿಸಿ ಸಂಭ್ರಮಿಸುತ್ತಾರೆ. ಜೊತೆಗೆ ತಮ್ಮ ಅಭಿಮಾನಿಗಳಿಗಾಗಿ ವಿಶ್ ಮಾಡುತ್ತಾರೆ.

Darshan Special Wish For Fans On Ganesha Festivale

ಈ ಬಾರಿಯ ಗಣೇಶ ಹಬ್ಬಕ್ಕೂ ಕೂಡ ಹಲವು ಸಿನಿಮಾ ತಾರೆಯರು ತಮ್ಮ ಅಭಿಮಾನಿಗಳಿಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ವಿಶೇಷ ಪೋಸ್ಟ್‌ ಮೂಲಕ ಸಂದೇಶವನ್ನೂ ಕೊಟ್ಟಿದ್ದಾರೆ. ನಟ ದರ್ಶನ್ ಕೂಡ ವಿಶೇಷವಾದ ಫೊಟೋವನ್ನು ಹಂಚಿಕೊಂಡು ಪೋಸ್ಟ್ ಹಾಕಿದ್ದಾರೆ.

ಗಣೇಶನ ಮುಂದೆ ಕೈ ಮುಗಿದು ನಿಂತಿರುವ ಫೋಟೋ ಹಾಕಿರುವ ನಟ ದರ್ಶನ್, "ಗೌರಿ ಸುತನಾದ ಶ್ರೀ ವರಸಿದ್ಧಿ ವಿನಾಯಕನು, ನಿಮ್ಮ ಜೀವನದ ಎಲ್ಲಾ ಕಷ್ಟಗಳನ್ನು ದೂರಗೊಳಿಸಿ, ಮಂಗಳಕರ ಆರಂಭವನ್ನು ನೀಡಲೆಂದು ಹಾರೈಸುತ್ತೇನೆ. ಸರ್ವರಿಗೂ ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು" ಎಂದು ನಟ ದರ್ಶನ್ ಬರೆದುಕೊಂಡಿದ್ದಾರೆ.

Darshan Special Wish For Fans On Ganesha Festivale

ಮತ್ತೊಂದು ಕಡೆ ಗಣೇಶ ಹಬ್ಬದ ಜೊತೆಗೆ ನಟ ಪುನೀತ್ ರಾಜ್‌ಕುಮಾರ್ ಚತುರ್ಥಿಯನ್ನು ಆಚರಿಸಿ ಎನ್ನುವ ಅಭಿಯಾನ ಶುರು ಮಾಡಿದ್ದಾರೆ, ನಟ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳು. ಮಾರುಕಟ್ಟೆಯಲ್ಲಿ ಹಲವು ಗಣಪನ ಮೂರ್ತಿಗಳು ಬಂದಿವೆ. ಹಲವರು ಅಪ್ಪು ಮೂರ್ತಿ ಹಿಡಿದು ಫೋಟೋ ಹಂಚಿಕೊಂಡಿದ್ದಾರೆ.

More from Filmibeat

English summary
Darshan Special Wish For Fans On Ganesha Festivale, Know More,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X